Health Tips: ವೈಟ್ ಶುಗರ್ ಬದಲು ಬ್ರೌನ್ ಶುಗರ್ ಬಳಸಿ, ಆರೋಗ್ಯದಲ್ಲಿ ಚಿನ್ನದಂತ ಮೆರಗು ಪಡೆಯಿರಿ
White Sugar Vs Brown Sugar: ಬಿಳಿ ಸಕ್ಕರೆಗಿಂತ ಬ್ರೌನ್ ಶುಗರ್ ಬಳಕೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರ ಸೇವನೆಯು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
Healthy Food Tips: ಕೊರೊನಾ ನಂತರದ ಕಾಲಾವಧಿಯಲ್ಲಿ ನಮ್ಮನ್ನು ನಾವು ಫಿಟ್ ಆಗಿರಿಸಿಕೊಳ್ಳುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಹದಗೆಡುತ್ತಿರುವ ಜೀವನಶೈಲಿ ಮತ್ತು ಜನರ ಕೆಟ್ಟ ಆಹಾರ ಪದ್ಧತಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೆಲ ಜನರು ಆಹಾರದಲ್ಲಿ ಸಿಹಿತಿಂಡಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಮತ್ತು ಸಕ್ಕರೆಯನ್ನು ಸಿಹಿಕಾರಕವಾಗಿ ಬಳಸಲಾಗುತ್ತದೆ. ಆಹಾರದಲ್ಲಿ ಬಿಳಿ ಸಕ್ಕರೆಯ ಬದಲು ಬ್ರೌನ್ ಶುಗರ್ ಬಳಸಬೇಕು ಎಂದು ನೀವು ಆಗಾಗ್ಗೆ ಕೇಳಿರಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡುತ್ತದೆ. ಈ ಕಾರಣದಿಂದಾಗಿ, ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ. ಅನೇಕ ಜನರು ಆರೋಗ್ಯ ತಜ್ಞರ ಸಲಹೆಯನ್ನು ಅನುಸರಿಸಿ ಬ್ರೌನ್ ಶುಗರ್ ಬಳಸುತ್ತಾರೆ, ಆದರೆ ಅವರಿಗೆ ಬಿಳಿ ಸಕ್ಕರೆ ಮತ್ತು ಬ್ರೌನ್ ಶುಗರ್ ನಡುವಿನ ವ್ಯತ್ಯಾಸ ತಿಳಿದಿಲ್ಲ. ಬನ್ನಿ ಈ ಕುರಿತು ತಿಳಿದುಕೊಳ್ಳೋಣ.
ಬಿಳಿ ಸಕ್ಕರೆ ಮತ್ತು ಕಂದು ಸಕ್ಕರೆಯ ನಡುವಿನ ವ್ಯತ್ಯಾಸ
ಬಿಳಿ ಸಕ್ಕರೆ ಮತ್ತು ಕಂದು ಸಕ್ಕರೆಯನ್ನು ತಯಾರಿಸುವ ಆರಂಭಿಕ ಪ್ರಕ್ರಿಯೆಯು ಬಹುತೇಕ ಒಂದೇ ಆಗಿರುತ್ತದೆ. ಆದರೆ ಅಂತಿಮ ಹಂತದಲ್ಲಿ, ಎರಡರಲ್ಲೂ ಸ್ವಲ್ಪ ಬದಲಾವಣೆಗಳನ್ನು ಮಾಡಲಾಗುತ್ತದೆ. ಬೆಲ್ಲದ ಪ್ರಮಾಣವು ಬ್ರೌನ್ ಶುಗರ್‌ನಲ್ಲಿ ಇರುವುದರಿಂದ ಅದು ಕಂದು ಬಣ್ಣದಲ್ಲಿ ರೂಪದಲ್ಲಿರುತ್ತದೆ. ಹೆಚ್ಚಿನ ಮನೆಗಳಲ್ಲಿ ಬಿಳಿ ಸಕ್ಕರೆಯನ್ನು ಬಳಸುತ್ತಾರೆ, ಆದರೆ ಬ್ರೌನ್ ಶುಗರ್ ಪ್ರವೃತ್ತಿ ನಿಧಾನವಾಗಿ ಹೆಚ್ಚುತ್ತಿದೆ.
ಇದನ್ನೂ ಓದಿ-Heart Health: ನೀವೂ ಬಿಸಿಲಲ್ಲಿ ಸುತ್ತಾಡುವುದಿಲ್ಲವೇ... ಈ ಹೊಸ ಅಧ್ಯಯನ ನಿಮಗೆ ತಿಳಿದಿರಲಿ
ಕಂದು ಸಕ್ಕರೆಯ ಪ್ರಯೋಜನಗಳು
ಬಿಳಿ ಸಕ್ಕರೆಗೆ ಹೋಲಿಸಿದರೆ, ಕಂದು ಸಕ್ಕರೆಯು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಕ್ಯಾಲ್ಸಿಯಂ ಸೇರಿದಂತೆ ಇತರ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. ಇದಲ್ಲದೆ, ತಾಮ್ರ, ರಂಜಕ ಮತ್ತು ಕಬ್ಬಿಣವೂ ಇದರಲ್ಲಿ ಕಂಡುಬರುತ್ತದೆ. ಕಂದು ಸಕ್ಕರೆಯಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕಂಡುಬರುತ್ತವೆ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ. ಇದಲ್ಲದೆ ಬ್ರೌನ್ ಶುಗರ್ ಅನ್ನು ಫೇಸ್ ಪ್ಯಾಕ್ ಆಗಿಯೂ ಬಳಸಲಾಗುತ್ತದೆ. ಬ್ರೌನ್ ಶುಗರ್ ಬಳಸುವುದರಿಂದ ತ್ವಚೆಯು ಮೃದು ಮತ್ತು ಹೊಳೆಯುವಂತಾಗುತ್ತದೆ. ಕಂದು ಸಕ್ಕರೆಯನ್ನು ಶುಂಠಿಯೊಂದಿಗೆ ಬೆರೆಸಿ ಸೇವಿಸುವುದರಿಂದ ಶೀತ ಮತ್ತು ಜ್ವರದಂತಹ ರೋಗಗಳನ್ನು ತಡೆಯುತ್ತದೆ. ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ವೈದ್ಯರ ಸಲಹೆ ಮೇರೆಗೆ ಇದನ್ನು ಸೇವಿಸಬಹುದು. ಇದಲ್ಲದೆ, ಇದು ಮಹಿಳೆಯರ ಗರ್ಭಾವಸ್ಥೆಯಲ್ಲಿ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ.
ಇದನ್ನೂ ಓದಿ-Diabetics: ಮಧುಮೇಹಿಗಳಿಗೆ ಪನೀರ್ ಸೇವನೆ ವರದಾನವಿದ್ದಂತೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.