Heart Attack: 4 ವಾರಗಳ ಮೊದಲೇ ಈ ದೊಡ್ಡ ಮುನ್ಸೂಚನೆ ನೀಡುವ ಹೃದಯಾಘಾತ..!
ಹೃದಯಾಘಾತವು ತುಂಬಾ ಅಪಾಯಕಾರಿ, ಇದರಿಂದ ಅನೇಕ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಆದ್ದರಿಂದ ಈ ರೋಗದಿಂದ ತಪ್ಪಿಸಿಕೊಳ್ಳಲು ನೀವು ಅದರ ಅಪಾಯವನ್ನು ಮೊದಲೇ ಗುರುತಿಸಿದರೆ ಉತ್ತಮ.
ನವದೆಹಲಿ: ಹೃದಯಾಘಾತವು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಭಾರತದಲ್ಲಿಯೂ ಈ ಕಾಯಿಲೆ ಹೊಂದಿರುವ ಅನೇಕ ರೋಗಿಗಳಿದ್ದಾರೆ. ನಮ್ಮ ದೇಶದಲ್ಲಿ ಎಣ್ಣೆಯುಕ್ತ ಆಹಾರ ಸೇವನೆಯ ಟ್ರೆಂಡ್ ಹೆಚ್ಚಾಗಿದ್ದು, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಶೇಖರಣೆಯಾಗಲು ಇದೇ ಮೂಲ ಕಾರಣವಾಗಿದೆ. ಅಪಧಮನಿಗಳಲ್ಲಿ ಅಡಚಣೆ ಉಂಟಾದಾಗ ಹೃದಯಕ್ಕೆ ರಕ್ತ ತಲುಪಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚಾಗಿ ನಂತರ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅದನ್ನು ತಪ್ಪಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
ಹೃದಯಾಘಾತದ ಮೊದಲ ಸಂಕೇತಗಳು
ಹೃದಯಾಘಾತವು ಇದ್ದಕ್ಕಿದ್ದಂತೆ ಬರುವುದಿಲ್ಲ. ಹೃದಯಾಘಾತಕ್ಕೂ ಮುನ್ನ ನಿಮಗೆ ಕೆಲವು ಸಂಕೇತಗಳನ್ನು ನೀಡುತ್ತದೆ. ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗುವ ಮುನ್ನ ಹೃದಯವು ಹಲವು ಸಮಸ್ಯೆಗಳನ್ನು ಎದುರಿಸುತ್ತದೆ. ಯಾವಾಗ ಸಮಸ್ಯೆಯು ಕೈ ಮೀರುತ್ತದೆಯೋ ಆಗ ಅದು ದೊಡ್ಡ ಅಪಾಯವನ್ನು ತಂದೊಡ್ಡುತ್ತದೆ. ಹೃದಯಾಘಾತಕ್ಕೂ ಮುನ್ನ ದೇಹವು ನೀಡುವ ಸಂಕೇತಗಳನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚೆಗೆ ಈ ಬಗ್ಗೆ ಮಹಿಳೆಯರ ಮೇಲೆ ಸಂಶೋಧನೆ ನಡೆಸಲಾಗಿದೆ. ಇದರ ಪ್ರಕಾರ ನಮ್ಮ ದೇಹವು ಹೃದಯಾಘಾತಕ್ಕೂ 4 ವಾರಗಳ ಮೊದಲು ಅಪಾಯದ ಮುನ್ಸೂಚನೆಯನ್ನು ನೀಡುತ್ತದಂತೆ.
ಇದನ್ನೂ ಓದಿ: Diabetes ರೋಗಿಗಳು ಈ ರೀತಿ ನಿಮ್ಮ ಹೃದಯದ ಆರೋಗ್ಯವನ್ನು ರಕ್ಷಿಸಿ, ಸ್ವಲ್ಪ ಅಜಾಗರೂಕತೆಯಿಂದ ಪ್ರಾಣಕ್ಕೆ ಕುತ್ತು
ಸಂಶೋಧನೆ ಏನು ಹೇಳುತ್ತದೆ..?
ರಿಸರ್ಚ್ ಜರ್ನಲ್ ಸರ್ಕ್ಯುಲೇಷನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೃದಯಾಘಾತಕ್ಕೆ ಸುಮಾರು 1 ತಿಂಗಳ ಮೊದಲು ಅದರ ಎಚ್ಚರಿಕೆ ಚಿಹ್ನೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಅಧ್ಯಯನವನ್ನು 500ಕ್ಕೂ ಹೆಚ್ಚು ಮಹಿಳೆಯರ ಮೇಲೆ ನಡೆಸಲಾಯಿತು. ಇವರೆಲ್ಲರೂ ಹೃದಯಾಘಾತದ ಅಪಾಯದಿಂದ ರಕ್ಷಿಸಲ್ಪಟ್ಟಿದ್ದಾರೆ. ಸುಮಾರು 95ರಷ್ಟು ಮಹಿಳೆಯರು 1 ತಿಂಗಳ ಹಿಂದೆಯೇ ತಮ್ಮ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು ಎಂದು ಹೇಳಿದ್ದಾರೆ. 71ರಷ್ಟು ಜನರಲ್ಲಿ ದಣಿವು ಕಂಡುಬಂದಿದೆ, 48 ಪ್ರತಿಶತ ಜನರು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದಲ್ಲದೇ ಅನೇಕರಿಗೆ ಎದೆಯಲ್ಲಿ ಒತ್ತಡ, ಎದೆನೋವು ಮುಂತಾದ ಸಮಸ್ಯೆಗಳಿದ್ದವು.
ಹೃದಯಾಘಾತದ ಎಚ್ಚರಿಕೆ ಚಿಹ್ನೆಗಳು
ನಿಮ್ಮ ದೇಹದಲ್ಲಿ ಈ ಕೆಳಗಿನ ಯಾವುದೇ ಸಮಸ್ಯೆಗಳಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಮತ್ತು ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿರಿ. ಏಕೆಂದರೆ ಇವು ಹೃದಯಾಘಾತದ ಸಂಕೇತವಾಗಿರಬಹುದು.
1. ಹೃದಯ ಬಡಿತ
2. ಹಸಿವಿನ ಕೊರತೆ
3. ಕೈ ಕಾಲುಗಳಲ್ಲಿ ಜುಮ್ಮೆನ್ನುವುದು
4. ರಾತ್ರಿ ಉಸಿರಾಟದ ತೊಂದರೆ
5. ಕೈಗಳಲ್ಲಿ ದೌರ್ಬಲ್ಯ ಅಥವಾ ಭಾರ
6. ಆಯಾಸ
7. ನಿದ್ರೆಯ ಕೊರತೆ
8. ಅಜೀರ್ಣ
9. ಖಿನ್ನತೆ
10. ದೃಷ್ಟಿ ದುರ್ಬಲಗೊಳ್ಳುವುದು
ಇದನ್ನೂ ಓದಿ: Raisin Water Benefits: ಪೋಷಕಾಂಶಭರಿತ ಒಣದ್ರಾಕ್ಷಿ ನೀರು ಕುಡಿದರೆ ಸಿಗುವುದು ಊಹಿಸಲೂ ಸಾಧ್ಯವಾಗದಷ್ಟು ಪ್ರಯೋಜನ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.