ಹೃದಯಾಘಾತದ ಮುನ್ಸೂಚನೆಯನ್ನು ನಿಮ್ಮ ಚರ್ಮವೂ ನೀಡುತ್ತದೆ! ಎಚ್ಚರ
Signs of Heart Attack :ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎನ್ನುವುದನ್ನು ಪದೇ ಪದೇ ಕೇಳುತ್ತಿರುತ್ತೇವೆ. ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಈ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಹೃದಯಾಘಾತಕ್ಕೂ ಮುನ್ನ ದೇಹ ನಮಗೆ ಅನೇಕ ಮುನ್ಸೂಚನೆ ನೀಡುತ್ತದೆ.
ಬೆಂಗಳೂರು : ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗದೇ ಹೋದಾಗ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ. ಹೃದಯ ಹೀಗೆ ಕೆಲಸ ಮಾಡುವುದನ್ನು ನಿಲ್ಲಿಸುವುದಕ್ಕೆ ಹೃದಯಾಘಾತ ಎನ್ನುತ್ತಾರೆ. ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಲಕ್ಷಣಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಹ ನೀಡುವ ಈ ಮುನ್ಸೂಚನೆ ಗಳನ್ನು ಅರ್ಥ ಮಾಡಿಕೊಂಡರೆ ಸಂಭವಿಸಬಹುದಾದ ದೊಡ್ಡ ಅಪಘಾತವನ್ನು ತಡೆಯಬಹುದು.
ಹೃದಯಾಘಾತದ ಇತರ ಲಕ್ಷಣಗಳು :
ಎದೆನೋವಿನ ಹೊರತಾಗಿ, ಹೃದಯಾಘಾತಕ್ಕೂ ಮೊದಲು ಅನೇಕ ಲಕ್ಷಣಗಳು ಕಾಣಿಸುತ್ತವೆ. ಚರ್ಮವು ತಿಳಿ ಬೂದು ಬಣ್ಣಕ್ಕೆ ತಿರುಗುತ್ತದೆ. ಪದೇ ಪದೇ ವಿನಾ ಕಾರಣ ಬೆವರೂ ಬರುತ್ತದೆ. ವಾಕರಿಕೆ,, ಉಸಿರಾಟದಲ್ಲಿ ತೊಂದರೆ, ಆತಂಕ, ತಲೆಸುತ್ತುವುದು ಮುಂತಾ ಲಕ್ಷಣಗಳು ಕಾಣಿಸುತ್ತವೆ.
ಇದನ್ನೂ ಓದಿ : ಬಿಳಿ ಕೂದಲಿನ ಶಾಶ್ವತ ಪರಿಹಾರಕ್ಕೆ ಸೇವಿಸಿ ಈ ಆಹಾರಗಳನ್ನು
ಮಹಿಳೆ ಮತ್ತು ಪುರುಷರಲ್ಲಿ ಭಿನ್ನವಾಗಿರುತ್ತದೆ ಈ ಲಕ್ಷಣಗಳು :
ಪುರುಷರಿಗೆ ಹೃದಯಾಘಾತಕ್ಕೂ ಮುನ್ನ ಎದೆ ನೋವು ಕಾಣಿಸಿಕೊಂಡರೆ, ಮಹಿಳೆಯರಿಗೆ ಉಸಿರಾಟದ ತೊಂದರೆ, ಕುತ್ತಿಗೆ ಮತ್ತು ದವಡೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಬ್ಲಡ್ ಶುಗರ್ :
ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಇನ್ನೊಂದು ಕಾರಣವೆಂದರೆ ಮಧುಮೇಹ. ಮಧುಮೇಹ ಹೃದಯಾಘಾತದ ಅತ್ಯಂತ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ ರೋಗಿಗೆ ಸೌಮ್ಯವಾದ ಎದೆಯುರಿ ಅಥವಾ ಎದೆ ನೋವು ಕಾಣಿಸುತ್ತದೆ. ಬಹುತೇಕ ಮಂದಿ ಈ ಹಂತವನ್ನು ನಿರ್ಲಕ್ಷಿಸಿ ಬಿಡುತ್ತಾರೆ.
ಅಪಾಯವನ್ನು ಕಡಿಮೆ ಮಾಡುವುದು ಹೇಗೆ ?
ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಸಹಾಯದಿಂದ ಮಾತ್ರ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ದೇಹ ತೂಕವನ್ನು ಕಾಪಾಡಿಕೊಳ್ಳುವುದು, ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಈ ಅಪಾಯವನ್ನು ತಳ್ಳಿ ಹಾಕಬಹುದು.
ಇದನ್ನೂ ಓದಿ : Diabetes: ಬೇಸಿಗೆಯಲ್ಲಿ ಮಧುಮೇಹವನ್ನು ನಿಯಂತ್ರಿಸುವ 5 ಸುಲಭ ವಿಧಾನಗಳು
ತರಕಾರಿಗಳ ಸೇವನೆ :
ಆಹಾರದಲ್ಲಿ ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ತರಕಾರಿಗಳು ಅನೇಕ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಆರೋಗ್ಯಕರ ಆಹಾರವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.