ನಿಮಗೆ ಬೆಳಿಗ್ಗೆ ಎದ್ದಾಗ ದೇಹದಲ್ಲಿ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತಾ?... ಹಾಗಿದ್ದರೆ ಎಚ್ಚರದಿಂದಿರಿ
Heart Attack: ಇತ್ತೀಚಿನ ಜನರ ಜೀವನ ಶೈಲಿಯಿಂದಾಗಿ ಅನೇಕ ರೋಗಗಳು ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿವೆ.. ಅದರಲ್ಲಿ ಹೃದಯಾಘಾತವೂ ಒಂದು.. ನಿಮಗೆ ಎಂದಾದರೂ ಬೆಳೆಗ್ಗೆ ಎದ್ದ ತಕ್ಷಣ ಈ ಲಕ್ಷಣಗಳು ಕಾಣಿಸಿಕೊಂಡರೇ ಎಂದಿಗೂ ನಿರ್ಲಕ್ಷಿಸಬೇಡಿ..
Heart Attack Symtoms in Youths: ಒಂದು ಕಾಲದಲ್ಲಿ ಹೃದಯಾಘಾತವು 60 ವರ್ಷಕ್ಕಿಂತ ಮೇಲ್ಪಟ್ಟವರ ಕಾಯಿಲೆ ಎಂದು ಭಾವಿಸಲಾಗಿತ್ತು. ಆದರೆ ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಈಗ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ.
ಹಾಗಾದರೆ ಈ ಹೃದಯಾಘಾತವನ್ನು ಸೂಚಿಸುವ ಆ ಚಿಹ್ನೆಗಳು ಯಾವವು.. ವಯಸ್ಕರಲ್ಲಿ ಯಾವ ರೀತಿಯ ಸೂಚನೆಗಳನ್ನು ನೀಡಿ ಹೃದಯಾಘಾತ ಸಂಭವಿಸುತ್ತದೆ.. ಎನ್ನುವುದರ ಪೂರ್ತಿ ವಿವರ ಇಲ್ಲಿದೆ..
ಇದನ್ನೂ ಓದಿ-ದೇವರಂತೆ ಪೂಜಿಸುವ ಅರಳಿ ಮರದಲ್ಲಿ ಅಡಗಿದೆ ಅದ್ಭುತ ಔಷಧೀಯ ಗುಣಗಳು..!
ಬೆಳಿಗ್ಗೆ ಅತಿಯಾದ ಬೆವರು: ಮನೆಯಲ್ಲಿ ಸಾಮಾನ್ಯ ತಾಪಮಾನದಲ್ಲಿ ಮಲಗುವಾಗ ಸ್ವಲ್ಪ ಬೆವರುವುದು ಸಹಜ. ಆದರೆ ರಾತ್ರಿ ಮಲಗುವಾಗ ಒಂದೆ ಸಮನೇ ಬೆವರಲಾರಂಭಿಸಿದರೆ ಅದು ಆತಂಕದ ಸಂಗತಿ. ಅಂತಹ ಪರಿಸ್ಥಿತಿಯಲ್ಲಿ, ನೀವು ವೈದ್ಯರನ್ನು ಭೇಟಿ ಮಾಡಬೇಕು.
ದೇಹದ ಎಡಭಾಗದಲ್ಲಿ ನೋವು: ಬೆಳಿಗ್ಗೆ ಎದ್ದಾಗ ಎಡಭಾಗದಲ್ಲಿ ನೋವು ಕಾಣಿಸಿಕೊಂಡರೆ, ಅಪ್ಪಿ ತಪ್ಪಿಯೂ ಅದನ್ನು ನಿರ್ಲಕ್ಷಿಸಬೇಡಿ. ಈ ನೋವು ನಿಮ್ಮ ಕೈ, ತೋಳು, ಭುಜ, ದವಡೆ ಅಥವಾ ಮೊಣಕೈ ಬಳಿ ಸಂಭವಿಸಬಹುದು. ಇದು ಹೃದಯಾಘಾತದ ಸಂಕೇತವಾಗಿರಬಹುದು.
ಇದನ್ನೂ ಓದಿ-ತೆಂಗಿನಕಾಯಿಯನ್ನು ಈ ರೀತಿ ಬಳಸಿದರೆ ಸಣ್ಣಗಾಗುವುದು ಗ್ಯಾರಂಟಿ ! ಇಂದಿನಿಂದಲೇ ತಿನ್ನಲು ಶುರು ಮಾಡಿ !
ಉಸಿರಾಟದ ತೊಂದರೆ: ಬೆಳಿಗ್ಗೆ ಆಳವಾದ ಉಸಿರನ್ನು ತೆಗೆದುಕೊಳ್ಳಲು ನಿಮಗೆ ಕಷ್ಟವಾಗಿದರೆ ಎಚ್ಚರದಿಂದಿರಿ. ಈ ರೀತಿಯ ಸಮಸ್ಯೆ ಕೆಲವೊಮ್ಮೆ ಹೃದಯಾಘಾತದ ಲಕ್ಷಣವಾಗಿರಬಹುದು. ವಾಸ್ತವವಾಗಿ, ರಕ್ತನಾಳಗಳಲ್ಲಿ ಅಡೆತಡೆಗಳು ಸಂಭವಿಸಿದಾಗ, ಆಮ್ಲಜನಕದ ಪೂರೈಕೆಯು ನಿಲ್ಲುತ್ತದೆ.. ಇದರಿಂದ ಎದೆಯಲ್ಲಿ ನೋವು ಮತ್ತು ಭಾರವನ್ನು ಉಂಟುಮಾಡುತ್ತದೆ.
ಮಾನಸಿಕ ಆರೋಗ್ಯದ ಲಕ್ಷಣಗಳು: ತಲೆ ಭಾರ, ಗೊಂದಲ, ಉದ್ವೇಗ ಅಥವಾ ಬೆಳಿಗ್ಗೆ ಅತಿಯಾದ ಆತಂಕದಂತಹ ಲಕ್ಷಣಗಳು ಒಳ್ಳೆಯದಲ್ಲ. ನೀವು ನಿಧಾನವಾಗಿ ಹೃದಯಾಘಾತದತ್ತ ಸಾಗುತ್ತಿರುವಿರಿ ಎಂಬುದರ ಸಂಕೇತ ಇದು. ಇಂತಹ ಸಂದರ್ಭದಲ್ಲಿ ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಬೇಕಾಗಿರುತ್ತದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ