Beauty Tips : ತುಟಿಗಳು ಮನುಷ್ಯನ ಸೌಂದರ್ಯದ ಒಂದುಭಾಗ. ಅವು ಸುಂದರವಾಗಿದ್ದರೆ ಮುಖವು ಸುಂದರವಾಗಿ ಕಾಣುತ್ತದೆ. ಆದರೆ ಕೆಲವು ನೈಸರ್ಗಿಕ ಅಂಶಗಳಿಂದ ತುಟಿಗಳು ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಕೆಲವು ಮನೆಮದ್ದುಗಳ ಮೂಲಕ ನಿಮ್ಮ ತುಟಿಗಳನ್ನು ನಯವಾಗಿಸಿಕೊಳ್ಳಿ. 


COMMERCIAL BREAK
SCROLL TO CONTINUE READING

ಸಾಸಿವೆ ಎಣ್ಣೆ: ಬೆಳಿಗ್ಗೆ ಮತ್ತು ರಾತ್ರಿ ತುಟಿಗಳನ್ನು ಶುಚಿಗೊಳಿಸಿ ಅದಕ್ಕೆ ಉಗುರುಬೆಚ್ಚಗಿನ ಸಾಸಿವೆ ಎಣ್ಣೆಯನ್ನು ಹಚ್ಚುವುದರಿಂದ ತುಟಿಗಳು ಮೃದುವಾಗುತ್ತದೆ ಮತ್ತು ಒಡೆದು ಹೋಗುವುದು ನಿಲ್ಲುತ್ತದೆ. 


ಇದನ್ನೂ ಓದಿ-Weight Loss Tipes: ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕೆ ಹಾಗಿದ್ದರೆ ಇಲ್ಲಿದೆ ಸಿಂಪಲ್‌ ಟಿಪ್ಸ್..!


ಗುಲಾಬಿ: ಗುಲಾಬಿ ದಳಗಳನ್ನು ಚೆನ್ನಾಗಿ ತೊಳೆಯಿರಿ. ಇದರ ನಂತರ, ಅವುಗಳನ್ನು ಕೆಲವು ಗಂಟೆಗಳ ಕಾಲ ಹಾಲಿನಲ್ಲಿ ಮುಳುಗಿಸಿ. ನೀವು ಅವುಗಳನ್ನು ಗ್ಲಿಸರಿನ್‌ನಲ್ಲಿ ಅದ್ದಬಹುದು. ಈ ಗುಲಾಬಿ ದಳಗಳನ್ನು ಮ್ಯಾಶ್ ಮಾಡುವ ಮೂಲಕ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ದಿನಕ್ಕೆ 2 ರಿಂದ 3 ಬಾರಿ ಮತ್ತು ಪ್ರತಿ ರಾತ್ರಿ ಮಲಗುವ ಮೊದಲು ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಿ. 


ಜೇನುತುಪ್ಪ: ಜೇನುತುಪ್ಪವನ್ನು ತುಟಿಗಳ ಮೇಲೆ ಹಚ್ಚುವುದು ಕೂಡ ಪ್ರಯೋಜನಕಾರಿ. ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಇರಿಸಿ. ಸಮಯ ಮುಗಿದ ನಂತರ ನೀರುಹಾಕಿ ಹತ್ತಿಯ ಸಹಾಯದಿಂದ ನಿಮ್ಮ ತುಟಿಗಳನ್ನು ಸ್ವಚ್ಛಗೊಳಿಸಿ. 


ಪಪ್ಪಾಯಿ: ಒಣ ತುಟಿಗಳನ್ನು ಗುಣಪಡಿಸಲು ಪಪ್ಪಾಯಿ ನೈಸರ್ಗಿಕ ಪರಿಹಾರವಾಗಿದೆ. ತುರಿದ ಪಪ್ಪಾಯಿಯ ಪೇಸ್ಟ್ ಅನ್ನು ತುಟಿಗಳ ಮೇಲೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಒಣಗಲು ಬಿಡಿ. 


ಇದನ್ನೂ ಓದಿ-Health Tips: ಸ್ಟೀಲ್ ಪಾತ್ರೆಯಲ್ಲಿ ಆಹಾರ ಬೇಯಿಸುವುದರಿಂದಾಗುವ ಈ ಅಡ್ಡ ಪರಿಣಾಮಗಳು ನಿಮಗೂ ಗೊತ್ತಿರಲಿ!


ಸೌತೆಕಾಯಿ: ಒಣ ತುಟಿಗಳ ಮೇಲೆ ಸೌತೆಕಾಯಿಯ ಚಿಕ್ಕ ತುಂಡನ್ನು ಹಚ್ಚಿದ ನಂತರ 15-20 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ. ಈ ಪ್ರಕ್ರಿಯೆಯನ್ನು ದಿನಕ್ಕೆ ಹಲವಾರು ಬಾರಿ ಪುನರಾವರ್ತಿಸಬೇಕು. ಒಣ ತುಟಿಗಳಿಗೆ ಸೌತೆಕಾಯಿ ಪರಿಹಾರ ನೀಡುತ್ತದೆ.


ರೋಸ್ ವಾಟರ್ ಮತ್ತು ತುಳಸಿ: ಒಂದು ಪಾತ್ರೆಯಲ್ಲಿ 2 ಚಮಚ ರೋಸ್ ವಾಟರ್ ತೆಗೆದುಕೊಂಡು ಅದರಲ್ಲಿ 8 ರಿಂದ 10 ತಾಜಾ ತುಳಸಿ ಎಲೆಗಳನ್ನು ಹಾಕಿ 10 ರಿಂದ 15 ನಿಮಿಷಗಳ ಕಾಲ ಬಿಡಿ. ಈಗ ಆ ರೋಸ್ ವಾಟರ್ ಅನ್ನು ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಿ. ಈ ಪ್ರಕ್ರಿಯೆಯನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಪುನರಾವರ್ತಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.