Sprouted Wheat Benefits: ಗೋಧಿ ಆರೋಗ್ಯಕರ ಧಾನ್ಯವಾಗಿದೆ. ಇದನ್ನು ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಗೋಧಿ ಹಿಟ್ಟಿನಿಂದ ಅನೇಕ ರುಚಿಕರವಾದ ಆಹಾರಗಳನ್ನು ತಯಾರಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ಈ ಧಾನ್ಯದಿಂದ ತಯಾರಿಸಿದ ಚಪಾತಿಯನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಗೋಧಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ನೀವು ಎಂದಾದರೂ ಮೊಳಕೆಯೊಡೆದ ಗೋಧಿಯನ್ನು ಸೇವಿಸಿದ್ದೀರಾ? ನಮ್ಮಲ್ಲಿ ಹೆಚ್ಚಿನವರು 'ಇಲ್ಲ' ಎಂಬ ಉತ್ತರವನ್ನು ನೀಡುವರು.


COMMERCIAL BREAK
SCROLL TO CONTINUE READING

ಮೊಳಕೆಯೊಡೆದ ಗೋಧಿಯ ಪ್ರಯೋಜನಗಳು : 


ತೂಕ ನಿಯಂತ್ರಣ: ತೂಕ ಹೆಚ್ಚಾಗುವುದು ಹೊಸ ಸಮಸ್ಯೆಯಲ್ಲ. ಜನರ ದೈಹಿಕ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ತೂಕ ಹೆಚ್ಚಳವಾಗುತ್ತದೆ. ನೀವು ಮೊಳಕೆಯೊಡೆದ ಗೋಧಿಯನ್ನು ಸೇವಿಸುವುದರಿಂದ ತೂಕ ನಿಯಂತ್ರಿಸಬಹುದು. ಬೆಳಗಿನ ಉಪಾಹಾರದಲ್ಲಿ ಮೊಳಕೆಯೊಡೆದ ಗೋಧಿ ತಿನ್ನುವುದು ಉತ್ತಮ. ಇದರಿಂದ ಶಕ್ತಿಯು ದಿನವಿಡೀ ಹಾಗೇ ಉಳಿಯುತ್ತದೆ. ದೀರ್ಘಕಾಲ ಹಸಿವನ್ನು ಅನುಭವಿಸುವುದಿಲ್ಲ.ಇದನ್ನು ಸೇವಿಸುವುದರಿಂದ ಕ್ರಮೇಣ ತೂಕವು ಕಡಿಮೆಯಾಗಲು ಪ್ರಾರಂಭಿಸುತ್ತದೆ.


ಇದನ್ನೂ ಓದಿ: ಮುಖದಲ್ಲಿ ಕಂಡುಬರುವ ಈ ಬದಲಾವಣೆಯನ್ನು ನಿರ್ಲಕ್ಷಿಸಬೇಡಿ.!


ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ: ಯಾವಾಗಲೂ ಹೊಟ್ಟೆ ನೋವನ್ನು ಅನುಭವಿಸುವ ಜನರು ತಮ್ಮ ದೈನಂದಿನ ಆಹಾರದಲ್ಲಿ ಮೊಳಕೆಯೊಡೆದ ಗೋಧಿಯನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ಇದು ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ. ಮಲಬದ್ಧತೆ, ಆಮ್ಲೀಯತೆ, ಗ್ಯಾಸ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.


ಮೂಳೆಗಳು ಬಲವಾಗಿರುತ್ತವೆ: ವಯಸ್ಸು ಹೆಚ್ಚಾದಂತೆ ಮೂಳೆಗಳು ಮೊದಲಿನಂತೆ ಗಟ್ಟಿಯಾಗಿ ಉಳಿಯದೇ ಕ್ರಮೇಣ ದೇಹದಲ್ಲಿ ದೌರ್ಬಲ್ಯ ಬರಲು ಆರಂಭಿಸುತ್ತದೆ. ಇದನ್ನು ತಪ್ಪಿಸಲು ಬೆಳಗ್ಗೆ ಎದ್ದು ಮೊಳಕೆ ಬರಿಸಿದ ಗೋಧಿಯನ್ನು ತಿನ್ನಬೇಕು. ಏಕೆಂದರೆ ಹೀಗೆ ಮಾಡುವುದರಿಂದ ಮೂಳೆಗಳಿಗೆ ಅಗಾಧವಾದ ಶಕ್ತಿ ಬರುತ್ತದೆ. ಇದು ಮೂಳೆಯ ಆರೋಗ್ಯಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಕಂಡುಬರುತ್ತದೆ. 


ಇದನ್ನೂ ಓದಿ: ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಕೇವಲ ಈ ಒಂದು ಕೆಲಸ ಮಾಡಿ ಸಾಕು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.