ಈ ಕೆಂಪು ಹೂವು ಕೂದಲಿನಿಂದ ಹಿಡಿದು ನಿಮ್ಮ ಆರೋಗ್ಯವನ್ನು ಗಟ್ಟಿ ಮಾಡುತ್ತೆ..!
Hibiscus health Benefits : ಕೆಲವೊಂದಿಷ್ಟು ಹೂಗಳು ನಮ್ಮ ಮನೆ ಇಲ್ಲವೇ ಹಿತ್ತಲಲ್ಲಿ ಇರುತ್ತವೆ. ಅವುಗಳನ್ನು ಬರೀ ಪೂಜೆಗೆ ಅಷ್ಟೇ ಅಲ್ಲ ಆರೋಗ್ಯಕ್ಕೂ ಉಪಯೋಗಕ್ಕೆ ಬರುತ್ತವೆ.. ಈ ಪೈಕಿ ಈ ಕೆಂಪು ಹೂವು ನಿಮ್ಮ ಆರೋಗ್ಯ ರಕ್ಷಣೆಗೆ ಅದ್ಭುತ ಪ್ರಯೋಜನ ನೀಡುತ್ತದೆ.. ಹಾಗಿದ್ರೆ ಆ ಹೂವು ಯಾವುದು.. ಅದರ ಆರೋಗ್ಯ ಪ್ರಯೋಜನು ಏನು ತಿಳಿಯೋಣ.. ಬನ್ನಿ...
Hibiscus Benefits : ಮನೆಯ ಮುಂದೆ ಇಲ್ಲವೇ ಮನೆಯ ಮುಂದೆ ಬೆಳೆಸಬಹುದಾದ ಕೆಲವು ಹೂವುಗಳು ಬರೀ ದೇವರಿಗೆ ಅರ್ಪಿಸಲು ಅಲ್ಲ, ಆರೋಗ್ಯಕ್ಕೂ ಸಹ ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ. ಅದರಂತೆ ದಾಸವಾಳದ ಹೂವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಕುರಿತು ಇಂಟ್ರಸ್ಟಿಂಗ್ ವಿಚಾರಗಳು ಇಲ್ಲಿವೆ..
ಹೌದು.. ದಾಸವಾಳ ಹೂವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಒಂದು ಸುಂದರವಾದ ಹೂವು. ಇದು ಸಾಮಾನ್ಯವಾಗಿ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಬಿಳಿ, ಹಳದಿ ಮತ್ತು ಕಿತ್ತಳೆ ಬಣ್ಣದ ದಾಸವಾಳ ಹೂವುಗಳು ಸಹ ಇವೆ. ದಾಸವಾಳದ ಹೂವನ್ನು ಚಹಾ, ಜ್ಯೂಸ್, ಕರಿಗಳಲ್ಲಿಯೂ ಬಳಸಬಹುದು.
ಇದನ್ನೂ ಓದಿ:ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ
ಈ ಹೂವಿನ ಸೇವನೆಯಿಂದ ನಾವು ಅನೇಕ ಆರೋಗ್ಯ ಲಾಭವನ್ನ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಹೂವಿನಿಂದ ಗಂಭೀರ ಕಾಯಿಲೆಗಳನ್ನು ಸಹ ಗುಣಪಡಿಸಬಹುದು. ಇದರಿಂದ ಆಗುವ ಆರೋಗ್ಯಕಾರಿ ಪ್ರಯೋಜನಗಳನ್ನು ಯಾವುವು ಅಂತ ತಿಳಿಯೋಣ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ದಾಸವಾಳ ಹೂವು ಆಂಟಿಹೈಪರ್ಟೆನ್ಸಿವ್ ಗುಣಗಳನ್ನು ಹೊಂದಿದ್ದು, ಇವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ : ದಾಸವಾಳ ಹೂವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸುತ್ತದೆ.
ಉರಿಯೂತದ ಗುಣಲಕ್ಷಣಗಳು: ದಾಸವಾಳ ಹೂವು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ. ಅಲ್ಲದೆ, ಕೀಲು ನೋವು, ಸಂಧಿವಾತ ಮತ್ತು ಇತರ ಉರಿಯೂತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:RO ನೀರು ಕುಡಿಯುವವರಿಗೆ ವಿಟಮಿನ್ ಬಿ 12 ಕೊರತೆಯ ಅಪಾಯ ಹೆಚ್ಚು...!
ರೋಗ ನಿರೋಧಕ ಗುಣಲಕ್ಷಣಗಳು: ದಾಸವಾಳ ಹೂವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ತಡೆಗಟ್ಟುತ್ತದೆ: ದಾಸವಾಳ ಹೂವಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ.
ತೂಕ ನಷ್ಟ: ದಾಸವಾಳದ ಹೂವು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಯಕೃತ್ತಿನ ಆರೋಗ್ಯ : ಈ ಹೂವು ಯಕೃತ್ತಿನ ಆರೋಗ್ಯವನ್ನು ಸುಧಾರಿಸಲು ಮತ್ತು ಯಕೃತ್ತಿನ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಕೂದಲಿನ ಆರೋಗ್ಯ : ದಾಸವಾಳ ಹೂವು ಕೂದಲಿನ ಬೆಳವಣಿಗೆಗೆ ಒಂದು ಉತ್ತಮ ಔಷಧಿ. ಇದು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಸೂಚನೆ : ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ದಾಸವಾಳದ ಹೂವನ್ನು ಬಳಸಬಾರದು. ದಾಸವಾಳದ ಹೂವಿನಿಂದ ನಿಮಗೆ ಅಲರ್ಜಿ ಇದೆಯೇ ಎಂದು ಮೊದಲು ನೀವು ತಿಳಿದುಕೊಳ್ಳಬೇಕು. ದಾಸವಾಳದ ಹೂವಿನ ಅತಿಯಾದ ಬಳಕೆಯು ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ದಾಸವಾಳ ಹೂವನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.