ಮೈ ಮೇಲೆ ಈ ಲಕ್ಷಣಗಳು ಕಾಣಿಸಿಕೊಂಡರೆ ಶುಗರ್ ಹೆಚ್ಚಾಗಿದೆ ಎಂದರ್ಥ :ಟೆಸ್ಟ್ ಮಾಡಿಸದೆಯೇ ಕಂಡುಹಿಡಿಯಿರಿ ಮಧುಮೇಹ ಇರುವುದನ್ನು
High Blood Sugar Symptoms in Skin : ನಿಮ್ಮ ಚರ್ಮದ ಮೇಲೆಯೂ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ಅದನ್ನು ನಿರ್ಲಕ್ಷಿಸಬೇಡಿ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಚರ್ಮದ ಮೂಲಕವೇ ಕಂಡು ಬರುವ ಕೆಲವು ಲಕ್ಷಣಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.
High Blood Sugar Symptoms in Skin : ದೇಹದಲ್ಲಿ ಶುಗರ್ ಹೆಚ್ಚಾಗುತ್ತಿದ್ದ ಹಾಗೆ ಬೇರೆ ಬೇರೆ ಕಾಯಿಲೆಗಳ ಅಪಾಯ ಕೂಡಾ ಕಾಡಲು ಆರಂಭವಾಗುತ್ತದೆ. ಶುಗರ್ ಹೆಚ್ಚಾದಾಗ ದೇಹ ನಮಗೆ ಅನೇಕ ರೀತಿಯಲ್ಲಿ ಸೂಚನೆ ನೀಡುತ್ತದೆ. ನಾವು ಅದನ್ನು ಕಂಡುಕೊಳ್ಳಬೇಕು. ಅದೇ ರೀತಿ ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಡರ್ಮೋಪತಿಯ ಅಪಾಯ ಕೂಡಾ ಕಾಡುತ್ತದೆ.ಇದು ಮಧುಮೇಹದಿಂದ ಉಂಟಾಗುವ ಚರ್ಮದ ಕಾಯಿಲೆಯಾಗಿದೆ.ನಿಮ್ಮ ಚರ್ಮದ ಮೇಲೆಯೂ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ಅದನ್ನು ನಿರ್ಲಕ್ಷಿಸಬೇಡಿ.ಇದರಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗಬಹುದು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಚರ್ಮದ ಮೂಲಕವೇ ಕಂಡು ಬರುವ ಕೆಲವು ಲಕ್ಷಣಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.
ಮಂಡಿಯ ಚರ್ಮ :
ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಮಂಡಿಯ ಚರ್ಮದ ಮೇಲೆ ಸಣ್ಣ ಕಪ್ಪು ಮತ್ತು ಕಂದು ಬಣ್ಣದ ಗಾಯಗಳು ಕಾಣಿಸಿಕೊಳ್ಳುತ್ತವೆ.ಅಂತಹ ಚಿಹ್ನೆಗಳು ಡರ್ಮೋಪತಿಯ ಕಾರಣದಿಂದಾಗಿರಬಹುದು. ಅಂತಹ ಚಿಹ್ನೆಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಬೇಡಿ.ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು.
ಇದನ್ನೂ ಓದಿ : ಬೆಳಗ್ಗೆ ಎದ್ದ ಕೂಡಲೇ ಈ ಬಳ್ಳಿ ಎಲೆಯನ್ನು ಜಗಿದು ರಸ ಕುಡಿದುಬಿಡಿ ! ಪಥ್ಯವೇ ಇಲ್ಲದೆ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್
ಗಾಯಗಳು ಮತ್ತು ಹುಣ್ಣುಗಳು :
ದೇಹದಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾದಾಗ,ಚರ್ಮದ ಮೇಲೆ ಗಾಯಗಳು ಮತ್ತು ಹುಣ್ಣುಗಳು ಕಾಣಿಸಿಕೊಳ್ಳುತ್ತವೆ.ಈ ಗಾಯಗಳು ಬೇಗ ವಾಸಿಯಾಗುವುದಿಲ್ಲ.ನಿಮ್ಮ ಚರ್ಮದ ಮೇಲೆ ಗಾಯಗಳು ರೂಪುಗೊಂಡರೆ, ತಜ್ಞ ವೈದ್ಯರ ಸಲಹೆ ಪಡೆಯಿರಿ.
ಸಣ್ಣ ದದ್ದುಗಳು :
ಯಾವುದೇ ಕಾರಣವಿಲ್ಲದೆ ಚರ್ಮದ ಮೇಲೆ ಸಣ್ಣ ದದ್ದುಗಳು ಕಾಣಿಸಿಕೊಂಡರೆ ಅದು ಅಧಿಕ ರಕ್ತದ ಸಕ್ಕರೆಯನ್ನು ಸೂಚಿಸುತ್ತವೆ.ನಿಮ್ಮ ಚರ್ಮದ ಮೇಲೆ ಕೂಡಾ ಅಂಥಹ ಚಿಹ್ನೆಗಳು ಕಾಣಿಸಿಕೊಂಡರೆ ಒಮ್ಮೆ ಆರೋಗ್ಯ ತಜ್ಞರ ಸಹಾಯ ಪಡೆಯಿರಿ.
ಚರ್ಮದ ಮೇಲೆ ನೇರಳೆ ಗುರುತುಗಳು :
ಚರ್ಮದ ಮೇಲೆ ನೇರಳೆ,ಕೆಂಪು,ಕಂದು ಅಥವಾ ಹಳದಿ ಗುರುತುಗಳು ಕಂಡು ಬಂದರೆ ಅದನ್ನು ನಿರ್ಲಕ್ಷಿಸಬೇಡಿ.ಆ ಚಿಹ್ನೆಗಳು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು.ಈ ಚಿಹ್ನೆಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ, ಅಪಾಯ ಹೆಚ್ಚಾಗುತ್ತಲೇ ಹೋಗಬಹುದು.
ಫಂಗಲ್ ಇನ್ಫೆಕ್ಷನ್ :
ಪದೇ ಪದೇ ಫಂಗಲ್ ಇನ್ಫೆಕ್ಷನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ, ಅದು ಮಧುಮೇಹದ ಚಿಹ್ನೆಯಾಗಿರಬಹುದು.ಇದರಿಂದ ಚರ್ಮದ ಮೇಲೆ ತುರಿಕೆ ಕಾಣಿಸಿಕೊಳ್ಳಬಹುದು.ದೀರ್ಘಕಾಲದವರೆಗೆ ಅದನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.