High BP Control Tips: ರಕ್ತದೊತ್ತಡದಲ್ಲಿನ ಏರಿಳಿತ ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಾರೆ. ಅನೇಕ ಬಾರಿ ಕೆಲವರು ಜೀವನಪೂರ್ತಿ ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ನಿಮಗಾಗಿ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ, ಇವುಗಳನ್ನು ಅನುಸರಿಸುವ ಮೂಲಕ ನೀವು ಮಾತ್ರೆಗಳು ಅಥವಾ ಔಷಧಿಗಳನ್ನು ಸೇವಿಸುವ ಅವಶ್ಯಕತೆ ಇಲ್ಲ. ಈ ಸಣ್ಣಪುಟ್ಟ ಸಲಹೆಗಳನ್ನು ಅನುಸರಿಸುವುದರಿಂದ ನೀವು ರಕ್ತದೊತ್ತಡವನ್ನು ನಿಭಾಯಿಸಬಹುದು. (Health News In Kannada)

COMMERCIAL BREAK
SCROLL TO CONTINUE READING

1. ನಿತ್ಯ ವ್ಯಾಯಾಮ ಮಾಡಿ - ಕೆಲವರು ವ್ಯಾಯಾಮ ಮಾಡುವುದಿಲ್ಲ ಇದರಿಂದ ಅವರು ಹಲವು ರೀತಿಯ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ರಕ್ತದೊತ್ತಡ ಸಮಸ್ಯೆ ಇರುವವರು ನಿತ್ಯ ವ್ಯಾಯಾಮ ಮಾಡಬೇಕು. ಇದರಿಂದ ಹೆಚ್ಚಾಗುವ ಬಿಪಿಯನ್ನು ನೀವು ನಿಯಂತ್ರಣದಲ್ಲಿರಿಸಬಹುದು.ಇದಲ್ಲದ ಯೋಗಾಭ್ಯಾಸ, ಧ್ಯಾನವನ್ನು ಕೂಡ ನೀವು ಕೈಗೊಳ್ಳಬಹುದು. ಇದರಿಂದ ನಿಮಗೆ ಖಂಡಿತ ಲಾಭ ಸಿಗಲಿದೆ.


2. ಡಯಟ್ ಅನ್ನು ಸರಿಯಾಗಿಡಿ - ಇದಲ್ಲದೆ ನೀವು ನಿಮ್ಮ ಆಹಾರವನ್ನು ಕೂಡ ಸರಿಯಾಗಿಡಬೇಕು. ಇದರಿಂದ ಕೂಡ ನಿಮ್ಮ ಬಿಪಿ ನಿಯಂತ್ರಣದಲ್ಲಿರುತ್ತದೆ. ನಿಮ್ಮ ಡಯಟ್ ನಿಂದ ಹೈ ಸೋಡಿಯಂ ಇರುವ ಆಹಾರಗಳನ್ನು ತೆಗೆದುಹಾಕಲು ಪ್ರಯತ್ನಿಸಿ. ಇದರ ಜೊತೆಗೆ ಊಟದಲ್ಲಿ ಅಧಿಕ ತರಕಾರಿ ಸೇವನೆ ಮಾಡಿ. 


ಇದನ್ನೂ ಓದಿ-Belly Fat Reduce Tips: ಕೆಲವೇ ದಿನಗಳಲ್ಲಿ ಹೊಟ್ಟೆ ಭಾಗದ ಕೊಬ್ಬು ಕರಗಿಸಲು ಈ ಮ್ಯಾಜಿಕ್ ಡ್ರಿಂಕ್ ಈ ರೀತಿ ಸೇವಿಸಿ!


ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರಿ - ಧೂಮಪಾನ ಹಾಗೂ ಮಧ್ಯಪಾನದಿಂದ ಅಂತರ ಕಾಯ್ದುಕೊಳ್ಳಿ. ಏಕೆಂದರೆ, ಇವುಗಳಿಂದ ಬಿಪಿ ಸಮಸ್ಯೆ ಹೆಚ್ಚಾಗುತ್ತದೆ. ವಾಸ್ತವದಲ್ಲಿ ಇವುಗಳಿಂದ ಹೈಬಿಪಿ ಸಮಸ್ಯೆ ಹೆಚ್ಚಾಗುತ್ತದೆ. ಹೀಗಿರುವಾಗ ನೀವು ಇವೆರಡರಿಂದ ಅಂತರ ಕಾಯ್ದುಕೊಳ್ಳಬೇಕು. 
ಒತ್ತಡದಿಂದ ದೂರವಿರಿ, ಕಾಲ-ಕಾಲಕ್ಕೆ ಪರೀಕ್ಷೆಗೆ ಒಳಗಾಗಿ


ಇದನ್ನೂ ಓದಿ-Bajara For Hair: ಕೂದಲುದುರುವಿಕೆಗೆ ಬ್ರೇಕ್ ಹಾಕಿ, ದಟ್ಟ ಮತ್ತು ನೀಳವಾದ ಕೇಶರಾಶಿ ನಿಮ್ಮದಾಗಿಸಲು ಈ ರೀತಿ ಸಜ್ಜೆ ಬಳಸಿ!

ಒತ್ತಡ ತೆಗೆದುಕೊಳ್ಳುವುದರಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಒತ್ತಡವನ್ನು ದೂರವಿಡಲು ಯೋಗಾಭ್ಯಾಸ ನಡೆಸಿ ಮತ್ತು ಒಳ್ಳೆಯ ಆಲೋಚನೆಗಳನ್ನು ಮಾಡಿ. ಕಾಲ-ಕಾಲಕ್ಕೆ ಪರೀಕ್ಷೆಗೆ ಒಳಗಾಗಿ. ಇದರಿಂದ ನೀವು ನಿಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಮತ್ತು ಹಂತ-ಹಂತವಾಗಿ ಅರ್ಥೈಸಿಕೊಳ್ಳಬಹುದು. ಇದಲ್ಲದೆ ಸಮಯ ಇರುವಾಗಲೇ ಮುಂಜಾಗ್ರತೆಯನ್ನುವಹಿಸಿ ಅದನ್ನು ನಿಯಂತ್ರಿಸಬಹುದು.


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.