Himalayan Garlic Health Benefits: ಋತುಮಾನದ ಹಣ್ಣುಗಳು ಮತ್ತು ತರಕಾರಿಗಳು ಪೌಷ್ಟಿಕಾಂಶ ಗುಣಗಳ ಆಗರವಾಗಿವೆ. ಹೀಗಾಗಿ ತಜ್ಞರು ಅವುಗಳನ್ನು ಪ್ರತಿದಿನ ಅವುಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಹಿಮಾಲಯನ್ ಬೆಳ್ಳುಳ್ಳಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇಲ್ಲದಿದ್ದರೆ, ಇಂದು ನಾವು ನಿಮಗೆ ಈ ನೈಸರ್ಗಿಗ ಆಂಟಿಬಯೊಟಿಕ್ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಹಿಮಾಲಯದ ಬೆಳ್ಳುಳ್ಳಿಯನ್ನು ಹಿಮಾಲಯದಲ್ಲಿ ಬೆಳೆಯಲಾಗುತ್ತದೆ. ಎತ್ತರದ ಪ್ರದೇಶ ಮತ್ತು ಭೌಗೋಳಿಕ ಸ್ಥಳದಿಂದಾಗಿ, ಗಾಳಿ, ನೀರು ಮತ್ತು ಮಣ್ಣು ಸಾವಯವವಾಗಿರುತ್ತದೆ. ಹಿಮಾಲಯನ್ ಬೆಳ್ಳುಳ್ಳಿಯನ್ನು ಕಾಶ್ಮೀರಿ ಬೆಳ್ಳುಳ್ಳಿ, ಜಮ್ಮು ಬೆಳ್ಳುಳ್ಳಿ, ಪೋತಿ ಬೆಳ್ಳುಳ್ಳಿ ಎಂದೂ ಕೂಡ ಕರೆಯುತ್ತಾರೆ. ಇದನ್ನು ವಸಂತ ಋತುವಿನಲ್ಲಿ ಕೊಯ್ಲು ಮಾಡಲಾಗುತ್ತದೆ. ಈ ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಗಟ್ಟಿಯಾದ ಮತ್ತು ಚಿನ್ನದ ಕಂದು ಬಣ್ಣದ ಈ ಬೆಳ್ಳುಳ್ಳಿಯನ್ನು ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಮತ್ತು ವರ್ಷಕ್ಕೊಮ್ಮೆ ಮಾತ್ರ ಕೊಯ್ಲು ಮಾಡಲಾಗುತ್ತದೆ. ರುಚಿಯಲ್ಲಿ ಇದು ತುಂಬಾ ಖಾರವಾಗಿರುತ್ತದೆ. ಹಿಮಾಲಯನ್ ಬೆಳ್ಳುಳ್ಳಿಯನ್ನು ಮ್ಯಾಂಗನೀಸ್, ತಾಮ್ರ, ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಹಾಗೂ ಸೆಲೆನಿಯಮ್ ಮತ್ತು ಫಾಸ್ಪರಸ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ1 ಕೂಡ ಇರುತ್ತವೆ. ಜೊತೆಗೆ, ಈ ಬೆಳ್ಳುಳ್ಳಿ ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ತುಂಬಾ ಸಹಕಾರಿ.


ಬಿಪಿ ಸಮಸ್ಯೆಯನ್ನು ದೂರ ಮಾಡುತ್ತದೆ
ಅಧಿಕ  ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ, ಹಿಮಾಲಯನ್ ಬೆಳ್ಳುಳ್ಳಿಯಲ್ಲಿ ಅನೇಕ ಇತರ ಗುಣಲಕ್ಷಣಗಳು ಕಂಡುಬರುತ್ತವೆ. ಈ ಬೆಳ್ಳುಳ್ಳಿ ರಕ್ತದ ಸಾಂದ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ರಕ್ತನಾಳಗಳಲ್ಲಿ ಪ್ಲೇಕ್ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಈ ವಿಶಿಷ್ಟ ಬೆಳ್ಳುಳ್ಳಿ ಮೊಗ್ಗುಗಳು ಸ್ನಾಯುಗಳ ವಿಶ್ರಾಂತಿಗೆ ಸಹಾಯ ಮಾಡುತ್ತವೆ.  ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಈ ಬೆಳ್ಳುಳ್ಳಿಯಲ್ಲಿರುವ ಹೈಡ್ರೋಜನ್ ಸಲ್ಫೈಡ್ ಎಂಬ ರಾಸಾಯನಿಕ ಸಂಯುಕ್ತವು ದೇಹದಲ್ಲಿನ ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಬಿಳಿ ಬೆಳ್ಳುಳ್ಳಿಗಿಂತ ಹೆಚ್ಚು ಪ್ರಯೋಜನಕಾರಿ
ಈ ಬೆಳ್ಳುಳ್ಳಿಯ ವಿಶೇಷತೆಗಳ ಕುರಿತು ಹೇಳುವ ಆರೋಗ್ಯ ತಜ್ನರು, ಹಿಮಾಲಯನ್ ಬೆಳ್ಳುಳ್ಳಿ ಒಂದು ನೈಸರ್ಗಿಕ ಪ್ರತಿಜೀವಕ ಎಂದು ಹೇಳಿದ್ದಾರೆ. ಈ ಬೆಳ್ಳುಳ್ಳಿ ಅತ್ಯುತ್ತಮ ಆಂಟಿಮೈಕ್ರೊಬಿಯಲ್ ಆಗಿದೆ, ಇದು ಆಂಥ್ರಾಕ್ಸ್ ಮತ್ತು ಇ.ಕೋಲಿಯಂತಹ ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಅಷ್ಟೇ ಅಲ್ಲ, ಇದು ವೈರಸ್ ಮತ್ತು ಫಂಗಸ್‌ಗೆ ಒಂದು ಶಕ್ತಿಯುತವಾದ ಮೂಲಿಕೆಯಾಗಿದೆ. ಬೆಳ್ಳುಳ್ಳಿಯು 'ಅಲಿಸಿನ್' ಎಂಬ ಪರಿಣಾಮಕಾರಿ ಸಂಯುಕ್ತವನ್ನು ಹೊಂದಿದೆ, ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಇದಲ್ಲದೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ-Weight Loss Tips: ಬೊಜ್ಜಿನ ಸಮಸ್ಯೆಯಿಂದ ನೀವೂ ತೊಂದರೆಗೀಡಾಗಿದ್ದೀರಾ? ಈ ಸುಲಭವಾದ ಪಾನೀಯ ಟ್ರೈ ಮಾಡಿ ನೋಡಿ!

ಹಿಮಾಲಯನ್ ಬೆಳ್ಳುಳ್ಳಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಕ್ಯಾನ್ಸರ್ ಅನ್ನು ಸಹ ನಿವಾರಿಸುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಿಮಾಲಯನ್ ಬೆಳ್ಳುಳ್ಳಿಯ ಪ್ರಯೋಜನಗಳು ಅಸಂಖ್ಯಾತವಾಗಿವೆ. ಸಾಮಾನ್ಯ ಬೆಳ್ಳುಳ್ಳಿಗಿಂತ ಇದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲು ಇದು ಕಾರಣವಾಗಿದೆ.


ಇದನ್ನೂ ಓದಿ-Women Health Tips: ಸೆಕ್ಸ್ ಬಳಿಕ ಮಹಿಳೆಯರು ಈ 5 ಕೆಲಸಗಳನ್ನು ಮಾಡಬಾರದು, ಇಲ್ದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.