Home Made face packs : ಈಗಾಗಲೇ ಬೇಸಿಗೆ ಬಿಸಿ ಪರಿಣಾಮ ಬೀರಲು ಪ್ರಾರಂಭ ಮಾಡಿದೆ. ಮುಂದಿನ ದಿನಗಳಲ್ಲಿ ಸೂರ್ಯನ ಶಾಖ ಹೆಚ್ಚಾಗುವ ಸಾಧ್ಯತೆಗಳಿವೆ. ಅಲ್ಲದೆ, ಇದು ನಿಮ್ಮ ಆರೋಗ್ಯ ಮತ್ತು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಹೆಚ್ಚಾಗಿ ಮುಖದ ಸ್ಕಿನ್ ಹಾನಿಯಾಗುವ ಸಾಧ್ಯತೆ ಹೆಚ್ಚು. ಇದೀಗ ನೀವು ನಿಮ್ಮ ಚರ್ಮದ ಆರೋಗ್ಯವನ್ನು ರಿಫ್ರೆಶ್‌ಗೊಳಿಸಲು ಬಯಸಿದ್ದರೆ ನಾವು ನಿಮಗೆ ಕೆಲವೊಂದಿಷ್ಟು ಫೇಶಿಯಲ್‌ ಟಿಪ್ಸ್‌ ಕೊಡುತ್ತೇವೆ.. ಅವು ಯಾವುವು ಅಂತ ತಿಳಿಯಲು ಮುಂದೆ ಓದಿ..


COMMERCIAL BREAK
SCROLL TO CONTINUE READING

ಅಲೋವೆರಾ ಫೇಶಿಯಲ್ : ಅಲೋವೆರಾ ಬೇಸಿಗೆಯ ಫೇಶಿಯಲ್‌ಗಳಲ್ಲಿ ಒಂದು ಉತ್ತಮ ವಿಧಾನ. ಏಕೆಂದರೆ ಇದು ಉರಿಯೂತವನ್ನು ಕಡಿಮೆ ಮಾಡಿ, ಬಿಸಿಲಿನಿಂದ ಸುಟ್ಟ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅಲೋವೆರಾವು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ, ಇದು ಚರ್ಮವನ್ನು ಪೋಷಿಸಲು ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಚರ್ಮವನ್ನು ನಯವಾಗಿ, ಮೃದುವಾಗಿಸುತ್ತದೆ. ತಾಜಾ ಅಲೋವೆರಾ ಜೆಲ್ ಮತ್ತು ಜೇನುತುಪ್ಪ, ಸೌತೆಕಾಯಿ ಮತ್ತು ಅರಿಶಿನದಂತಹ ಇತರ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಫೇಸ್ ಮಾಸ್ಕ್‌ ಬಳಸಿ. ಈ ಫೇಶಿಯಲ್ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಚರ್ಮಕ್ಕೆ ಕಾಂತಿ ನೀಡುತ್ತದೆ.


ಇದನ್ನೂ ಓದಿ: Kabzaa : 50 ದೇಶ, 5 ಭಾಷೆ, 4000 ಸ್ಕ್ರೀನ್! ವಿಶ್ವದ ಮೂಲೆ‌ ಮೂಲೆಯಲ್ಲೂ ಕಬ್ಜ


ಗ್ರೀನ್ ಟೀ ಫೇಶಿಯಲ್ : ಗೀನ್‌ ಟೀ ಹಲವಾರು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಅಲ್ಲದೆ, ಎಂತಹ ಉರಿ ಇದ್ದರೂ ಅದನ್ನು ಗುಣವಾಗಿಸುವ ಲಕ್ಷಣಗಳನ್ನು ಹೊಂದಿದೆ. ಇದು ಬೇಸಿಗೆಯ ಫೇಶಿಯಲ್‌ಗಳಲ್ಲಿ ಉತ್ತಮವಾದ ಒಂದು ಫೇಶಿಯಲ್‌. ಹಸಿರು ಚಹಾ ಎಲೆಗಳು, ಜೇನುತುಪ್ಪ ಮತ್ತು ಮೊಸರುಗಳಿಂದ ತಯಾರಿಸಲ್ಪಟ್ಟ ಫೇಶಿಯಲ್ ಬಳಸುವುದರಿಂದ ನಿಮ್ಮ ಚರ್ಮವನ್ನು ನಿರ್ವಿಷಗೊಳಿಸಿ ಪುನರ್ಯೌವನ ನೀಡುತ್ತದೆ ಅಲ್ಲದೆ, ಹೊಳೆಯುವಂತೆ ಮಾಡುತ್ತದೆ.


ಹಣ್ಣಿನ ಫೇಶಿಯಲ್ : ಫ್ರೂಟ್ ಫೇಶಿಯಲ್ ಬೇಸಿಗೆಗೆ ಸೂಕ್ತ. ಏಕೆಂದರೆ ಅವು ಚರ್ಮವನ್ನು ರಿಫ್ರೆಶ್ ಮಾಡುತ್ತವೆ. ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳೊಂದಿಗೆ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ, ಬಾಳೆಹಣ್ಣು ಮತ್ತು ಸ್ಟ್ರಾಬೆರಿಗಳಂತಹ ತಾಜಾ ಹಣ್ಣುಗಳಿಂದ ತಯಾರಿಸಿದ ಫೇಸ್ ಮಾಸ್ಕ್ ಬಳಸಿ. ಇದು ಚರ್ಮಕ್ಕೆ ಹೊಳಪು ನೀಡಲು ಸಹಾಯ ಮಾಡುತ್ತದೆ ಅಲ್ಲದೆ, ಕಾಂತಿಯುತ ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.