ಬೆಂಗಳೂರು : ಇಂದಿನ ಒತ್ತಡದ ಜೀವನಶೈಲಿಯಲ್ಲಿ ಬೊಜ್ಜು ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಎಲ್ಲರೂ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅಧಿಕ ತೂಕ ಇರುವವರು ಮತ್ತು ಹೊಟ್ಟೆ ಭಾಗದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿರುವವರು ಅದನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು ಎನ್ನುವ ಮಾತನ್ನು ವೈದ್ಯರು ಕೂಡಾ ಒತ್ತಿ  ಹೇಳುತ್ತಾರೆ. ಅಧಿಕ ತೂಕ ಹೊಂದಿರುವ ವ್ಯಕ್ತಿಯು 4-5 ಕೆಜಿ ಕಳೆದುಕೊಂಡರೂ  ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಹೆಚ್ಚು ಸಮಯ ವ್ಯಾಯಾಮ ಮಾಡಲು ಅಥವಾ ಜಿಮ್‌ಗೆ ಹೋಗಲು ಸಮಯವಿಲ್ಲದವರು ತಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸಬಹುದು. 


COMMERCIAL BREAK
SCROLL TO CONTINUE READING

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ ?: 
ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಅನೇಕ ಜನರಿಗೆ ಸವಾಲಾಗಿ  ಪರಿಣಮಿಸಿದೆ. ಹಲವಾರು ಪ್ರಯತ್ನಗಳ ನಂತರ ಕೂಡಾ ಈ ಸಮಸ್ಯೆಗೆ  ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದರೆ, ಕೆಳಗೆ ನೀಡಲಾದ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಒಂದೇ ವಾರದಲ್ಲಿ  ಫಲಿತಾಂಶವನ್ನು ಕಂಡುಕೊಳ್ಳಬಹುದು. ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಯಸುವವರು ಪ್ರತಿದಿನ ಬೆಳಿಗ್ಗೆ ಚಹಾದ ಬದಲಿಗೆ ಕೆಲವು ಆರೋಗ್ಯಕರ ಪಾನೀಯಗಳನ್ನು ಸೇವಿಸಬೇಕು. 


ಇದನ್ನೂ ಓದಿ : 10 ಸಾವಿರ ಹೆಜ್ಜೆಯೇ ಆಗಬೇಕೆಂದಿಲ್ಲ , ಉತ್ತಮ ಆರೋಗ್ಯಕ್ಕೆ ಇಷ್ಟೇ ಹೆಜ್ಜೆ ನಡೆದರೂ ಸಾಕು


ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಪಾನೀಯಗಳು  : 
ಶುಂಠಿ ನೀರು : 

ಶುಂಠಿಯಲ್ಲಿ ಜಿಂಜರೋನ್ ಮತ್ತು ಶೋಕಾಲ್ ಎಂಬ ಎರಡು ಸಂಯುಕ್ತಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಗುಣಗಳಿಂದಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರನ್ನು ಸೇವಿಸಿದರೆ ಹೊಟ್ಟೆಯ ಭಾಗದ ಕೊಬ್ಬು ಕರಗುತ್ತದೆ. ಪರಿಣಾಮವಾಗಿ ಹೊಟ್ಟೆ ಚಪ್ಪಟೆಯಾಗುತ್ತದೆ. ಇದಕ್ಕಾಗಿ, ಶುಂಠಿಯನ್ನು ಜಜ್ಜಿ ಅದನ್ನು ನೀರಿಗೆ ಸೇರಿಸಿ ಕುದಿಸಬೇಕು. ಈ ನೀರನ್ನು ನಿತ್ಯ ಬೆಳಿಗ್ಗೆ ಚಹಾದ ಬದಲಿಗೆ  ಸೇವಿಸಬೇಕು. 


ಅರಶಿನ ನೀರು : 
ಅರಿಶಿನವು ಸಾಂಬಾರ ಪದಾರ್ಥ ಮಾತ್ರವಲ್ಲದೆ ಔಷಧೀಯ ಗುಣಗಳಿಂದ ಕೂಡಿದೆ. ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಅರಿಶಿನ ನೀರನ್ನು ಸೇವಿಸುವುದರಿಂದ ತೂಕ ಇಳಿಸಲು ಸಹಾಯವಾಗುತ್ತದೆ. ಅರಿಶಿನ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ. ದೇಹದ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಗೆ ಈ ಐದು ಬೇಳೆಗಳು ನಿಮ್ಮ ಆಹಾರದಲ್ಲಿರಲಿ!


ಚಕ್ಕೆ ನೀರು :
ಪ್ರತಿದಿನ ಬೆಳಿಗ್ಗೆ ದಾಲ್ಚಿನ್ನಿ ಅಥವಾ ಚಕ್ಕೆ ನೀರನ್ನು ಕುಡಿಯುವುದರಿಂದ  ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.


ನಿಂಬೆ ಪಾನೀಯ :
ತ್ವರಿತ ತೂಕ ನಷ್ಟಕ್ಕೆ ನಿಂಬೆ ನೀರನ್ನು ಸೇವಿಸುವುದು ತುಂಬಾ ಪರಿಣಾಮಕಾರಿ.  ನಿಂಬೆ ನೀರು ಪೆಕ್ಟಿನ್ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಹೊಟ್ಟೆಯ ಕೊಬ್ಬನ್ನು ಕರಗಿಸಲು ತುಂಬಾ ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ  ನಿಂಬೆ ನೀರನ್ನು ಕುಡಿಯಿರಿ. ಹೀಗೆ ಕುಡಿದರೆ ಕೆಲವೇ ದಿನಗಳಲ್ಲಿ ದೇಹದ ತೂಕದಲ್ಲಿ ವ್ಯತ್ಯಾಸ ಕಾಣಬಹುದು.


ಇದನ್ನೂ ಓದಿ : ಅಡುಗೆ ಮಾಡುವಾಗ ಈ ತರಕಾರಿಗಳ ಸಿಪ್ಪೆ ತೆಗೆಯದಿರಿ: ಅತಿ ಹೆಚ್ಚು, ಸಮೃದ್ಧ ಪೋಷಕಾಂಶಗಳಿರೋದು ಸಿಪ್ಪೆಯಲ್ಲೇ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.