ಚಳಿಗಾಲದಲ್ಲಿ ಮಹಿಳೆಯರು, ಪುರುಷರು ಎಲ್ಲರೂ ತಮ್ಮ ಉದುರುವ ಕೂದಲಿನ ಬಗ್ಗೆ ಚಿಂತಿತರಾಗಿರುತ್ತಾರೆ. ಈ ಋತುವಿನಲ್ಲಿ ಕೂದಲಿಗೆ ಯಾವುದೇ ರೀತಿಯ ಎಣ್ಣೆ, ಶಾಂಪೂ ಅಥವಾ ಕಂಡಿಷನರ್ ಕೆಲಸ ಮಾಡುವುದಿಲ್ಲ. ಹೀಗಾಗಿ ಸಾಮಾನ್ಯವಾಗಿ ಸಾಕಷ್ಟು ಮಂದಿ ತಮ್ಮ ಕೂದಲನ್ನು ಆರೋಗ್ಯಕರವಾಗಿರಿಸಲು ಮತ್ತು ಕೂದಲಿನ ನಷ್ಟದ ಸಮಸ್ಯೆಯನ್ನು ತೊಡೆದುಹಾಕಲು ಹತ್ತು ಹಲವು ಪ್ರಯತ್ನ ಮಾಡುತ್ತಲೇ ಇರುತ್ತಾರೆ.  ಆದರೂ ಸಮಸ್ಯೆ ಬಗೆಹರಿಯದೆ ಚಿಂತಿತರಾಗುತ್ತಾರೆ.


COMMERCIAL BREAK
SCROLL TO CONTINUE READING

ಚಿಂತೆಬಿಡಿ, ಚಳಿಗಾಲದಲ್ಲಿ ಕೂದಲುದುರುವಿಕೆಗೆ ಹೇಳಿ ಬೈ.. ಬೈ..! ಕೂದಲ ರಕ್ಷಣೆಗೆ ನಾವು ಒಂದಿಷ್ಟು ಟಿಪ್ಸ್ ನೀಡುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳಿಗೆ ಮೊರೆ ಹೋಗುವಂತದ್ದಲ್ಲ, ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ನಿಮ್ಮ ಕೂದಲ ರಕ್ಷಣೆ ಮಾಡುವುದರ ಬಗ್ಗೆ ಮನೆಮದ್ದನ್ನು ತಿಳಿಸುತ್ತೇವೆ.


ಆಮ್ಲಾ ರಸ:
ಶೀತ ಗಾಳಿಯಿಂದ ಕೂದಲು ಚಳಿಗಾಲದಲ್ಲಿ ಬಹಳ ಒರಟಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕೂದಲಿಗೆ ಹೇರಳವಾದ ಪೌಷ್ಟಿಕಾಂಶಗಳನ್ನು ನೀಡಿ ಕೂದಲನ್ನು ರಕ್ಷಿಸಬೇಕು. ಇದಕ್ಕಾಗಿ ಆಮ್ಲಾ ರಸ ನಿಮಗೆ ಸಹಾಯಕವಾಗಿದೆ. ಕೂದಲಿಗೆ ಆಮ್ಲಾ ರಸ ಲೇಪಿಸಿ, ಸ್ವಲ್ಪ ಸಮಯದ ನಂತರ ಅದನ್ನು ಶುಚಿಗೊಳಿಸುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ. ಇದರಲ್ಲಿ ರಾಸಾಯನಿಕಗಳ ಪ್ರಮಾಣ ಕಡಿಮೆಯಿರುವುದರಿಂದ ಇದು ಕೂದಲ ಸಮಸ್ಯೆ ಬಗೆಹರಿಸುವುದರ ಜೊತೆಗೆ ಕೂದಲನ್ನು ಹೊಳಪಾಗಿಸುತ್ತದೆ.


ಅಲೋ ವೆರಾ ಜೆಲ್: 
ಅಲೋ ವೆರಾ ಗುಣಲಕ್ಷಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ... ಅಲೋ ವೆರಾವು ಆರೋಗ್ಯಕ್ಕೆ ಮಾತ್ರವಲ್ಲದೆ ಮುಖ ಮತ್ತು ಕೂದಲಿನಲ್ಲೂ ಅನುಕೂಲಕರವಾಗಿರುತ್ತದೆ. ಹಾಗಾಗಿ ನಿಮ್ಮ ಕೂದಲಿನ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳಲು ನೀವು ಬಯಸಿದರೆ, ನಂತರ ಕೂದಲಿನ ಅಲೋ ವೇರಾ ಜೆಲ್ ಅನ್ನು ಲೇಪಿಸಿ, ಇದು ಕೂದಲು ಒರಟಾಗಿರುವುದರಿಂದ ರಕ್ಷಿಸಿ ಹೊಳೆಯುವಂತೆ ಮಾಡುತ್ತದೆ.


ನಿಂಬೆಹಣ್ಣಿನ ರಸ ಮತ್ತು ಮೊಸರು:
ನಿಂಬೆಹಣ್ಣಿನ ರಸ ಮತ್ತು ಮೊಸರು ಕೂದಲಿಗೆ ಪ್ರಯೋಜನಕಾರಿ. ಇದಕ್ಕಾಗಿ, ಎರಡು ಮೂರು ಸ್ಪೂನ್ ನಿಂಬೆ ರಸವನ್ನು ಅರ್ಧ ಬೌಲ್ ಮೊಸರಿನೊಂದಿಗೆ ಸೇರಿಸಿ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಳಿಕ ಕೂದಲನ್ನು ತೊಳೆಯಿರಿ. ಇದರಿಂದ ಡ್ಯಾಂಡ್ರಫ್ ಸಮಸ್ಯೆ ದೂರವಾಗುತ್ತದೆ.


ಈರುಳ್ಳಿ ರಸ:
ಕೂದಲಿಗೆ ಈರುಳ್ಳಿ ರಸವು ಪ್ರಯೋಜನಕಾರಿಯಾಗಿದೆ. ಕೂದಲಿಗೆ ಅದನ್ನು ಅನ್ವಯಿಸುವುದರಿಂದ ಕೂದಲಿನ ನಷ್ಟವನ್ನು ನಿಲ್ಲಿಸುವುದು ಮಾತ್ರವಲ್ಲ, ಜೊತೆಗೆ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ ತಲೆಯಲ್ಲಿ ತುರಿಕೆ(ತಲೆಕಡಿತ) ಸಮಸ್ಯೆಯಿದ್ದರೆ ಈರುಳ್ಳಿ ಅದನ್ನು ನಿವಾರಿಸುತ್ತದೆ. ಆದ್ದರಿಂದ, ವಾರದಲ್ಲಿ ಕನಿಷ್ಠ ಎರಡು ಬಾರಿ ನಿಮ್ಮ ಕೂದಲು ಮೇಲೆ ಈರುಳ್ಳಿ ರಸ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ. ಇದು ಕೂದಲ ನಷ್ಟವನ್ನು ತಡೆಯುತ್ತದೆ ಮತ್ತು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ.