ಹಲ್ಲು ನೋವಿನ ಶಾಶ್ವತ ಪರಿಹಾರಕ್ಕೆ ಈ ಮನೆಮದ್ದುಗಳೇ ಸಾಕು !
Home Remedies For Toothache: ಕೆಲವು ಮನೆಮದ್ದುಗಳನ್ನು ಮಾಡುವ ಮೂಲಕ ಹಲ್ಲು ನೋವಿನ ಸಮಸ್ಯೆ ಶೀಘ್ರದಲ್ಲೇ ನಿವಾರಣೆಯಾಗುತ್ತದೆ.
Home Remedies For Toothache : ಒಮ್ಮೆ ಹಲ್ಲುನೋವು ಕಾಣಿಸಿಕೊಂಡರೆ ದಿನದ ಸಾಮಾನ್ಯ ಕೆಲಸ ಮಾಡುವುದು ಕೂಡಾ ಕಷ್ಟವಾಗುತ್ತದೆ. ಹೆಚ್ಚಾಗಿ ಹಲ್ಲು ನೋವು ರಾತ್ರಿಯ ವೇಳೆಯೇ ಕಾಣಿಸಿಕೊಳ್ಳುತ್ತದೆ. ಹೀಗಾದಾಗ, ವೈದ್ಯರ ಬಳಿ ಹೋಗುವುದು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಕೆಲವು ಮನೆಮದ್ದುಗಳನ್ನು ಮಾಡುವ ಮೂಲಕ ಹಲ್ಲು ನೋವಿನ ಸಮಸ್ಯೆ ಶೀಘ್ರದಲ್ಲೇ ನಿವಾರಣೆಯಾಗುತ್ತದೆ.
ಹಲ್ಲುನೋವು ನಿವಾರಿಸಲು ಮನೆಮದ್ದು :
1. ಲವಂಗ :
ಆಹಾರದ ರುಚಿಯನ್ನು ಹೆಚ್ಚಿಸಲು ಲವಂಗವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಆಹಾರದ ರುಚಿ ಹೆಚ್ಚಿಸುವ ಲವಂಗ ಹಲ್ಲು ನೋವಿಗೂ ಪರಿಹಾರ ನೀಡುತ್ತದೆ. ಹತ್ತಿಯಲ್ಲಿ ಲವಂಗದ ಎಣ್ಣೆಯನ್ನು ಹಚ್ಚಿ ನೋವಿರುವ ಹಲ್ಲಿನ ಮೇಲೆ ಸ್ವಲ್ಪ ಹೊತ್ತು ಇರಿಸಬೇಕು. ಇದಲ್ಲದೇ ಲವಂಗವನ್ನು ಜಗಿಯುವುದರಿಂದಲೂ ನೋವಿನಿಂದ ಪರಿಹಾರ ದೊರೆಯುತ್ತದೆ.
ಇದನ್ನೂ ಓದಿ : ಜಿಮ್‌ನಲ್ಲಿ ವ್ಯಾಯಾಮಕ್ಕಾಗಿ ಈ ಆಹಾರಗಳನ್ನು ಸೇವಿಸಿ, ನೀವು ಸಾಕಷ್ಟು ಶಕ್ತಿಯನ್ನು ಪಡೆಯುತ್ತೀರಿ..!
2. ಬೆಳ್ಳುಳ್ಳಿ :
ಬೆಳ್ಳುಳ್ಳಿಯಲ್ಲಿ ಅನೇಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುವುದರಿಂದ ಹಲ್ಲುನೋವು ದೂರವಾಗುತ್ತದೆ. ಬೆಳ್ಳುಳ್ಳಿ ಎಸಳನ್ನು ಸ್ವಲ್ಪ ಉಜ್ಜಿ ನೋವಿನ ಜಾಗದಲ್ಲಿ ಇರಿಸಬೇಕು. ಇದು ಹಲ್ಲುಗಳಲ್ಲಿರುವ ಸೂಕ್ಷ್ಮಾಣುಗಳನ್ನು ನಿವಾರಿಸಿ, ನೋವಿನಿಂದ ಪರಿಹಾರವನ್ನು ನೀಡುತ್ತದೆ.
3. ಐಸ್ ಥೆರಪಿ :
ಹಲ್ಲುನೋವು ನಿವಾರಣೆಗೆ ಐಸ್ ಕ್ಯೂಬ್ ಗಳನ್ನು ಬಳಸುವುದನ್ನು ಹೆಚ್ಚಾಗಿ ನೋಡಿರಬಹುದು. ಫ್ರಿಡ್ಜ್‌ನಿಂದ ಐಸ್ ಅನ್ನು ತೆಗೆದು ಕರವಸ್ತ್ರ, ಯಾವುದೇ ಬಟ್ಟೆ ಅಥವಾ ಐಸ್ ಬ್ಯಾಗ್‌ನಲ್ಲಿ ಹಾಕಿ ಮತ್ತು ಅದನ್ನು ಕೆನ್ನೆಯ ಬಳಿ ಇಟ್ಟುಕೊಂಡು ಮಸಾಜ್ ಮಾಡಿ. ಇದರಿಂದ ಒಸಡುಗಳ ಊತವು ಕಡಿಮೆಯಾಗಿ ನೋವಿನಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ : Walking In Winter: ಈ 8 ಅದ್ಭುತ ಪ್ರಯೋಜನಗಳಿಗಾಗಿ ಚಳಿಗಾಲದಲ್ಲಿ ನಿತ್ಯ ವಾಕಿಂಗ್ ಮಾಡಿ
4. ಪೇರಳೆ ಎಲೆಗಳು :
ಪೇರಳೆ ಎಲೆಗಳು ತುಂಬಾ ಪ್ರಯೋಜನಕಾರಿ. ಹಲ್ಲುನೋವಿನ ಸಂದರ್ಭದಲ್ಲಿ, ಪೇರಳೆ ಎಲೆಗಳನ್ನು ಅಗಿಯಲು ಪ್ರಾರಂಭಿಸಿದರೆ, ಕ್ರಮೇಣ ನೋವು ಕಡಿಮೆಯಾಗಲು ಆರಂಭಿಸುತ್ತದೆ. ಇದಲ್ಲದೆ, ಪೇರಳೆ ಎಲೆಗಳನ್ನು ಕುದಿಸಿ, ಅವುಗಳನ್ನು ಫಿಲ್ಟರ್ ಮಾಡಿ ನಂತರ ನೀರನ್ನು ಮೌತ್ವಾಶ್ ಆಗಿ ಬಳಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.