ಔಷಧೀಯ ಗುಣಗಳ ಆಗರ ಮುಂಗಾರು ಬಳ್ಳಿ
ಮನೆ ಔಷಧಿಗಳಲ್ಲಿ ಮುಂಗಾರು ಬಳ್ಳಿ ಸಹ ಒಂದು.
ಅನೇಕ ಖಾಯಿಲೆಗಳಿಗೆ, ದೈಹಿಕ ತೊಂದರೆಗಳಿಗೆ ಮನೆಯಲ್ಲಿ ಅಡುಗೆಗೆ ಬಳಸುವ ಅದೆಷ್ಟೋ ಸೊಪ್ಪು, ತರಕಾರಿ, ಧಾನ್ಯಗಳು ರಾಮಬಾಣವಾಗುತ್ತವೆ. ಅಂತಹ ಮನೆ ಔಷಧಿಗಳಲ್ಲಿ ಮುಂಗಾರು ಬಳ್ಳಿ ಸಹ ಒಂದು.
ಔಷಧೀಯ ಗಿಡಗಳ ಸಾಲಿಗೆ ಸೇರಿದ ಮುಂಗಾರು ಬಳ್ಳಿಯಲ್ಲಿ ಕ್ಯಾಲ್ಷಿಯಂ, ಕಬ್ಬಿಣ, ಕೊಬ್ಬು ಕರಗಿಸುವ ಅಂಶಗಳು ಯಥೇಚ್ಛವಾಗಿ ಇರುವುದರಿಂದ ಇದನ್ನು ‘ಬೋನ್ ಸೆಟ್ಟರ್ ಪ್ಲಾಂಟ್’ ಎಂದೂ ಸಹ ಕರೆಯುತ್ತಾರೆ. ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆ ನಿವಾರಣೆಗೆ ಇಂದು ಬಹಳ ಸಹಕಾರಿ. ಈ ಬಳ್ಳಿಯಿಂದ ಚಟ್ನಿ, ಸಾರು, ಪಲ್ಯ, ಸಲಾಡ್, ಬಜ್ಜಿ ಮುಂತಾದ ರುಚಿಕರ ತಿಂಡಿ ತಿನಿಸುಗಳನ
ಮುಂಗಾರು ಬಳ್ಳಿ ಔಷಧೀಯ ಗುಣಗಳು :
ಮುಂಗಾರು ಬಳ್ಳಿಯ ಕಷಾಯ ಸೇವನೆಯಿಂದ ಅಜೀರ್ಣ, ಕಣ್ಣಿನ ಸೋಂಕು, ಮೂಲವ್ಯಾದಿ, ಅಧಿಕ ರಕ್ತದೊತ್ತಡ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಇದರಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿರುವುದರಿಂದ ಮೂಳೆಗಳನ್ನು ಸದೃಢಗೊಳಿಸುತ್ತದೆ.
ತಿಂದ ಆಹಾರ ಬೇಗ ಜೀರ್ಣವಾಗಿ ಹಸಿವನ್ನು ಹೆಚ್ಚಿಸಲು ಮುಂಗಾರು ಬಳ್ಳಿ ಸಹಾಕಾರಿ.
ಮುಂಗಾರು ಬಳ್ಳಿಯ ಚಿಗುರೆಲೆಯಿಂದ ಪಲ್ಯ ತಯಾರಿಸಿ ಸೇವಿಸಿದರೆ ದೇಹದ ಅತಿಯಾದ ಬೊಜ್ಜು ಕರಗಿ ದೇಹದ ತೂಕ ಕಡಿಮೆಯಾಗುತ್ತದೆ.
ಇದರಲ್ಲಿರುವ ನಾರಿನಂಶ ಕೊಲೆಸ್ಟ್ರಾಲ್ ಏರಿಕೆಯನ್ನು ಕಡಿಮೆ ಮಾಡುತ್ತದೆ.
ಮುಂಗಾರು ಬಳ್ಳಿಯಿಂದ ತಯಾರಿಸಿದ ಚಟ್ನಿ ಕೆಮ್ಮು ಮತ್ತು ಗಂಟಲುನೋವಿಗೆ ರಾಮಬಾಣ.
ಇದರಲ್ಲಿ ಎ ಜೀವಸತ್ವ ಹೆಚ್ಚಾಗಿರುವುದರಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ. ಅಲ್ಲದೆ, ಕಣ್ಣಿನ ಸೋಂಕು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮುಂಗಾರು ಬಳ್ಳಿಯಿಂದ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.
ಈ ಬಳ್ಳಿಯ ಹೊರ ಪದರವನ್ನು ತೆಗೆದು, ಸ್ವಲ್ಪ ಹುರಿದು ಸೇವಿಸಿದರೆ ಅತಿಸಾರ ಸಮಸ್ಯೆ ಪರಿಹಾರವಾಗುತ್ತದೆ.