Saffron Turmeric Milk : ಚಳಿಗಾಲ ಬಂದ ಕೂಡಲೇ ದೇಹವನ್ನು ಬೆಚ್ಚಗಿಡಲು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಹೀಗಾಗಿ, ಇಂದು ನಾವು ನಿಮಗೆ ಕೇಸರಿ ಅರಿಶಿನ ಹಾಲು ಮಾಡುವ ಪಾಕವಿಧಾನವನ್ನು ತಂದಿದ್ದೇವೆ. ಕೇಸರಿ ಮತ್ತು ಅರಿಶಿನ ಎರಡೂ ಉಷ್ಣತೆಯ ಪರಿಣಾಮಗಳನ್ನು ಬೀರುತ್ತವೆ, ಆದ್ದರಿಂದ ಚಳಿಗಾಲದಲ್ಲಿ ಈ ಹಾಲನ್ನು ಕುಡಿಯುವುದು ನಿಮ್ಮ ದೇಹಕ್ಕೆ ಆಂತರಿಕ ಉಷ್ಣತೆಯನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಇದಲ್ಲದೆ, ಹಾಲು ಸಂಪೂರ್ಣ ಆಹಾರ ಪದಾರ್ಥವಾಗಿದ್ದು, ಅದನ್ನು ಕುಡಿಯುವುದರಿಂದ ನಿಮ್ಮ ದೇಹವು ಬಲಗೊಳ್ಳುತ್ತದೆ. ಅದಕ್ಕಾಗಿಯೇ ಕೇಸರಿ ಅರಿಶಿನ ಹಾಲು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಇದರ ರುಚಿ ಕೂಡ ತುಂಬಾನೇ ಇದೆ, ಹಾಗಾದರೆ ಕೇಸರಿ-ಅರಿಶಿನ ಹಾಲು ಮಾಡುವ ವಿಧಾನ ಈ ಕೆಳಗಿದೆ ನೋಡಿ..


ಇದನ್ನೂ ಓದಿ : Weight Loss Tips : ಹೊಟ್ಟೆ ಕೊಬ್ಬು ಕಡಿಮೆ ಮಾಡಲು ತಪ್ಪದೆ ಈ ಜ್ಯೂಸ್ ಕುಡಿಯಿರಿ!


ಕೇಸರಿ ಅರಿಶಿನ ಹಾಲು ತಯಾರಿಸಲು ಅಗತ್ಯವಾದ ಪದಾರ್ಥಗಳು-


- 2 ಗ್ಲಾಸ್ ಹಾಲು
- 1/2 ಟೀಸ್ಪೂನ್ ಅರಿಶಿನ
- 8-10 ಕೇಸರಿ ಎಳೆಗಳು
- 1 ಟೀಸ್ಪೂನ್ ಬಾದಾಮಿ ಚೂರುಗಳು
- 1 ಟೀಸ್ಪೂನ್ ಸಕ್ಕರೆ
- 1/2 ಟೀಸ್ಪೂನ್ ಒಣ ಶುಂಠಿ


ಕೇಸರಿ ಅರಿಶಿನ ಹಾಲು ಮಾಡುವುದು ಹೇಗೆ?


- ಕೇಸರಿ ಅರಿಶಿನ ಹಾಲು ಮಾಡಲು, ಮೊದಲನೆಯದಾಗಿ, ಬಾಣಲೆಯಲ್ಲಿ 2 ಗ್ಲಾಸ್ ಹಾಲು ಹಾಕಿ.
- ನಂತರ ಅದನ್ನು ಮಧ್ಯಮ ಉರಿಯಲ್ಲಿ ಕುದಿಯಲು ಇಡಿ.
- ಇದರ ನಂತರ, ಅದಕ್ಕೆ ಅರಿಶಿನ ಪುಡಿ, ಕೇಸರಿ ಎಳೆಗಳನ್ನು ಮತ್ತು ಒಣ ಶುಂಠಿ ಪುಡಿಯನ್ನು ಮಿಶ್ರಿಸಿ.
- ನಂತರ ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.
- ಇದರ ನಂತರ ನೀವು ಸುಮಾರು 1-2 ನಿಮಿಷಗಳ ಕಾಲ ಹಾಲನ್ನು ಕುದಿಸಿ.
- ನಂತರ ನಿಮ್ಮ ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ ಮತ್ತು ಗ್ಯಾಸ್ ಕಡಿಮೆ ಮಾಡಿ.
- ಇದರ ನಂತರ, ನೀವು ಸುಮಾರು 5 ನಿಮಿಷಗಳ ಕಾಲ ಹಾಲನ್ನು ಬಿಸಿ ಮಾಡಿ.
- ಈಗ ನಿಮ್ಮ ಆರೋಗ್ಯಕರ ಕೇಸರಿ -ಅರಿಶಿನ ಹಾಲು ಸಿದ್ಧವಾಗಿದೆ.
- ನಂತರ ಅದನ್ನು ಸರ್ವಿಂಗ್ ಗ್ಲಾಸ್‌ನಲ್ಲಿ ಹಾಕಿ ಬಾದಾಮಿ ಚೂರುಗಳಿಂದ ಅಲಂಕರಿಸಿ ಸರ್ವ್ ಮಾಡಿ.


ಇದನ್ನೂ ಓದಿ : Flax Seeds For Long Hair : ಮಹಿಳೆಯರ ಗಮನಕ್ಕೆ : ಉದ್ದನೆಯ ಕೂದಲಿಗೆ ಪ್ರಯತ್ನಿಸಿ ಅಗಸೆ ಬೀಜ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.