Healthy sleep: ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಗೂ ಸಾಕಷ್ಟು ನಿದ್ರೆ ಅತ್ಯವಶ್ಯಕ. ಉತ್ತಮ ನಿದ್ರೆಯು ದಿನವಿಡೀ ನೀವು ಚೈತನ್ಯದಿಂದಿರುವಂತೆ ಮಾಡುತ್ತದೆ. ಆರೋಗ್ಯಕರ ನಿದ್ರೆಯು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದರಿಂದ ನೀವು ಉತ್ತಮ ಭಾವನೆಯ ಹೊಂದುವಿರಿ. ಒಂದು ವೇಳೆ ನಿಮಗೆ ಸಮರ್ಪಕ ನಿದ್ರೆಯಾಗದಿದ್ದಲ್ಲಿ ಅದರ ಪರಿಣಾಮ ದಿನವಿಡೀ ಇರುತ್ತದೆ. ಯಾವುದೇ ಕೆಲಸದಲ್ಲಿಯೂ ನಿಮಗೆ ಉತ್ಸಾಹ ಇರುವುದಿಲ್ಲ ಹಾಗೂ ದೇಹ ದಣಿದಿರುವಂತೆ ಭಾಸವಾಗುತ್ತದೆ.


COMMERCIAL BREAK
SCROLL TO CONTINUE READING

ನಿದ್ರೆಯ ವೇಳೆ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕೆಲವು ಹಾರ್ಮೋನುಗಳು ಜೀವಕೋಶಗಳನ್ನು ಸರಿಪಡಿಸುವ ಮೂಲಕ ದೇಹದ ಶಕ್ತಿಯ ಬಳಕೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಅನೇಕರು ತಮ್ಮ ಬಿಡುವಿಲ್ಲದ ಜೀವನಶೈಲಿ ಅಥವಾ ಅಭ್ಯಾಸಗಳಿಂದ ಸಾಕಷ್ಟು ನಿದ್ರೆ ಮಾಡುವುದಿಲ್ಲ. ಇಂತವರಿಗೆ ಕಾಲ ಕ್ರಮೇಣ ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಖಿನ್ನತೆ, ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಅಪಾಯವನ್ನು ಹೊಂದಿರುತ್ತಾರೆ.


ಇದನ್ನೂ ಓದಿ: Superfood: ʼಈʼ ಸೂಪರ್‌ ಫುಡ್‌ ಹಲವಾರು ದೀರ್ಘಕಾಲದ ಕಾಯಿಲೆಗಳನ್ನ ಗುಣಪಡಿಸುತ್ತೆ! ಇಂದೇ ಟ್ರೈ ಮಾಡಿ


ಆರೋಗ್ಯ ತಜ್ಞರ ಪ್ರಕಾರ, ರಾತ್ರಿ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರು ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸರಿಯಾಗಿ ನಿದ್ದೆ ಮಾಡದಿರುವುದುರಿಂದ ಎದುರಾಗುವ ಆರೋಗ್ಯದ ಅಪಾಯಗಳನ್ನು ತಿಳಿದ ನಂತರ, ನಿದ್ರೆಯ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಹಾಗಾದ್ರೆ ಎಷ್ಟು ಗಂಟೆ ನಿದ್ರೆ ಮಾಡಬೇಕೆಂಬ ಪ್ರಶ್ನೆ ಮೂಡುತ್ತದೆ. ನಿದ್ರೆಯ ಅವಧಿ ಆಯಾ ವಯಸ್ಸಿಗೆ ಅನುಗುಣವಾಗಿರುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್(NSF) ಅಧ್ಯಯನದ ಪ್ರಕಾರ ವಯಸ್ಸಿನ ಆಧಾರದ ಮೇಲೆ ನಿದ್ರೆ ಅವಧಿ ಅವಲಂಬಿತವಾಗಿರುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...  


* 0-3 ತಿಂಗಳು: ನಿದ್ರೆಯ ಸಮಯ 14-17 ಗಂಟೆಗಳಿರಬೇಕು. 9 ಗಂಟೆಗಿಂತ ಕಡಿಮೆಯಾಗಬಾರದು & 19 ಗಂಟೆಗಿಂತ ಹೆಚ್ಚಾಗಬಾರದು.
* 4-11 ತಿಂಗಳು: 12-15 ಗಂಟೆಗಳ ನಿದ್ರೆ ಅವಶ್ಯಕ. 10 ಗಂಟೆಗಿಂತ ಕಡಿಮೆ ಅಥವಾ 18 ಗಂಟೆಗಿಂತ ಹೆಚ್ಚು ನಿದ್ರೆ ಮಾಡಬಾರದು.
* 1-2 ವರ್ಷ: 11-14 ಗಂಟೆ ನಿದ್ರೆ ಮುಖ್ಯ. 9 ಗಂಟೆಗಿಂತ ಕಡಿಮೆ ಅಥವಾ 16 ಗಂಟೆಗಿಂತ ಹೆಚ್ಚು ನಿದ್ರೆ ಮಾಡಬಾರದು.
* 3-5 ವರ್ಷ: ಈ ವಯಸ್ಸಿನವರಿಗೆ 10-13 ಗಂಟೆಗಳ ನಿದ್ರೆ ಕಡ್ಡಾಯ. 8 ಗಂಟೆಗಿಂತ ಕಡಿಮೆ ಅಥವಾ 14 ಗಂಟೆಗಿಂತ ಹೆಚ್ಚು ನಿದ್ರೆ ಮಾಡುವಂತಿಲ್ಲ.
* 6-13 ವರ್ಷ: ನಿದ್ರೆಯ ಸಮಯ 9-11 ಗಂಟೆ ಇರಬೇಕು. 7 ಗಂಟೆಗಿಂತ ಕಡಿಮೆ ಅಥವಾ 12 ಗಂಟೆಗಿಂತ ಹೆಚ್ಚಿರಬಾರದು.
* 14-17 ವರ್ಷ: 8-10 ಗಂಟೆ ನಿದ್ರೆ ಅತ್ಯವಶ್ಯಕ. 7 ಗಂಟೆಗಿಂತ ಕಡಿಮೆ ಅಥವಾ 11 ಗಂಟೆಗಿಂತ ಹೆಚ್ಚಿರಬಾರದು.
* 18-25 ವರ್ಷ: ಈ ವಯಸ್ಸಿನವರಿಗೆ 7-9 ಗಂಟೆ ನಿದ್ರೆ ಅವಶ್ಯಕ. 6 ಗಂಟೆಗಿಂತ ಕಡಿಮೆ ಅಥವಾ 11 ಗಂಟೆಗಿಂತ ಹೆಚ್ಚಿನ ಸಮಯ ಮಲಗಬಾರದು.
* 26-64 ವರ್ಷ: ಈ ವಯಸ್ಸಿನವರಿಗೆ 7-9 ಗಂಟೆ ನಿದ್ರೆ ಬೇಕಾಗುತ್ತದೆ. 6 ಗಂಟೆಗಿಂತ ಕಡಿಮೆ ಅಥವಾ 10 ಗಂಟೆಗಿಂತ ಹೆಚ್ಚು ನಿದ್ರಿಸಬಾರದು.
* 65+: ಈ ವಯೋಮಾನದವರಿಗೆ 7-8 ಗಂಟೆ ನಿದ್ರೆ ಅತ್ಯವಶ್ಯಕ. 5 ಗಂಟೆಗಿಂತ ಕಡಿಮೆ ಮತ್ತು 9 ಗಂಟೆಗಿಂತ ಹೆಚ್ಚು ನಿದ್ರೆ ಮಾಡಬಾರದು.


ಇದನ್ನೂ ಓದಿ: ಸಕ್ಕರೆ ಕಾಯಿಲೆ ಇದ್ದವರು ಅಪ್ಪಿತಪ್ಪಿಯೂ ಈ 4 ಹಣ್ಣುಗಳನ್ನು ಸೇವಿಸಬೇಡಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ