Tooth brush expiry : ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ನಾವು ಹಲ್ಲುಜ್ಜಲು ಬಳಸುವ ಟೂತ್ ಬ್ರಶ್ ಅನ್ನು ಎಷ್ಟು ದಿನ ಬದಲಾಯಿಸಬೇಕು ಅಂತ ಹಲವರಿಗೆ ಗೊತ್ತಿಲ್ಲ.. ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ನಿಯಮಿತವಾಗಿ ಬದಲಾಯಿಸುವ ಮೂಲಕ ನಿಮ್ಮ ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ, ಟೂತ್ ಬ್ರಷ್ ಅನ್ನು ಹಲ್ಲು ಮತ್ತು ಒಸಡುಗಳಲ್ಲಿ ಸಿಲುಕಿಹಾಕಿಕೊಂಡ ಪ್ಲೇಕ್ ಮತ್ತು ಆಹಾರದ ಕಣಗಳನ್ನು ತೆಗೆದುಹಾಕಲು ವಿನ್ಯಾಸಗೊಳಿಸಲಾಗಿದೆ. ಆದರೆ ಒಂದು ನಿರ್ದಿಷ್ಟ ಸಮಯದ ನಂತರ ಬ್ರಷ್‌ ಹಾಳಾಗಿ ಶುದ್ಧೀಕರಣ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.. ಆದರೂ ಅದನ್ನ ಬಳಸಿದರೆ ಹಲ್ಲು ಮತ್ತು ಒಸಡುಗಳ ಸಮಸ್ಯೆಗೆ ಕಾರಣವಾಗುಬೇಕಾಗುತ್ತದೆ.. 


ಇದನ್ನೂ ಓದಿ:ಈ ಎಲೆಯನ್ನ ನೆನೆಸಿದ ನೀರನ್ನು ಕುಡಿದರೆ ಹೊಟ್ಟೆಯಲ್ಲಿರುವ ಕಠಿಣ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ..! ಅನುಮಾನ ಬೇಡ..


ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕು. ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ರೋಗಾಣುಗಳನ್ನು ಹರಡುವುದನ್ನು ತಪ್ಪಿಸಲು ನೀವು ಚೇತರಿಸಿಕೊಂಡ ನಂತರ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸುವುದು ಉತ್ತಮ. ಇದು ಮರು ಸೋಂಕು ಹರಡುವಿಕೆಯನ್ನು ತಡೆಯುತ್ತದೆ.


ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ನಿಯಮಿತವಾಗಿ ಬದಲಾಯಿಸುವ ಪ್ರಯೋಜನಗಳು


ಟೂತ್ ಬ್ರಷ್ ಅನ್ನು ನೀವು ಆಗಾಗ್ಗೆ ಬದಲಾಯಿಸಿದಾಗ, ಹಲ್ಲು ಮತ್ತು ಒಸಡುಗಳಲ್ಲಿ ಸಿಲುಕಿಹಾಕಿಕೊಂಡಿದ್ದ ಪ್ಲೇಕ್ ಮತ್ತು ಆಹಾರದ ಕಣಗಳನ್ನು ಸರಿಯಾಗಿ ತೆಗೆದುಹಾಕುತ್ತದೆ. 


ಉತ್ತಮ ಟೂತ್ ಬ್ರಷ್ ಬಳಕೆಯಿಂದ ಹಲ್ಲು ನೋವು ಮತ್ತು ವಸಡು ಸಂಬಂಧಿತ ಕಾಯಿಲೆಗಳಿಂದ ದೂರವಿರಬಹುದು. 


ಸ್ವಚ್ಛವಾದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಕಡಿಮೆ. ಇದರಿಂದ ನಿಮಗೆ ಕೆಟ್ಟ ಉಸಿರಾಟದ ಸಮಸ್ಯೆ ಇರುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.