ಮಧುಮೇಹದಲ್ಲಿ ಕಬ್ಬಿನ ರಸವನ್ನು ಕುಡಿಯುವುದು ಎಷ್ಟು ಸುರಕ್ಷಿತ?
Sugarcane Juice In Diabetes: ಕಬ್ಬಿನ ರಸವು ಉಲ್ಲಾಸಕರ ಮತ್ತು ರುಚಿಕರವಾಗಿದೆ. ಇದನ್ನು ಕುಡಿಯುವುದರಿಂದ ಯಕೃತ್ತು ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಕಡಿಮೆ ಆಗುತ್ತದೆ. ಆದರೆ, ಮಧುಮೇಹಿಗಳು ಕಬ್ಬಿನ ರಸವನ್ನು ಕುಡಿಯುವುದು ಒಳ್ಳೆಯದೇ? ಈ ಬಗ್ಗೆ ಇಲ್ಲಿದೆ ಮಾಹಿತಿ.
Sugarcane Juice In Diabetes: ಕಬ್ಬು ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕಬ್ಬನ್ನು ಅದರ ಸಿಪ್ಪೆ ಸುಲಿದು ನೇರವಾಗಿಯೂ ತಿನ್ನಬಹುದು, ಇಲ್ಲವೇ ಅದರ ರಸವನ್ನಾದರೂ ಕುಡಿಯಬಹುದು. ಅಂದಹಾಗೆ, ಜನರು ಬೇಸಿಗೆಯಲ್ಲಿ ಕಬ್ಬಿನ ರಸವನ್ನು ಹೆಚ್ಚು ಕುಡಿಯುತ್ತಾರೆ. ಕಬ್ಬಿನ ರಸವು ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಬ್ಬಿನರಸವನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ ಮತ್ತು ದೇಹವು ಹೈಡ್ರೇಟ್ ಆಗಿರುತ್ತದೆ. ಇದನ್ನು ಕುಡಿಯುವುದರಿಂದ ಜನರು ಬೇಸಿಗೆಯಲ್ಲಿ ಶಾಖದಿಂದ ಪಾರಾಗುತ್ತಾರೆ. ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. ಇದು ದೇಹಕ್ಕೆ ಔಷಧಿಯಾಗಿ ಕೆಲಸ ಮಾಡುತ್ತದೆ. ಚಳಿಗಾಲದಲ್ಲಿ ಜನರು ಕಬ್ಬಿನ ರಸವನ್ನು ಕುಡಿಯುವುದು ಅಪರೂಪ. ಕಬ್ಬಿನ ರಸವನ್ನು ಸಂಸ್ಕರಿಸಿ ಇಡಲು ಸಾಧ್ಯವಿಲ್ಲ.
ಇದನ್ನೂ ಓದಿ- Dandruff Treatment: ಡ್ಯಾಂಡ್ರಫ್ ಸಮಸ್ಯೆಗೆ ಕೇವಲ 10 ರೂ.ಗಳಲ್ಲಿ ಪಡೆಯಿರಿ ಪರಿಹಾರ
ಮಧುಮೇಹಿಗಳು ಕಬ್ಬಿನ ರಸವನ್ನು ಕುಡಿಯಬಹುದೇ?
ನಿಮಗೆಲ್ಲ ತಿಳಿದಿರುವಂತೆ ಕಬ್ಬಿನ ರಸವು ರುಚಿಯಲ್ಲಿ ತುಂಬಾ ಸಿಹಿಯಾಗಿದೆ. ಕಬ್ಬಿನಲ್ಲಿ ಸಕ್ಕರೆಯ ಪ್ರಮಾಣ ಅತಿ ಹೆಚ್ಚು. ಆರೋಗ್ಯ ತಜ್ಞರ ಪ್ರಕಾರ, ಮಧುಮೇಹಿಗಳಿಗೆ ಕಬ್ಬಿನ ರಸವನ್ನು ಸರಿಯಾದ ಆಯ್ಕೆ ಎಂದು ಪರಿಗಣಿಸಲಾಗುವುದಿಲ್ಲ. ಎಲ್ಲಾ ಇತರ ಸಕ್ಕರೆ ಪಾನೀಯಗಳಂತೆ, ಇದು ಮಧುಮೇಹ ರೋಗಿಗಳಿಗೆ ತುಂಬಾ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಏಕೆಂದರೆ ಕಬ್ಬಿನ ರಸವನ್ನು ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುವ ಅಪಾಯವಿದೆ.
ಇದನ್ನೂ ಓದಿ- Health Tips: ಪೋಷಕಾಂಶಗಳ ನಿಧಿ ನುಗ್ಗೆಯಿಂದ ಕಣ್ಮರೆಯಾಗುತ್ತೆ ಮಧುಮೇಹ ಮತ್ತು ಕೊಲೆಸ್ಟ್ರಾಲ್
ವೈದ್ಯರು ಮಧುಮೇಹ ಕಾಯಿಲೆಯಲ್ಲಿ ಕಬ್ಬಿನ ರಸವನ್ನು ಕುಡಿಯಲು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ.
ವಾಸ್ತವವಾಗಿ, ಕಬ್ಬಿನ ರಸವನ್ನು ಕುಡಿಯುವುದರಿಂದ ದೇಹದಿಂದ ಪಾಲಿಫಿನಾಲ್ ಉತ್ಕರ್ಷಣ ನಿರೋಧಕಗಳು ಬಿಡುಗಡೆಯಾಗುತ್ತವೆ. ಇದರಿಂದ ಮೇದೋಜೀರಕ ಗ್ರಂಥಿಯು ಅಗತ್ಯಕ್ಕಿಂತ ಹೆಚ್ಚು ಇನ್ಸುಲಿನ್ ಉತ್ಪಾದಿಸುತ್ತದೆ. ಆದ್ದರಿಂದ, ಮಧುಮೇಹಿಗಳು ಕಬ್ಬಿನ ರಸವನ್ನು ಕುಡಿಯುವ ಬದಲು ಯಾವುದೇ ತಾಜಾ ಹಣ್ಣಿನ ರಸ ಅಥವಾ ಸಕ್ಕರೆ ಮುಕ್ತ ಚಹಾ, ಕಾಫಿಯನ್ನು ಸೇವಿಸಬಹುದು ಎಂದು ಹೇಳಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ