ಹಾಲನ್ನು ಎಷ್ಟು ಬಾರಿ ಕುದಿಸಿದರೆ ಆರೋಗ್ಯಕ್ಕೆ ಒಳ್ಳೆಯದು.. ಹೇಗೆ ಕುದಿಸಿದರೆ ಉತ್ತಮ..! ಇಲ್ಲಿವೆ ಅವಶ್ಯಕ ಸಲಹೆಗಳು..
Right way to boil milk : ಪ್ರತಿ ದಿನ ಸರಿಯಾದ ಪ್ರಮಾಣದ ಹಾಲನ್ನು ಸೇವಿಸುವುದು ಒಟ್ಟಾರೆ ಆರೋಗ್ಯ ಮತ್ತು ರೋಗಗಳ ತಡೆಗಟ್ಟುವಿಕೆಗೆ ಬಹಳ ಮುಖ್ಯ. ಹಾಲು ಕ್ಯಾಲ್ಸಿಯಂ, ಪ್ರೊಟೀನ್, ಜೀವಸತ್ವಗಳು ಮತ್ತು ಅನೇಕ ಖನಿಜಗಳಿಂದ ಸಮೃದ್ಧವಾಗಿದೆ.. ಇಷ್ಟೇಲ್ಲಾ ಲಾಭಗಳಿರುವ ಹಾಲನ್ನು ಕೆಲವರು ಅರಿವಿಲ್ಲದೆ ತಪ್ಪು ತಪ್ಪಾಗಿ ಬಳಕೆ ಮಾಡುತ್ತೇವೆ.
How to boil milk : ಹಾಲು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಆಹಾರ ಉತ್ಪನ್ನಗಳಲ್ಲಿ ಒಂದು. ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಇದು ಅತ್ಯಗತ್ಯ. ಒಟ್ಟಾರೆ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗೆ ಪ್ರತಿದಿನ ಸರಿಯಾದ ಪ್ರಮಾಣದ ಹಾಲನ್ನು ಸೇವಿಸುವುದು ಬಹಳ ಮುಖ್ಯ.
ಹಾಲು ಕ್ಯಾಲ್ಸಿಯಂ, ಪ್ರೊಟೀನ್, ಜೀವಸತ್ವಗಳು ಮತ್ತು ಅನೇಕ ಖನಿಜಗಳಿಂದ ಸಮೃದ್ಧವಾಗಿದೆ. ಇಂತಹ ಹಾಲನ್ನು ಕುಡಿಯುವುದರಿಂದ ಹಲವಾರು ಲಾಭಗಳು ಸಿಗುತ್ತವೆ ಎಂದು ಗೊತ್ತಿದ್ದರೂ ಹಾಲು ಕುಡಿಯುವಾಗ ಅರಿವಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ.. ಅಲ್ಲದೆ ಅದನ್ನು ಕುದಿಸುವ ವಿಚಾರದಲ್ಲಿಯೂ ಎಡವುತ್ತಾರೆ..
ಇದನ್ನೂ ಓದಿ: ಮಕ್ಕಳಿಗೆ ಹಸುವಿನ ಹಾಲನ್ನು ಕುಡಿಸುತ್ತೀರಾ..? ಹಾಗಾದರೆ ಈ 5 ಮಹತ್ವದ ವಿಷಯಗಳನ್ನು ತಿಳಿಯಿರಿ..!
ಅನೇಕ ಜನರು ಹಾಲು ದಪ್ಪವಾಗಲು, ಕೆನೆ ಬರಲಿ ಅಂತ ಹೆಚ್ಚು ಹೊತ್ತು ಕುದಿಸುತ್ತಾರೆ. ಅದೇ ಸಮಯದಲ್ಲಿ, ಕೆಲವರು ಹಾಲನ್ನು ಪದೇ ಪದೇ ಕುದಿಸುತ್ತಾರೆ. ಇದಲ್ಲದೇ ಕೆಲವರು ಹಾಲು ಕುದಿಯಲು ಆರಂಭಿಸಿದ ಮೇಲೆ ಸಿಮ್ ನಲ್ಲಿ ಗ್ಯಾಸ್ ಹಾಕಿ ಹೆಚ್ಚು ಹೊತ್ತು ಕುದಿಯಲು ಬಿಡುತ್ತಾರೆ. ಹಾಲು ಕುದಿಸಲು ಕೆಲವೊಂದಿಷ್ಟು ವಿಧಾನಗಳಿವೆ. ಅದರಂತೆ, ಹಾಲನ್ನು ಎಷ್ಟು ಬಾರಿ ಕುದಿಸಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.
ಹಾಲನ್ನು ದೀರ್ಘಕಾಲದವರೆಗೆ ಕುದಿಸುವುದು ಅಥವಾ ಪದೇ ಪದೇ ಕುದಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳನ್ನು ನಾಶವಾಗುತ್ತವೆ. ಇದರಿಂದ ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಪೂರ್ಣ ಪ್ರಮಾಣದಲ್ಲಿ ದೊರೆಯುವುದಿಲ್ಲ.
ಇದನ್ನೂ ಓದಿ:ಮಳೆಯಲ್ಲಿ ಒದ್ದೆಯಾದರೆ ತಕ್ಷಣ ಈ 5 ಕೆಲಸಗಳನ್ನು ಮಾಡಿ..! ಈ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ..!
ಹಾಲನ್ನು ಕುದಿಸುವುದು ಹೇಗೆ..? : ಗ್ಯಾಸ್ ಮೇಲೆ ಹಾಲನ್ನು ಇಟ್ಟಾಗ, ಅದನ್ನು ನಿರಂತರವಾಗಿ ಚಮಚದಿಂದ ಕಲಕುತ್ತಿರಬೇಕು. ಒಮ್ಮೆ ಕುದಿಸಿದ ಹಾಲನ್ನು ಮತ್ತೆ ಹೆಚ್ಚು ಹೊತ್ತು ಕುದಿಸುವ ತಪ್ಪು ಮಾಡಬೇಡಿ. ಹಾಲನ್ನು ಒಮ್ಮೆ ಕುದಿಸಿದ ನಂತರ, ಪದೇ ಪದೇ ಕುದಿಸುವುದರಿಂದ ಅದರ ಪೋಷಕಾಂಶಗಳು ನಾಶವಾಗುತ್ತವೆ. ಹಾಲನ್ನು ಒಮ್ಮೆ ಮಾತ್ರ ಕುದಿಸಲು ಪ್ರಯತ್ನಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.