Cholesterol control : ʼಕೊಲೆಸ್ಟ್ರಾಲ್ʼ ಹೆಚ್ಚುತ್ತಿದೆಯೇ? ಈ ಸೂಪರ್ ಫುಡ್ ಗಳಿಂದ ಕೊಬ್ಬು ಕರಗಿಸಿ..!
Control Cholestero by food : ಶರೀರದಲ್ಲಿ LDL (Low-density lipoprotein) ಪರಿಮಾಣದಿಂದಾಗಿ ಕೊಬ್ಬು ಹೆಚ್ಚಾಗಿ ಬೆಳೆಯುವುದರಿಂದ ಅನೇಕ ರೀತಿಯ ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಎಷ್ಟು ಬೇಗನೆ ಕೊಬ್ಬನ್ನು ನಿಯಂತ್ರಣ ಮಾಡುತ್ತೇವೆಯೊ ಅಷ್ಟು ಉತ್ತಮ. ಇಲ್ಲದಿದ್ದರೆ ತೀವ್ರ ಅನಾರೋಗ್ಯ ಸಮಸ್ಯೆಗಳು ತಪ್ಪವು!
Tips to Control Cholesterol : ದೇಹದಲ್ಲಿ ಎರಡು ವಿಧದ ಕೊಲೆಸ್ಟ್ರಾಲ್‌ಗಳಿರುತ್ತವೆ, ಒಂದು HDL ಮತ್ತೊಂದು LDL. ಹೆಚ್‌ಡಿಎಲ್ ದೇಹಕ್ಕೆ ಉತ್ತಮ, ಎಲ್‌ಡಿಎಲ್ ಕೆಟ್ಟ ಕೊಲೆಸ್ಟ್ರಾಲ್ ಆಗಿದ್ದು ದೇಹದ ಆಕಾರ ಹೆಚ್ಚಿಸುತ್ತದೆ. ಇದರಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ತೊಂದರೆಗಳು ಉಂಟಾಗುತ್ತವೆ. ಇದಲ್ಲದೆ, ರಕ್ತನಾಳಗಳಲ್ಲಿ ಈ ಎಲ್‌ಡಿಎಲ್ ಶೇಖರಣೆಯಿಂದಾಗಿ ಹೃದಯಾಘಾತದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಆದ್ದರಿಂದ, ವಿವಿಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರಾಣಾಪಾಯವಾಗುವ ಸಂಭವವಿದೆ. ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ಹೇಗೆ ಪಡೆಯುವುದು ಎಂದು ತಿಳಿಯೋಣ.
ಇದನ್ನೂ ಓದಿ: Health Tips: ಒಂದಲ್ಲ, ಎರಡಲ್ಲ…11 ಔಷಧೀಯ ಗುಣವುಳ್ಳ ಈ ಬಣ್ಣದ ಅಕ್ಕಿಯ ಗಂಜಿ ಕ್ಯಾನ್ಸರ್ ರೋಗವನ್ನು ಬುಡಸಮೇತ ಕಿತ್ತುಹಾಕುತ್ತೆ!
ಸೇಬು ಹಣ್ಣು : ಸೇಬುಗಳು ಪೆಕ್ಟಿನ್‌ನಂತಹ ಕರಗುವ ಫೈಬರ್‌ಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದ ಪ್ರತಿದಿನ ಸೇಬುಗಳನ್ನು ತಿನ್ನುವುದರಿಂದ ಎಲ್‌ಡಿಎಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದಲ್ಲದೆ, ಇದರಲ್ಲಿರುವ ಫೈಬರ್ ಪ್ರಮಾಣವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇದು ಪರಿಣಾಮಕಾರಿಯಾಗಿದೆ.
ಬಾದಾಮಿ: ಬಾದಾಮಿಯಲ್ಲಿರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು 7 ರಿಂದ 10 ಬಾದಾಮಿಗಳನ್ನು ತೆಗೆದುಕೊಳ್ಳಬೇಕು.
ಇದನ್ನೂ ಓದಿ: Skin Care: ಮೊಡವೆ ಸಮಸ್ಯೆ ಬುಡಸಮೇತ ಕಿತ್ತೊಗೆಯಲು ಕಿತ್ತಳೆ ಹಣ್ಣಿನ ಸಿಪ್ಪೆ ಬೆಸ್ಟ್! ಹೀಗೆ ಹಚ್ಚಿದರೆ ಅದ್ಭುತ ಪ್ರಯೋಜನ
ಬಾರ್ಲಿ, ಓಟ್ಸ್: ಈ ಆಹಾರಗಳಲ್ಲಿ ಬೀಟಾ-ಗ್ಲುಕಾನ್‌ಗಳಂತಹ ಕರಗುವ ಫೈಬರ್‌ನಲ್ಲಿ ಅಧಿಕವಾಗಿರುತ್ತದೆ. ಹಾಗಾಗಿ ಇವುಗಳನ್ನು ಪ್ರತಿದಿನ ಆಹಾರದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ನಿವಾರಣೆಯಾಗುತ್ತವೆ. ಇದರ ಗುಣಲಕ್ಷಣಗಳು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಆದ್ದರಿಂದ ನೀವು ಪ್ರತಿದಿನ ಬಾರ್ಲಿ ಮತ್ತು ಓಟ್ಸ್‌ನಿಂದ ಮಾಡಿದ ರೊಟ್ಟಿಗಳನ್ನು ತಿನ್ನುವುದು ಉತ್ತಮ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ