ಕೋಲ್ಕತಾ: ಸ್ಥೂಲಕಾಯತೆಯನ್ನು ಎದುರಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಲು ಶಾಲೆಯ ಪಠ್ಯಕ್ರಮದಲ್ಲಿ ಪಾಠವನ್ನು ಪರಿಚಯಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಯೊಬ್ಬರು ಪಠ್ಯಕ್ರಮವನ್ನು ಪ್ರಾಥಮಿಕ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.


ಸೈದ್ಧಾಂತಿಕ ಜ್ಞಾನವನ್ನು ಒದಗಿಸುವುದರ ಹೊರತಾಗಿಯೂ, ಸ್ಥೂಲಕಾಯತೆ, ನಿರ್ದಿಷ್ಟ ಮಾನದಂಡಗಳ ನಿಯಮಿತ ಮಾಪನ ಮತ್ತು ಆರೋಗ್ಯಕರ ಆಹಾರ ಮುಂತಾದ ಪ್ರಾಯೋಗಿಕ ಅಂಶಗಳನ್ನು ಎದುರಿಸಲು ದೈಹಿಕ ಚಟುವಟಿಕೆಯ ಪ್ರಾಮುಖ್ಯತೆಗೂ ಸಹ ಇದರಲ್ಲಿ ಒತ್ತು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.


ಸ್ಥೂಲಕಾಯವನ್ನು ತಪ್ಪಿಸಲು ಯೋಗಾಭ್ಯಾಸ ಮಾಡುವುದರ ಬಗ್ಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಹೇಗೆ ಎಂಬುದರ ಬಗ್ಗೆ ಶಿಕ್ಷಕರಿಗೂ ತರಬೇತಿ ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.