ತುಟಿ ಕಪ್ಪಾಗಿದೆಯೇ? ಹಾಗಿದ್ದರೆ ಇಲ್ಲಿವೆ ಟಿಪ್ಸ್!
ನೈಸರ್ಗಿಕವಾಗಿ ಸುಂದರ ಗುಲಾಬಿ ಬಣ್ಣದ ತುಟಿಗಳನ್ನು ನಿಮ್ಮದಾಗಿಸಿಕೊಳ್ಳಲು ಈ ಕೆಳಗಿನ ಕೆಲವು ಟಿಪ್ಸ್`ಗಳನ್ನು ಅನುಸರಿಸಿ.
ನವದೆಹಲಿ: ಅತೀ ಹೆಚ್ಚು ಟೀ, ಕಾಫಿ ಕುಡಿಯುವುದು, ಧೂಮಪಾನ ಮಾಡುವುದು, ಚಳಿಗಾಲದಲ್ಲಿ ಸರಿಯಾದ ಆರೈಕೆ ಮಾಡದಿರುವುದು ಹಾಗೂ ಒಡೆಯುವುದರಿಂದ ತುಟಿಗಳು ಕಪ್ಪಾಗುತ್ತವೆ. ಇದರಿಂದಾಗಿ ನಿಮ್ಮ ಮುಖದ ಸೌಂದರ್ಯವೂ ಕಡಿಮೆಯಾಗುತ್ತದೆ. ಹಾಗಿದ್ದರೆ, ನೈಸರ್ಗಿಕವಾಗಿ ಸುಂದರ ಗುಲಾಬಿ ಬಣ್ಣದ ತುಟಿಗಳನ್ನು ನಿಮ್ಮದಾಗಿಸಿಕೊಳ್ಳಲು ಈ ಕೆಳಗಿನ ಕೆಲವು ಟಿಪ್ಸ್'ಗಳನ್ನು ಅನುಸರಿಸಿ.
* ಪ್ರತಿನಿತ್ಯ ತುಟಿಗೆ ಮಾಶ್ಚರೈಸರ್ ಹಚ್ಚಿ.
* ಪ್ರತಿನಿತ್ಯ ಬೀಟ್ ರೂಟ್ ರಸವನ್ನು ತುಟಿಗೆ ಲೇಪಿಸಿ.
* ತುಟಿ ಒಣಗದಂತೆ ತಡೆಯಲು ರಾತ್ರಿ ವೇಳೆ ಗ್ಲಿಸರಿನ್ ಹಚ್ಚಿ.
* ನಿಂಬೆ ಹಣ್ಣಿನ ರಸ ಹಾಗೂ ಜೇನುತುಪ್ಪ ಬೆರೆಸಿ ತುಟಿಗೆ ಹಚ್ಚಿ. ಇದು ಒಣ ಚರ್ಮವನ್ನು ಹೋಗಲಾಡಿಸಿ ಮೃದುತ್ವ ತಂದುಕೊಡುತ್ತದೆ.
* ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಿರಿ.
* ತುಟಿ ಒಣಗಿ ಕಪ್ಪಾಗದಂತೆ ತಡೆಯಲು ರಾತ್ರಿ ಹೊತ್ತು ಮಲಗುವ ಮುನ್ನ ಬಾದಾಮಿ ಎಣ್ಣೆ ಹಚ್ಚಿ.
* ಹಾಲಿನ ಕೆನೆಯನ್ನು ತುಟಿಗೆ ಹಚ್ಚುವುದರಿಂದ ತುಟಿಗಳು ಮೃದುವಾಗಿ, ಶುಷ್ಕವಾಗಿರಲು ಸಹಾಯವಾಗುತ್ತದೆ.