ನವದೆಹಲಿ : ಉದ್ದ ದಟ್ಟನೆಯ ಕೂದಲನ್ನು ಹೊಂದುವುದು ಅದೆಷ್ಟೋ ಹೆಣ್ಣುಮಕ್ಕಳ ಕನಸು. ಇದಕ್ಕಾಗಿ ಏನೆಲ್ಲಾ ಕಸರತ್ತುಗಳನ್ನು ಬೇಕಾದರೂ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೀತಿಯ ಎಣ್ಣೆ, ಶ್ಯಾಂಪುಗಳಿಗೂ ಮಾರುಹೋಗುತ್ತಾರೆ. ಸ್ಪಾ ಮಸಾಜ್ ಎಂದು ಪಾರ್ಲರ್ ಗಳಿಗೆ ಹಾಕುವ ದುಡ್ಡಿಗೆ ಲೆಕ್ಕವೇ ಇರುವುದಿಲ್ಲ. ಇಷ್ಟೆಲ್ಲಾ ಆದ ಮೇಲೂ ಪರಿಣಾಮ ಏನೂ ಇಲ್ಲ ಎಂದು ಗೊತ್ತಾದ ಮೇಲೆ ರೋಧನೆ ಬೇರೆ.. ಕೂದಲ ಬೆಳವಣಿಗೆಗೆ ಮನೆಯಲ್ಲೇ ಉಪಾಯ ಕಂಡುಕೊಳ್ಳಬಹುದು. ಅದು ಕೂಡಾ ಕಡಿಮ ಖರ್ಚಿನಲ್ಲಿ..


COMMERCIAL BREAK
SCROLL TO CONTINUE READING

ಪಾಲಕ್ ಸೊಪ್ಪು (Spinach)ಯಾರಿಗೆ ತಾನೇ ಗೊತ್ತಿಲ್ಲ. ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ಪೌಷ್ಟಿಕಾಂಶಗಳಿರುತ್ತವೆ. ಕೂದಲು ಸರಿಯಾಗಿ ಬೆಳೆಯಬೇಕಾದರೆ, (Hair growth) ಪೌಷ್ಟಿಕ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ನೀವು ಕೂದಲು ಬೆಳೆಸಲು ಇಷ್ಟಪಡುವವರಾದರೆ ನಿಮ್ಮ ಡಯಟ್ ನಲ್ಲಿ (Diet) ಪಾಲಕ್ ಅನ್ನು ಖಂಡಿತವಾಗಿಯೂ ಸೇರಿಸಿ.
ಪಾಲಕ್  ಹೇರ್ ಪ್ಯಾಕ್ (Hair pack)ಅನ್ನು ಬಳಸುವುದರಿಂದ ಉದ್ದನೆಯ ದಟ್ಟ  ಕೂದಲನ್ನು ಪಡೆಯಬಹುದು. 


ಇದನ್ನೂ ಓದಿ: Pain killer ತೆಗೆದುಕೊಳ್ಳುವ ಮುನ್ನಹುಷಾರು..ಒಂದು ಸಮಸ್ಯೆಯ ಬದಲು ಹತ್ತು ಸಮಸ್ಯೆ ಎದುರಾಗಬಹುದು


ಪಾಲಕ್ ಹೇರ್ ಪ್ಯಾಕ್ ಮಾಡುವುದು ಹೇಗೆ? :


1.ಹೇರ್ ಪ್ಯಾಕ್ ಗೆ ಒಂದು ಕಪ್ ಪಾಲಕ್ ಎಲೆಗಳನ್ನು ಬಳಸಿ
2.ಒಂದು ಚಮಚ ಜೇನುತುಪ್ಪ
3.ಒಂದು ಚಮಚ ಆಲಿವ್, ತೆಂಗಿನೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ಅನ್ನು ತೆಗೆದುಕೊಳ್ಳಿ.


ಈ ಎಲ್ಲಾ ಪದಾರ್ಥಗಳನ್ನ  ಹಾಕಿ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ ಅನ್ನು  ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಅದನ್ನು 30 ನಿಮಿಷದಿಂದ ಒಂದು ಗಂಟೆಯವರೆಗೆ ಬಿಡಿ. ನಂತರ  ಸಲ್ಫೇಟ್ ಮುಕ್ತ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಕೂದಲು ತೊಳೆಯಲು ತಣ್ಣೀರು ಅಥವಾ ಉಗುರು ಬೆಚ್ಚಗಿನ  ನೀರನ್ನುಬಳಸಿ. ಈ ಪ್ಯಾಕ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಹಚ್ಚಬಹುದು.  ಹೀಗೆ ಮಾಡುವುದರಿಂದ ಕೂದಲಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಜೇನುತುಪ್ಪ ಮತ್ತು ಎಣ್ಣೆ ಕೂದಲಿನ ಪೋಷಕಾಂಶಗಳು ಮತ್ತು ತೇವಾಂಶವನ್ನು ಹಿಡಿದಿಡುತ್ತದೆ. ಮತ್ತು ಕೂದಲು ಹಾನಿಯಾಗದಂತೆ ತಡೆಯುತ್ತದೆ.


ಇದನ್ನೂ ಓದಿ: Moringa : ಹಿತ್ತಲಲ್ಲೇ ಸಿಗುವ ನುಗ್ಗೇಕಾಯಿಯಲ್ಲಿದೆ ಇಷ್ಟೊಂದು ಅದ್ಭುತ ಗುಣಗಳು..!


ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ ಇರುತ್ತದೆ:
ಕಬ್ಬಿಣಾಂಶದ ಕೊರತೆಯು ಕೂದಲು ಉದುರುವಿಕೆಗೆ  ಕಾರಣವಾಗಬಹುದು. ಪಾಲಕ್ ಸೊಪ್ಪಿನಲ್ಲಿರುವ ಮೆಗ್ನೀಸಿಯಮ್, ಸತು ಕೂದಲು  ಬೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಇದ್ದು ಇದು ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ. 


ನಿಮ್ಮ ಡಯಟ್ನಲ್ಲಿ ಆರೋಗ್ಯಕರ ಆಹಾರಗಳನ್ನು ಸೇರಿಸಿ :
ಇದಲ್ಲದೆ, ಕೂದಲನ್ನು ವೇಗವಾಗಿ ಬೆಳೆಸಲು  ಪೌಷ್ಠಿಕ ಆಹಾರವನ್ನು ಸೇವಿಸುವುದು ಬಹಳಮುಖ್ಯ. ಕೂದಲಿನ ಬೆಳವಣಿಗೆಗೆ ಹಾಲು, (Milk) ಬಾಳೆಹಣ್ಣು (Banana) ಮತ್ತು ಮೊಟ್ಟೆಗಳನ್ನು (Egg) ಸೇವಿಸುವುದು ಕೂಡಾ ಪರಿಣಾಮಕಾರಿಯಾಗಿರುತ್ತದೆ. 


ಒಮೆಗಾ -3 ಬಳಕೆ:
ಕೂದಲು ವೇಗವಾಗಿ ಬೆಳೆಯಲು ಒಮೆಗಾ -3 (Omega 3) ಕೊಬ್ಬಿನ ಅಂಶವಿರುವ  ಮೀನುಗಳನ್ನು ಸೇವಿಸಬಹುದು. ಒಮೆಗಾ -3 ಕೂದಲಿನ ಸಾಂದ್ರತೆಯನ್ನು ಉಳಿಸಲು ಮತ್ತು ಕೂದಲು ಉದುರುವ ಅಪಾಯವನ್ನು ನಿವಾರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Women Health : ನಿಮಗೆ 40 ವರ್ಷವಾಯಿತಾ? ಹಾಗಿದ್ದರೆ ಈ ಆಹಾರಗಳನ್ನು ಖಂಡಿತಾ ಸೇವಿಸಿ


ಹಸಿರು ತರಕಾರಿಗಳು ಮತ್ತು ಡ್ರೈ ಫ್ರುಟ್ಸ್ ಬಳಸಿ : 
ವಾಲ್ ನಟ್, ಕಡಲೆಕಾಯಿ ಮತ್ತು ಪಿಸ್ತಾ ಮುಂತಾದವುಗಳನ್ನು ಸೇವಿಸಬಹುದು. ಇನ್ನು   ಮೊಸರು, (Curd) ಚೀಸ್, (Cheese) ಮಸೂರ, ಬೀನ್ಸ್, ಸೋಯಾ ಮತ್ತು ಬಟಾಣಿಗಳನ್ನು ತಿನ್ನುವುದರಿಂದಲೂ ಕೂದಲು ಉದುರುವುದನ್ನು ತಡೆದು ದಟ್ಟ ಕೂದಲು ಬೆಳೆಸಬಹುದು. ಇನ್ನು ಹಸಿರು ತರಕಾರಿಗಳನ್ನು ಸೇವಿಸಲು  ಮರೆಯಬೇಡಿ.


ಈ ಎಲ್ಲಾ ಸಲಹಾ ಸಾಮಗ್ರಿಗಳು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.