Exercise for Cervical: ಸರ್ವಿಕಲ್ ಸ್ಪಾಂಡಿಲೋಸಿಸ್ ನಿಂದಾಗಿ ಕುತ್ತಿಗೆ ನೋವು ಮತ್ತು ತಲೆ ಸುತ್ತುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸರ್ವಿಕಲ್ ಬೆನ್ನುಮೂಳೆಯ ದೌರ್ಬಲ್ಯವೆ ಕಾರಣ. ಆದರೆ, ಸರ್ವಿಕಲ್ ನೋವನ್ನು ನಿವಾರಿಸಲು ವ್ಯಾಯಾಮ ಮಾಡಬೇಕು. ಈ ಕುತ್ತಿಗೆ ವ್ಯಾಯಾಮಗಳು ಸರ್ವಿಕಲ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸರ್ವಿಕಲ್ ನೋವನ್ನು ನಿವಾರಿಸುವ ವ್ಯಾಯಾಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಈ ಕತ್ತಿನ ವ್ಯಾಯಾಮಗಳು ಸರ್ವಿಕಲ್ ನೋವನ್ನು ನಿವಾರಿಸುತ್ತದೆ


1. ನೆಕ್ ಸ್ಟ್ರೆಚ್
>> ಮೊದಲು ನಿಮ್ಮ ದೇಹವನ್ನು ನೇರ ಸ್ಥಿತಿಯಲ್ಲಿರಿಸಿ ಕುಳಿತುಕೊಳ್ಳಿ.
>> ಈಗ ನಿಮ್ಮ ಗಲ್ಲವನ್ನು ನಿಧಾನಕ್ಕೆ ಮುಂದಕ್ಕೆ ತಳ್ಳಿ.
>> ನಿಮ್ಮ ಕುತ್ತಿಗೆಯಲ್ಲಿ ಹಿಗ್ಗಿಸುವಿಕೆಯ ಅನುಭವ ಉಂಟಾಗುವವರೆಗೆ ತಳ್ಳಿ.
>> 5 ಸೆಕೆಂಡುಗಳ ಕಾಲ ಅದೇ ಸ್ಥಿತಿಯಲ್ಲಿರಿ ಮತ್ತು ನಂತರ ನಿಮ್ಮ ತಲೆಯನ್ನು ಸಾಮಾನ್ಯ ಸ್ಥಿತಿಗೆ ತೆಗೆದುಕೊಳ್ಳಿ.
>> ಇದರ ನಂತರ, ತಲೆಯನ್ನು ಹಿಂದಕ್ಕೆ ತಳ್ಳಿ , ಗಲ್ಲವನ್ನು ಮೇಲಕ್ಕೆತ್ತಿ 5 ಸೆಕೆಂಡುಗಳ ಕಾಲ ಅದೇ ಸ್ಥಿತಿಯಲ್ಲಿ ಉಳಿಯಿರಿ.
>> ಇದನ್ನು 5 ಬಾರಿ ಪುನರಾವರ್ತಿಸಿ.


2. ನೆಕ್ ಟಿಲ್ಟ್
>> ನೇರವಾದ ಸ್ಥಿತಿಯಲ್ಲಿ ಕುಳಿತುಕೊಳ್ಳಿ ಮತ್ತು ಗಲ್ಲವನ್ನು ಕೆಳಗೆ ತನ್ನಿ.
>> ನಿಮ್ಮ ಗಲ್ಲದಿಂದ ಎದೆಯನ್ನು ಸ್ಪರ್ಶಿಸಲು ಪ್ರಯತ್ನಿಸಿ.
>> 5 ಸೆಕೆಂಡುಗಳ ಕಾಲ ಈ ಸ್ಥಿತಿಯಲ್ಲಿರಿ ಮತ್ತು ನಂತರ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ.
>> ಇದನ್ನು ಕನಿಷ್ಠ 5 ಬಾರಿ ಮಾಡಿ.


3. ಸೈಡ್ ಟು ಸೈಡ್ ನೆಕ್ ಟಿಲ್ಟ್
>> ನೇರವಾಗಿ ಕುಳಿತು ನಿಮ್ಮ ಕುತ್ತಿಗೆಯನ್ನು ಒಂದು ಬದಿಗೆ ತಿರುಗಿಸಿ.
>> ನಿಮ್ಮ ಕಿವಿ ಭುಜವನ್ನು ಸ್ಪರ್ಶಿಸಲು ಪ್ರಾರಂಭಿಸಿದಾಗ, ನಿಲ್ಲಿಸಿ.
>> ಸುಮಾರು 5 ಸೆಕೆಂಡುಗಳ ಕಾಲ ಈ ಸ್ಥಿತಿಯಲ್ಲಿದ್ದ ನಂತರ, ಸಾಮಾನ್ಯ ಸ್ಥಿತಿಗೆ ಹಿಂತಿರುಗಿ.
>> ಈಗ ತಲೆಯನ್ನು ಸಾಮಾನ್ಯ ಸ್ಥಿತಿಯಲ್ಲಿ ತೆಗೆದುಕೊಂಡು, ಕುತ್ತಿಗೆಯನ್ನು ಇನ್ನೊಂದು ಭುಜದ ಕಡೆಗೆ ಬಗ್ಗಿಸಿ ಮತ್ತು 5 ಸೆಕೆಂಡುಗಳ ಕಾಲ ಆ ಸ್ಥಾನದಲ್ಲಿರಿ.
>> ಇದನ್ನು 5 ಬಾರಿ ಮಾಡಿ.


ಇದನ್ನೂ ಓದಿ-ಶುಗರ್ ಕಂಟ್ರೋಲ್ ಆಗುತ್ತಿಲ್ಲ ಎಂದಾದರೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು


4. ನೆಕ್ ಟರ್ನ್
>> ನಿಮ್ಮ ಬೆನ್ನನ್ನು ನೇರ ಸ್ಥಿತಿಯಲ್ಲಿರಿಸಿ ಕುಳಿತುಕೊಳ್ಳಿ ಮತ್ತು ನಿಮ್ಮ ಕುತ್ತಿಗೆಯನ್ನು ಒಂದು ಬದಿಗೆ ತಿರುಗಿಸಿ.
>> ಕುತ್ತಿಗೆಯನ್ನು ಸಾಧ್ಯವಾದಷ್ಟು ತಿರುಗಿಸಿ ಮತ್ತು ಸುಮಾರು 5 ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿರಿ.
>> ಈಗ ಕುತ್ತಿಗೆಯನ್ನು ಸಾಮಾನ್ಯ ಸ್ಥಿತಿಗೆ ತಂದು ನಂತರ ಅದನ್ನು ಇನ್ನೊಂದು ಬದಿಗೆ ತಿರುಗಿಸಿ.
>> ಇದನ್ನು 5 ಬಾರಿ ಮಾಡಿ.


ಇದನ್ನೂ ಓದಿ-Hot Water Bath : ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಆರೋಗ್ಯಕ್ಕೆ ಹಾನಿ : ಎಚ್ಚರದಿಂದಿರಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.