Home Remedies To Overthinking: ಮನುಷ್ಯ ಎಂದ ಮೇಲೆ ಯೋಚನೆ ಮಾಡುವುದು ಸಹಜ. ಆದರೆ ಅತಿಯಾಗಿ ಯೋಚನೆ ಮಾಡುವುದು ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ. ಕೆಲವರು ಕೆಲಸಕ್ಕೆ ಬೇಡದ ನೂರಾರು ವಿಷಯಗಳ ಬಗ್ಗೆ ಸುಮ್ಮಸುಮ್ಮನೆ ಯೋಚನೆ ಮಾಡುತ್ತಿರುತ್ತಾರೆ. ಅದರಿಂದ ನಯಾಪೈಸೆಯ ಪ್ರಯೋಜನ ಆಗುವುದಿಲ್ಲ ಬದಲಿಗೆ ಮಾನಸಿಕವಾಗಿ ಹಿಂಸೆ ಆಗುತ್ತದೆ, ಅವರಿಗೇ ಗೊತ್ತಿಲ್ಲದಂತೆ, ಅವರಿಗೆ ಬೇಡವಾದ ವಿಚಾರಗಳ ಬಗ್ಗೆ ಒತ್ತಡ ನಿರ್ಮಾಣವಾಗುತ್ತದೆ. ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಗುರುತಿಸಿ ಬಗೆಹರಿಸಿಕೊಳ್ಳಬೇಕು.


COMMERCIAL BREAK
SCROLL TO CONTINUE READING

ಮನಸ್ಸನ್ನು ನಿಯಂತ್ರಿಸದೆ ಬೇರೆ ದಾರಿ ಇಲ್ಲ!
ಹೀಗೆ ಅನಾವಶ್ಯಕವಾಗಿ, ಅತಿಯಾಗಿ ಯೋಚನೆ ಮಾಡುವುದನ್ನು ನಿಲ್ಲಿಸಬೇಕು ಎಂದರೆ ಕೆಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳಲೇಬೇಕು. ಮನಸ್ಸನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಆದರೆ ನಿಯಂತ್ರಿಸದೆ ಬೇರೆ ದಾರಿ ಇಲ್ಲ. 


ಯಾವುದು ಬೇಕು-ಯಾವುದು ಬೇಡ ಎಂದು ನಿರ್ಧರಿಸಿ:
ಮೊದಲಿಗೆ ನಾವು ಯಾವ ವಿಷಯಕ್ಕೆ ಆದ್ಯತೆ ಕೊಡಬೇಕು? ಯಾವುದನ್ನು ನಿರ್ಲಕ್ಷ್ಯ ಮಾಡಬೇಕು ಎಂಬುದನ್ನು ನಿರ್ಧರಿಸಿ. ಅದಕ್ಕಾಗಿ ಪ್ರತಿ ದಿನ ಸ್ವಲ್ಪ ಸಮಯ ತೆಗೆದುಕೊಳ್ಳಿ.


ಸಣ್ಣ ಸಣ್ಣ ಖುಷಿ ಅನುಭವಿಸಿ: 
ಯಾವುದೇ ಕೆಲಸ ಮಾಡುವಾಗ ಅದರ ಬಗ್ಗೆ ಮಾತ್ರ ಯೋಚಿಸಿ. ಉದಾಹರಣೆಗೆ ಸ್ನಾನ ಮಾಡುವಾಗ ಸ್ನಾನದ ಬಗ್ಗೆ, ಕಾಫಿ ಕುಡಿಯುವಾಗ ಕಾಫಿಯ ಬಗ್ಗೆ. ಹಾಗೆ ಯೋಚಿಸುತ್ತಾ ಅವುಗಳಲ್ಲಿ ಸಿಗುವ ಸಣ್ಣ ಸಣ್ಣ ಖುಷಿ ಅನುಭವಿಸಿ. ನಿಮಗೆ ಚೆನ್ನಾಗಿ ನೆನಪಿರಲಿ, ಸಣ್ಣ ಸಣ್ಣ ಖುಷಿಗಳೇ ದೊಡ್ಡ ಸಾಧನೆಗೆ ಮುನ್ನುಡಿ.


ಇದನ್ನೂ ಓದಿ- ಕಿತ್ತಳೆ, ಕ್ಯಾರೆಟ್ ಅಷ್ಟೇ ಅಲ್ಲ, ಈ ಹಣ್ಣು-ತರಕಾರಿಗಳಿಂದಲೂ ಸುಧಾರಿಸುತ್ತೆ ಕಣ್ಣಿನ ದೃಷ್ಟಿ..!


‘ಆಮೇಲೆ ಯೋಚನೆ ಮಾಡೋಣ’ ಎಂದು ಮುಂದಕ್ಕೆ ಹಾಕಿ:
ನಾನೀಗ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ. ನನ್ನ ಮನಸ್ಸಿಗೆ ವಿಶ್ರಾಂತಿ ನೀಡುತ್ತೇನೆ ಎಂದು ನಿರ್ಧರಿಸಿ. ಯಾವುದಾದರೂ ವಿಚಾರ ನೆನಪಿಗೆ ಬಂದರೂ ‘ಇದರ ಬಗ್ಗೆ ಆಮೇಲೆ ಯೋಚನೆ ಮಾಡೋಣ’ ಎಂದು ಮುಂದಕ್ಕೆ ಹಾಕಿ. ಆರಂಭದಲ್ಲಿ ಇಷ್ಟು ಮಾಡಿದರೂ ಸಾಕು. ಮುಂದೆ ಒಳ್ಳೆಯ ಪ್ರತಿಫಲ ಸಿಗುವುದು ಗ್ಯಾರಂಟಿ.


ಕಡೆಯ ಪ್ರಯತ್ನ ಅಂತಾ ಮಾಡಿ! 
ನೀವು ಏನೇನೋ ಬದಲಾಗಬೇಕೆಂದು ಬಯಸುವುದು ಸಹಜ. ಅದಕ್ಕಾಗಿ ನಿಮ್ಮ ಮನಸ್ಸು ಬಹಳಷ್ಟು ಯೋಚನೆ ಮಾಡುತ್ತಿರುತ್ತದೆ. ಆದರೆ ಒಮ್ಮೆಯಾದರೂ ಬೇರೆ ರೀತಿ ಯೋಚಿಸಬಹುದಾ ಎಂದು ಪ್ರಯತ್ನಿಸಿ. ಇದು ಆಗದಿದ್ದರೆ ಮತ್ತೆ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ನಿರ್ಧರಿಸಿ. ಇದರಿಂದ ನಿಮ್ಮ ಯೋಚನೆಗೆ ಪರಿಹಾರ ಅಥವಾ ಅದರಿಂದ ಮುಕ್ತಿ ಸಿಗುತ್ತೆ. 


ದೈಹಿಕ ವ್ಯಾಯಾಮ ಅತ್ಯಗತ್ಯ 
ಮನಸ್ಸನ್ನು ನಿಯಂತ್ರಿಸಲು ಕೆಲವೊಮ್ಮೆ ದೇಹವನ್ನು ದಂಡಿಸಬೇಕಾಗುತ್ತದೆ. ಇದು ದೈಹಿಕ ವ್ಯಾಯಾಮದಿಂದ ಮಾತ್ರ ಸಾಧ್ಯ. ದೇಹವನ್ನು ದಂಡಿಸುವ ಮೂಲಕ ಮನಸ್ಸಿನ ಮೇಲೆ ಆಗಬಹುದಾದ ಒತ್ತಡವನ್ನು ನಿಯಂತಿಸುವ ಕ್ರಮವನ್ನು ಕಂಡುಕೊಳ್ಳಿ. 


ವ್ಯಾಯಾಮದಿಂದ  ಸಂತೋಷ, ಸುಖನಿದ್ರೆ
ದೈಹಿಕ ಚಟುವಟಿಕೆಯು ದೇಹದಲ್ಲಿ ಎಂಡಾರ್ಫಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಸಂತೋಷವನ್ನು ಅನುಭವಿಸಲು ಸಹಾಯ ಮಾಡುತ್ತದೆ ಮತ್ತು ವ್ಯಾಯಾಮದ ನಂತರ ರಾತ್ರಿ ಉತ್ತಮ ನಿದ್ರೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿದಿನ ಸುಮಾರು 30-45 ನಿಮಿಷಗಳಾದರೂ ವ್ಯಾಯಾಮ ಮಾಡಿ ಮತ್ತು ಬದಲಾವಣೆಗಳನ್ನು ನೀವೇ ನೋಡಿ.


ಸಂಗೀತ ಪರಿಣಾಮಕಾರಿಯಾದ ಸಾಧನ: 
ಮನಸ್ಸನ್ನು ನಿಯಂತ್ರಿಸಲು ಸಂಗೀತ ಕೂಡ ಪರಿಣಾಮಕಾರಿಯಾದ ಸಾಧನ. ನಿಮಗೆ ಇಷ್ಟವಾದ ಹಾಡುಗಳನ್ನು ಅಥವಾ ಸಂಗೀತವನ್ನು ಕೇಳಿ. ಸಂಗೀತವನ್ನು ಆಲಿಸಿ ಮನಸ್ಸು ಮುದಗೊಂಡಾಗ. ಧನಾತ್ಮಕವಾದ ಯೋಚನೆ ಮಾಡಿ. ಇದರಿಂದ ಒಳ್ಳೆಯ ರಿಸಲ್ಟ್ ಸಿಗಲಿದೆ. 


ಧ್ಯಾನದಿಂದ ಧನಾತ್ಮಕ ಬದಲಾವಣೆ: 
ಅತಿಯಾಗಿ ಯೋಚಿಸುವ ಕೆಟ್ಟ ಅಭ್ಯಾಸದಿಂದ ಪಾರಾಗಲು  5-10 ನಿಮಿಷಗಳ ಕಾಲ ಧ್ಯಾನ ಮಾಡಿ. ಆರಂಭದಲ್ಲಿ ತುಸು ಕಷ್ಟವಾದರೂ ಅನಂತರದಲ್ಲಿ ನಿಮ್ಮ ಆಲೋಚನೆಗಳ ಮಟ್ಟ ಸುಧಾರಿಸುವುದನ್ನು ನೀವು ಸ್ಪಷ್ಟವಾಗಿ ಗುರುತಿಸಬಹುದು. 


ಇದನ್ನೂ ಓದಿ- ನಿಮಗೆ ಹಸಿವಾಗುತ್ತಿಲ್ಲವೇ? ಹಾಗಿದ್ದರೆ ಎಚ್ಚರಿಕೆ..! ಇದು ಗಂಭೀರ ಕಾಯಿಲೆಯ ಸಂಕೇತ..!


ಉಸಿರಾಟದ ವ್ಯಾಯಾಮ ಟ್ರೈ ಮಾಡಿ: 
ಉಸಿರಾಟವನ್ನು ನಿಯಂತ್ರಿಸುವ ಮೂಲಕ ಮನಸ್ಸನ್ನು ಶಾಂತಗೊಳಿಸಬಹದು. ವಿವಿಧ ಧ್ಯಾನಗಳು ಉಸಿರಾಟದ ವ್ಯಾಯಾಮದ ಸುತ್ತ ಮಾತ್ರ ಸುತ್ತುತ್ತವೆ. ಆರಂಭಿಕ ಹಂತದಲ್ಲಿ ಉಸಿರಾಟದ ಮೇಲೆ ಮಾತ್ರ ನಿಗಾ ಇಟ್ಟು ಕ್ರಮೇಣ ಧ್ಯಾನದ ಹಂತವನ್ನು ಪ್ರವೇಶಿಸಬಹುದು. 


ಸಮಸ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ: 
ಎಲ್ಲಕ್ಕಿಂತ ಹೆಚ್ಚಾಗಿ ಸಮಸ್ಯೆಗಳು ಹೆಚ್ಚಾದಾಗಲೇ ಯೋಚನೆ ಜಾಸ್ತಿಯಾಗುವುದು. ಆದುದರಿಂದ ನಿಮ್ಮ ಸಮಸ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ. ಸಮಸ್ಯೆ ಬಗ್ಗೆ ಯೋಚಿಸುವ ಬದಲು ಪರಿಹಾರದ ಕಡೆ ಗಮನಹರಿಸಿ. 


ಬರೆಯುವ ಮೂಲಕ ಮರೆಯಿರಿ: 
ಕೆಲವೊಮ್ಮೆ ಭಯ ಆಕ್ರಮಿಸಿಕೊಂಡು ಅತಿಯಾಗಿ ಯೋಚಿಸುವಂತೆ ಮಾಡುತ್ತಿರುತ್ತದೆ. ಆದುದರಿಂದ ಮೊದಲಿಗೆ ಆ ಭಯ ಯಾವುದೆಂದು ಗುರುತಿಸಿ. ಅದನ್ನು ಒಂದು ಕಡೆ ಬರೆಯಿರಿ, ಹಾಗೆ ಬರೆದಾಗ ನಿಮಗೆ ‘ಯಾರಲ್ಲೋ ಹೇಳಿಕೊಂಡ’ ಸಮಾಧಾನ-ಸಾಂತ್ವನ ಸಿಗಬಹುದು. ಬರೆಯುವ ಮೂಲಕ ಅದನ್ನು ಕಷ್ಟಗಳನ್ನು ಮರೆಯಿರಿ. 


ನೋವುಗಳನ್ನು ಇತರರೊಂದಿಗೆ ಹಂಚಿಕೊಳ್ಳಿ 
ಇನ್ನೂ ಒಂದು ಒಳ್ಳೆಯ ಉಪಾಯ, ನಿಮ್ಮ ಮಾತನ್ನು ಕೇಳುವ, ನಿಮ್ಮನ್ನು ಅರ್ಥಮಾಡಿಕೊಳ್ಳುವ, ನಿಮಗೆ ಯಾವಾಗಲೂ ಸರಿಯಾದ ರೀತಿಯಲ್ಲೇ ಸಲಹೆ ಕೊಡುವ ಸ್ನೇಹಿತರೋ-ಸಂಬಂಧಿಗಳೋ ಇದ್ದಾರೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದರಿಂದ ನಿಮ್ಮ ಮನಸ್ಸಿನ ಮೇಲಿನ ಹೊರೆಯನ್ನು ಇಳಿಸಿಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.