ವಾಷಿಂಗ್ಟನ್: ಇತ್ತೀಚಿನ ದಿನದಲ್ಲಿ ಎಲ್ಲರೂ ಒತ್ತಡಕ್ಕೆ ಸಿಲುಕಿದವರೇ. ಆಧುನಿಕ ಜೀವನ ಶೈಲಿಯಿಂದಾಗಿ ಮಾನಸಿಕ ಒತ್ತಡ ಎಂಬುದು ಸಾಮಾನ್ಯವಾಗಿಬಿಟ್ಟಿದೆ. ಹೀಗಾಗಿ ಜನರು ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಶೇ.99ರಷ್ಟು ಜನ ಒಂದಿಲ್ಲೊಂದು ಒತ್ತಡದಿಂದ ಒದ್ದಾಡುತ್ತಿರುತ್ತಾರೆ ಎನ್ನಲಾಗಿದೆ. ಹಾಗಾದರೆ ಒತ್ತಡದಿಂದ ಹೊರಬರುವುದು ಹೇಗೆ? ಎಂಬ ಪ್ರಶ್ನೆಗೆ ಇಲ್ಲಿದೆ ಪರಿಹಾರ!


COMMERCIAL BREAK
SCROLL TO CONTINUE READING

ಪ್ರಕೃತಿಯ ನಡುವೆ ಪ್ರತಿನಿತ್ಯ 20 ನಿಮಿಷ ಸಮಯ ಕಳೆಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಜನರ ಆರೋಗ್ಯಕರ ಜೀವನಶೈಲಿಗೆ ಈ ವಿಧಾನ ಪರಿಣಾಮಕಾರಿಯಾದ ಪಾತ್ರ ನಿರ್ವಹಿಸುತ್ತದೆ ಎಂದು 'ಫ್ರಾಂಟಿಯರ್ಸ್ ಇನ್ ಸೈಕಾಲಜಿ' ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ. 


ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಆದರೆ ಎಷ್ಟು ಸಮಯ ಸಾಕು ಮತ್ತು ಯಾವಾಗ ಕಳೆಯಬೇಕು, ಯಾವ ರೀತಿಯ ನೈಸರ್ಗಿಕ ಅನುಭವಗಳು ನಮಗೆ ಪ್ರಯೋಜನಕಾರಿಯಾಗಲಿವೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಮಿಚಿಗನ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಮೇರಿ ಕಲೋನಲ್ ಹಂಟರ್ ಹೇಳಿದ್ದಾರೆ. 


ಅಧ್ಯಯನದ ಪ್ರಕಾರ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆಗೊಳಿಸಲು ಪ್ರಕೃತಿಯ ಪ್ರಶಾಂತ ವಾತಾವರಣದಲ್ಲಿ  ನಾವು 20 ರಿಂದ 30 ನಿಮಿಷ ಕುಳಿತುಕೊಳ್ಳಬೇಕು ಅಥವಾ ವಿಹರಿಸಬೇಕು ಎಂದು ಹಂಟರ್ ಹೇಳಿದ್ದಾರೆ.