ಸುಂದರವಾಗಿ ಕಾಣಬೇಕು, ಕಾಂತಿಯುತ ಚರ್ಮ ಹೊಂದಬೇಕು ಅನ್ನೋದು ಎಲ್ಲಾ ಮಹಿಳೆಯರ ಆಸೆ. ಅದಕ್ಕಾಗಿ ದುಬಾರಿ ಬೆಲೆಯ ಕ್ರೀಮ್'ಗಳು, ಫೇಶಿಯಲ್ ಕಿಟ್ ಗಳನ್ನು ಬಳಸುತ್ತಾರೆ. ಮತ್ತೆ ಕೆಲವರು ಬ್ಯೂಟಿಪಾರ್ಲರ್ ಮೊರೆ ಹೋಗುತ್ತಾರೆ. ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಆದರೆ ಈ ಸೌಂದರ್ಯ ವರ್ಧಕ ಉತ್ಪನ್ನಗಳು ಚರ್ಮಕ್ಕೆ ಸರಿಹೊಂದುವುದಿಲ್ಲ. ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದರಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆಯಲ್ಲದೆ, ಚರ್ಮ ಸುಕ್ಕಾಗುತ್ತದೆ. ಹಾಗಾಗಿ ನೈಸರ್ಗಿಕ ಸೌಂದರ್ಯವರ್ಧಕಗಳನ್ನು ಬಳಸುವುದು ಸೂಕ್ತ.


COMMERCIAL BREAK
SCROLL TO CONTINUE READING


ಚಳಿಗಾಲವಾಗಲೀ, ಬೇಸಿಗೆಯಾಗಲೀ ಚರ್ಮಕ್ಕೆ ಮಾಯಿಶ್ಚರೈಸರ್ ಅಗತ್ಯವಿದೆ. ಚರ್ಮವನ್ನು ಶುಷ್ಕವಾಗಿಡಲು ಮಾಯಿಶ್ಚರೈಸರ್ ಬಳಸುವುದು ಒಳ್ಳೆಯದು. ಇದು ನಿಮ್ಮ ಚರ್ಮವನ್ನು ಕಾಂತಿಯುತವಾಗಿಯೂ, ಮೃದುವಾಗಿಯೂ ಮಾಡುತ್ತದೆ. ಅದಕ್ಕಾಗಿ ನೀವು ಮಾರುಕಟ್ಟೆಯಿಂದ ಮಾಯಿಶ್ಚರೈಸರ್ ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ತಯಾರಿಸಬಹುದು.



ಗ್ರೀನ್ ಟೀ, ಟೀ ಟ್ರೀ ಆಯಿಲ್, ನಿಂಬೆ ಎಣ್ಣೆ, ಆಲೋವೆರಾ ಜೆಲ್ ಬಳಸಿ ಮನೆಯಲ್ಲಿಯೇ ಮಾಯಿಶ್ಚರೈಸರ್ ತಯಾರಿಸಬಹುದು. ಇದರೊಂದಿಗೆ ಕೆಲವು ಗಿಡಮೂಲಿಕೆಗಳನ್ನೂ ಬಳಸಬಹುದು. ಇದರಿಂದ ನಿಮ್ಮ ತ್ವಚೆ ಕೇವಲ ಹೊಳೆಯುವುದಷ್ಟೇ ಅಲ್ಲ, ಒಣ ತ್ವಚೆಯನ್ನೂ ಹೋಗಲಾಡಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತದೆ. 



ಮೊದಲಿಗೆ ಗ್ರೀನ್ ಟೀ ಪೌಡರ್ ತಯಾರಿಸಿ. ನಂತರ ಇದಕ್ಕೆ ಎಲ್ಲಾ ಎಣ್ಣೆಗಳನ್ನೂ ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ನಲ್ಲಿ ಒಂದೇ ಒಂದು ಗಂಟೂ ಇರಬಾರದು. ಎಲ್ಲಾ ವಸ್ತುಗಳನ್ನೂ ಚೆನ್ನಾಗಿ ಮಿಕ್ಸ್ ಮಾಡಿದ್ದರೆ, ನಿಮ್ಮ ಮಾಯಿಶ್ಚರೈಸರ್ ತಯಾರಾದಂತೆ. ಇದನ್ನು ಗಾಳಿ ಆಡದ ಡಬ್ಬದಲ್ಲಿ ಹಾಕಿ ಕನಿಷ್ಠ ಎರಡು ಗಂಟೆಗಳ ಕಾಲ್ ಫ್ರೀಜ್ ಮಾಡಿ. 



ಈ ನೈಸರ್ಗಿಕ ಮಾಯಿಶ್ಚರೈಸರ್ ಬಳಸುವುದರಿಂದ ಯಾವುದೇ ನಕಾರಾತ್ಮಕ ಪರಿಣಾಮ ಇಲ್ಲ. 



ಒಂದು ವೇಳೆ ನೀವೇನಾದರೂ ಈ ಮಾಯಿಶ್ಚರೈಸರ್ ಅನ್ನು ಎರಡು ಅಥವಾ ಮೂರು ತಿಂಗಳು ನಿಯಮಿತವಾಗಿ ಬಳಸಿದರೆ ಮುಖದ ಮೇಲಿನ ಮೊಡವೆ, ಚರ್ಮದ ಸುಕ್ಕು ಎಲ್ಲವೂ ಮರೆಯಾಗುತ್ತವೆ. ಈ ಮಾಯಿಶ್ಚರೈಸರ್ ನಿಮ್ಮ ತ್ವಚೆಯ ಮೇಲೆ ನೂತನ ಟಿಶ್ಯೂ ನಿರ್ಮಾಣಮಾಡುತ್ತದೆ. ಇದರಿಂದ ತ್ವಚೆಯ ರಕ್ಷಣೆ ಆಗುತ್ತದೆ.