Bone Health In Women: ದೇಹದ ಅನೇಕ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಹಿಸುವುದರ ಜೊತೆ ಜೊತೆಗೆ ಮೂಳೆಗಳ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಮೂಳೆಯ ಆರೋಗ್ಯವನ್ನು ಕಾಪಾಡುವುದು  ಪ್ರಮುಖವಾಗಿದೆ ವಿಶೇಷವಾಗಿ ಮಹಿಳೆಯರಲ್ಲಿ ಜೀವನದುದ್ದಕ್ಕೂ, ಮೂಳೆ ರಚನೆ ಮತ್ತು ಮೂಳೆ ನಷ್ಟದ ಪ್ರಕ್ರಿಯೆ ಇರುತ್ತದೆ. ಮೂಳೆಯ ನಷ್ಟದ ಪ್ರಮಾಣವು ಮೂಳೆ ರಚನೆಯನ್ನು ಮೀರಿದಾಗ, ಇದು ಮೂಳೆ ಸಾಂದ್ರತೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ, ಇದು ಆಸ್ಟಿಯೊಪೊರೋಸಿಸ್ ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಇದು ದೀರ್ಘಕಾಲದ ಮೂಳೆ ನೋವು ಮತ್ತು ಸುಲಭವಾಗಿ ಮೂಳೆ ಮುರಿತಕ್ಕೆ ಕಾರಣವಾಗುತ್ತದೆ. ಇದು ಜೀವನದ ಗುಣಮಟ್ಟ (quality of life) ಮತ್ತು ಅವಲಂಬನೆಯ (dependency) ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಬಗ್ಗೆ ಡಾ ಶೃತಿ ದೇಸಾಯಿ, ಕನ್ಸಲ್ಟೆಂಟ್ ರುಮಟಾಲಜಿಸ್ಟ್, ಮಣಿಪಾಲ್ ಆಸ್ಪತ್ರೆ,  ಯಶವಂತಪುರ ಒಂದಿಷ್ಟು ಸಲಹೆ ನೀಡಿದ್ದು, ಮಹಿಳೆಯರಲ್ಲಿ ಮೂಳೆ ಆರೋಗ್ಯವನ್ನು ಸುಧಾರಿಸುವುದು ಹೇಗೆ ಎಂದು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

40 ವರ್ಷಗಳ ನಂತರ ನಿಧಾನಗತಿಯಲ್ಲಿ ಮೂಳೆಗಳು ಬಲವನ್ನು ಕ್ಷೀಣಿಸಿಕೊಳ್ಳುತ್ತಾ ಬರುತ್ತದೆ. ಇದಕ್ಕೆ ನೇರವಾದ ಕಾರಣಗಳೆಂದರೆ, ಕಡಿಮೆ ದೈಹಿಕ ಚಟುವಟಿಕೆ, ಅನಾರೋಗ್ಯಕರವಾದ ಅಭ್ಯಾಸ, ಸಮತೋಲಿತ ಆಹಾರಗಳ ಕೊರತೆ. ಇಷ್ಟೇ ಅಲ್ಲ, ಹಾರ್ಮೋನುಗಳು ಕೂಡ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 
ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ, ಹಾರ್ಮೋನ್ಗಳ ನಷ್ಟದಿಂದಾಗಿ, ಮೂಳೆ ಸಾಂದ್ರತೆಯು ಶೀಘ್ರವಾಗಿ ನಷ್ಟವಾಗುತ್ತದೆ. (rapid bone loss occurs in women post-menopause) 


ಇದನ್ನೂ ಓದಿ- ಶುಗರ್ ಲೆವೆಲ್ 300ರ ಗಡಿ ದಾಟಿದ್ದರೂ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಮಾಡಬಲ್ಲ ಚಮತ್ಕಾರಿ ಆಹಾರಗಳಿವು


ಹಾಗಾದರೆ ಆರೋಗ್ಯಕರವಾದ ಮೂಳೆಯನ್ನು ಪಡೆಯಲು ಏನೆಲ್ಲಾ ಮಾಡಬೇಕು ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ತಿಳಿಯಿರಿ.
ಬಲಿಷ್ಠವಾದ ಮೂಳೆಗಳನ್ನು ಪಡೆಯಲು  ಜೀವನದಲ್ಲಿ ಆರೋಗ್ಯಕರವಾದ ಅಭ್ಯಾಸಗಳನ್ನು ಅನುಸರಿ ಅಂದರೆ ಪೌಷ್ಟಿಕಾಂಶ ಭರಿತವಾಗಿರುವ ಆಹಾರ, ಪ್ರತಿನಿತ್ಯ 30 ರಿಂದ 40 ನಿಮಿಷಗಳ ಕಾಲ ದೈಹಿಕ ಶ್ರಮದಂತಹ ಚಟುವಟಿಕೆಗಳನ್ನು ತಪ್ಪದೇ ಮಾಡಬೇಕು.  ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳನ್ನು ತಪ್ಪಿಸಿ, ಉಪ್ಪು ಸೇವನೆಯನ್ನು ಕಡಿಮೆ ಮಾಡಿ.


1) ಮೂಳೆಯನ್ನು ಆರೋಗ್ಯಕರವಾಗಿಡಲು ಕೆಲವು ಪೋಷಕಾಂಶಗಳು ದೇಹಕ್ಕೆ ಬಹಳ ಅಗತ್ಯವಾಗಿದೆ. ಪ್ರತಿನಿತ್ಯ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಭರಿತ ಆಹಾರ ಸೇವನೆಯಿಂದ ನೀವು ಸುಲಭವಾಗಿ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.  ಉದಾಹರಣೆಗೆ ಮೊಸರು, ಸೋಯಾ, ಕೊಬ್ಬಿನ ಮೀನು ಮತ್ತು ಹಾಲು. ಇಂತಹ ಆಹಾರಗಳು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳುವುದರಿಂದಲೂ ವಿಟಮಿನ್‌ ಡಿ ನಿಮಗೆ ದೊರೆಯುತ್ತದೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದು ಮೂಳೆಯ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸಲು ಸಹಾಯ ಮಾಡುತ್ತದೆ. 


2) 30 ನಿಮಿಷಗಳ ಕಾಲ ಯೋಗ, ಏರೋಬಿಕ್ಸ್‌, ಡ್ಯಾನ್ಸ್‌, ವಾಕಿಂಗ್, ಜಾಕಿಂಗ್‌ನಂತಹ ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ನಿಮ್ಮ ಮೂಳೆಗಳು ಸದೃಢಗೊಳ್ಳುತ್ತದೆ. ಮೂಳೆಗಳಿಗೆ ಒತ್ತಡವನ್ನು ಉಂಟುಮಾಡುವಂತಹ ತೂಕದ ಏರೋಬಿಕ್ ವ್ಯಾಯಾಮಗಳನ್ನು ಮಾಡಬೇಕು. ಉದಾಹರಣೆಗೆ, ವಾಕಿಂಗ್ ಅಥವಾ ಜಾಗಿಂಗ್. ಸ್ನಾಯು-ರಚನಾ ವ್ಯಾಯಾಮಗಳು (ತೂಕವನ್ನು ಎತ್ತುವುದು, ದೇಹದ ಪ್ರತಿರೋಧದ ವ್ಯಾಯಾಮಗಳು) ಮತ್ತು ಯೋಗವು ಮೂಳೆಯ ಆರೋಗ್ಯಕ್ಕೆ ಅತ್ಯುತ್ತಮ ಪ್ರಯೋಜನವನ್ನು ಒದಗಿಸುತ್ತದೆ.  


3)  BMDDexa ಸ್ಕ್ಯಾನಿ ಮೂಲಕ ಆಸ್ಟಿಯೊಪೊರೋಸಿಸ್ ತಪಾಸಣೆಯನ್ನು ವಿಶೇಷವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮತ್ತು ಆಸ್ಟಿಯೊಪೊರೋಸಿಸ್‌ಗೆ ಹೆಚ್ಚಿನ ಅಪಾಯವಿರುವ ಕೆಲವು ಗುಂಪಿನ ಜನರಲ್ಲಿ ಸಲಹೆ ನೀಡಲಾಗುತ್ತದೆ. ಡೆಕ್ಸಾ ಸ್ಕ್ಯಾನ್‌ನಲ್ಲಿನ ಫಲಿತಾಂಶಗಳ ಆಧಾರದ ಮೇಲೆ, ಕೆಲವು ಔಷಧಿಗಳನ್ನು ಸೂಚಿಸಲಾಗುತ್ತದೆ. 


ಇದನ್ನೂ ಓದಿ- ಮಹಿಳೆಯರೇ ಎಚ್ಚರ! ಎಂದಿಗೂ ಈ 5 ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!


ಮಹಿಳೆಯರು ಯಾವಾಗಲೂ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ ಆದ್ದರಿಂದ ತಮ್ಮ ಕಾಳಜಿಯನ್ನು ಮರೆತುಬಿಡುವುದು ತುಂಬಾ ಸುಲಭ.
ಆದರೆ ಪ್ರತಿರೋಧ ತರಬೇತಿ ವ್ಯಾಯಾಮಗಳ (resistance training exercises) ಸಹಾಯದಿಂದ,   ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಮತ್ತು ಕ್ಯಾಲ್ಸಿಯಂ, ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಮೂಳೆಯ ಆರೋಗ್ಯದಲ್ಲಿ ಸುಧಾರಣೆ ಸಾಧ್ಯ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ