ನವದೆಹಲಿ: ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಜನ ಎಷ್ಟೆಲ್ಲಾ ಪ್ರಯತ್ನಿಸುತ್ತಾರೆ. ದಿನ ಬೆಳಿಗ್ಗೆ ಎದ್ದು ಜಾಗಿಂಗ್, ಜಿಮ್, ಡಯಟ್ ಹೀಗೆ ಒಂದೇ, ಎರಡೇ..? ಆದರೂ ತೂಕ ಇಳಿಯುವುದೇ ಇಲ್ಲ. ಅಂತಹವರಿಗೆ ಇಲ್ಲಿದೆ ಒಂದು ಉತ್ತಮ ಪರಿಹಾರ!


COMMERCIAL BREAK
SCROLL TO CONTINUE READING

ದೇಹದ ತೂಕ ಇಳಿಸಲು ಮಾಡುವ ವ್ಯಾಯಾಮ, ಜಿಮ್ ಮಾಡುವುದರ ಜೊತೆಗೆ ಮೊದಲು ಕೊಲೆಸ್ಟ್ರಾಲ್ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳ ಸೇವೆನೆ ಬಿಡಬೇಕು. ಇದರ ಜೊತೆ ಸ್ವಲ್ಪ ನೈಸರ್ಗಿಕ ಆಹಾರ ಸೇವನೆಯೂ ಸಹಕಾರಿಯಾಗುತ್ತದೆ. ಪ್ರತಿನಿತ್ಯ ಅಜವಾಯಿನ್ ಅಥವಾ ಓಂ ಕಾಳಿನ ನೀರನ್ನು ಕುಡಿಯುವುದರಿಂದ ತಿಂಗಳಿಗೆ 3 ರಿಂದ 4 ಕೆ.ಜಿ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ. 


ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ ಎರಡು ಚಮಚ ಓಂ ಕಾಳನ್ನು ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದ ಬಳಿಕ ಆ ನೀರನ್ನು ಖಾಲಿ ಹೊಟ್ಟೆಗೆ ಕುಡಿಯಿರಿ. ಹೀಗೆ ಪ್ರತಿನಿತ್ಯ ಒಂದು ತಿಂಗಳ ಕಾಲ ಓಂ ಕಾಳಿನ ನೀರನ್ನು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. 


ಅಷ್ಟೇ ಅಲ್ಲದೆ, ಓಂ ಕಾಳಿನಲ್ಲಿ ಅಯೋಡಿನ್, ಫಾಸ್ಪರಸ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅಂಶಗಳಿದ್ದು, ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ, ಎದೆ ಉರಿಯಂತಹ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ. ಅದಕ್ಕಾಗಿ ಒಂದು ಚಮಚ ಒಂಕಾಳನ್ನು ಒಂದು  ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಬಳಿಕ ಆ ನೀರನ್ನು ಕುಡಿಯುವುದರಿಂದ ಅಸ್ತಮಾ ಸಮಸ್ಯೆ ಸಹ ಕಡಿಮೆಯಾಗುತ್ತದೆ.