ಬೆಲ್ಲ ಕೇವಲ ಅಡುಗೆಗೆ ಮಾತ್ರವಲ್ಲ ತ್ವಚೆಗೂ ಉಪಯುಕ್ತ..! ಹೀಗೆ ಬಳಸಿ ನಿಮ್ಮ ಮುಖ ಹೊಳೆಯುತ್ತದೆ.!
Jaggery face pack : ಪ್ರತಿಯೊಬ್ಬ ಮಹಿಳೆ ಸುಂದರವಾಗಿ ಕಾಣಲು ಬಯಸುತ್ತಾರೆ.. ಇದಕ್ಕಾಗಿ ಅವರು ದುಬಾರಿ ಸೌಂದರ್ಯವರ್ಧಕಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ, ಅವುಗಳಲ್ಲಿ ಕೆಲವುಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಬದಲಿಗೆ ಮನೆಮದ್ದುಗಳನ್ನು ಬಳಸಿದರೆ ಯಾವುದೇ ಆತಂಕ ಇರುವುದಿಲ್ಲ..
Jaggery for face : ನಿಮ್ಮ ಮುಖವನ್ನು ಸುಂದರವಾಗಿ ಮತ್ತು ಹೊಳೆಯುವಂತೆ ಮಾಡಲು ಬೆಲ್ಲವನ್ನು ಬಳಸಬಹುದು ಎಂದು ನಿಮಗೆ ತಿಳಿದಿದೆಯೇ..? ಹೌದು, ಇಲ್ಲಿಯವರೆಗೆ ನೀವು ಕೆಲವು ರೆಸಿಪಿ ಮಾಡಲು ಮಾತ್ರ ಬೆಲ್ಲವನ್ನು ಬಳಸಿದ್ದೀರಿ. ಆದರೆ, ಇದು ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬೆಲ್ಲ ಒಂದು ನೈಸರ್ಗಿಕ ಔಷಧ. ಇದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ನಿಮ್ಮ ತ್ವಚೆಗೆ ಹಚ್ಚುವುದರಿಂದ ನೀವು ಸುಲಭವಾಗಿ ಹೊಳೆಯುವ ತ್ವಚೆಯನ್ನು ಪಡೆಯಬಹುದು. ಬೆಲ್ಲವು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ವಯಸ್ಸಾದಂತೆ ಕಾಣುವ ಸುಕ್ಕುಗಳನ್ನು, ಮುಖದ ಮೇಲಿನ ಮೊಡವೆಗಳನ್ನು ಮತ್ತು ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ:ವ್ಯಾಯಾಮದ ನಂತರ ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ತಪ್ಪದೆ ತಿಳಿದುಕೊಳ್ಳಿ..!
ಅಲ್ಲದೆ, ಬೆಲ್ಲವು ಆರ್ಧ್ರಕ ಗುಣಗಳಿಂದ ಸಮೃದ್ಧವಾಗಿದ್ದು, ಇದು ತ್ವಚೆಯನ್ನು ಸದಾ ಕಾಲ ತೇವಾಂಶದಿಂದ ಇಡುತ್ತದೆ. ಇದಲ್ಲದೆ, ಬೆಲ್ಲವು ಮುಖದ ಮೇಲಿನ ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಸರಿಪಡಿಸುತ್ತದೆ. ಇದು ಮುಖದಲ್ಲಿನ ಶುಷ್ಕತೆ ಮತ್ತು ತುರಿಕೆಗಳನ್ನು ತೆಗೆದುಹಾಕುತ್ತದೆ. ಆದ್ದರಿಂದ ನಿಮ್ಮ ಮುಖಕ್ಕೆ ಹೊಳಪನ್ನು ತರಲು ಈ ಕೆಳಗೆ ನೀಡಿರುವ ಫೇಸ್ ಪ್ಯಾಕ್ ಹಾಕಿ..
ಬೆಲ್ಲ ಮತ್ತು ಕಡಲೆ ಹಿಟ್ಟು: ಈ ಫೇಸ್ ಪ್ಯಾಕ್ ಮಾಡಲು ಒಂದು ಚಮಚ ಬೆಲ್ಲ, ಒಂದು ಚಮಚ ಕಡಲೆ ಹಿಟ್ಟು ಮತ್ತು ಹಾಲನ್ನು ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಲ್ಲಿ ತೊಳೆಯಿರಿ.
ಇದನ್ನೂ ಓದಿ:ವ್ಯಾಯಾಮ ಇಲ್ಲ.. ರನ್ನಿಂಗ್ ಮಾಡಲೇ ಇಲ್ಲ.. 21 ದಿನದಲ್ಲಿ ಮಾಧವನ್ ಸ್ಲಿಮ್ ಆಗಿದ್ದು ಹೇಗೆ? ಅದ್ಭುತ ಡಯಟ್ ಟಿಪ್ಸ್..
ಬೆಲ್ಲದ ಸ್ಕ್ರಬ್: ಇದಕ್ಕಾಗಿ ಒಂದು ಚಮಚ ಬೆಲ್ಲವನ್ನು ಒಂದು ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ನಂತರ 5 ನಿಮಿಷಗಳ ಕಾಲ ಒಣಗಲು ಬಿಟ್ಟು, ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.