How to quit tea : ಹೆಚ್ಚಿನ ಜನರು ಚಹಾ ಮತ್ತು ಕಾಫಿಯನ್ನು ಕುಡಿಯಲು ಇಷ್ಟಪಡುತ್ತಾರೆ. ಇದನ್ನು ಸೇವಿಸುವುದರಿಂದ ಉತ್ಸಾಹ ಬರುತ್ತದೆ ಮತ್ತು ನಿದ್ದೆ ಕ್ಷಣಾರ್ಧದಲ್ಲೇ ಮಾಯವಾಗುತ್ತದೆ ಅಂತ ತಿಳಿದುಕೊಂಡಿದ್ದಾರೆ. ಆದರೆ ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


COMMERCIAL BREAK
SCROLL TO CONTINUE READING

ಆರೋಗ್ಯ ತಜ್ಞರು ಹೇಳುವ ಪ್ರಕಾರ ಚಹಾ ಮತ್ತು ಕಾಫಿಯಲ್ಲಿ ಹೆಚ್ಚಿನ ಶೇಕಡಾವಾರು ಕೆಫೀನ್ ಇರುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕರ. ಇದರಿಂದಾಗಿ ಜೀರ್ಣಕಾರಿ ಸಮಸ್ಯೆಗಳು, ತಲೆನೋವು ಮತ್ತು ನಿದ್ರಾಹೀನತೆಯನ್ನು ಎದುರಿಸಬೇಕಾಗುತ್ತದೆ. ಆದರೆ, ಚಹಾ, ಕಾಫಿಯ ಬದಲು ಬೇರೆ ಆಹಾರಗಳನ್ನು ಸೇವಿಸಿ, ಏಕಾಗ್ರತೆ ಮತ್ತು ಉತ್ಸಾಹ ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಆ ಆಹಾರಗಳು ಯಾವುವು ಅಂತ ತಿಳಿಯೋಣ ಬನ್ನಿ..


ಇದನ್ನೂ ಓದಿ: ಹಳದಿ ಹಲ್ಲುಗಳನ್ನು ಮುತ್ತಿನಂತೆ ಹೊಳೆಯುವಂತೆ ಮಾಡುವ ಸೂಪರ್ ಮನೆಮದ್ದುಗಳು!


  • ಕಾಫಿ ಮತ್ತು ಟೀ ಬದಲಿಗೆ ಎಲ್ಲಾ ರೀತಿಯ ಹಣ್ಣುಗಳು ಮತ್ತು ತರಕಾರಿ ಸಲಾಡ್ ಸೇವಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

  • ಕಾಫಿ ಮತ್ತು ಟೀ ಕುಡಿಯದೇ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಆರೋಗ್ಯಕರ ಹಾರ್ಮೋನ್ ಬಿಡುಗಡೆಯಾಗುತ್ತದೆ.

  • ಟೀ ಕಾಫಿ ತೆಗೆದುಕೊಳ್ಳಬೇಕು ಎನಿಸಿದಾಗ ಒಂದು ಲೋಟ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು.

  • ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದರಿಂದ ಉತ್ಸಾಹದಿಂದ ಕೆಲಸ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

  • ಯೋಗ ಮತ್ತು ಧ್ಯಾನ ಮಾಡುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಬಹುದು.


ಈ ಕೆಲಸಗಳನ್ನು ಮಾಡುವುದರಿಂದ ದಿನವಿಡೀ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ಕಡಿಮೆ ಚಹಾ ಮತ್ತು ಕಾಫಿ ತೆಗೆದುಕೊಳ್ಳಿ. ಇದು ಹೆಚ್ಚುವರಿ ಕೆಫೀನ್ ದೇಹಕ್ಕೆ ಹೋಗುವುದನ್ನು ತಡೆಯುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.