ನವದೆಹಲಿ: ದೇಹದ ತೂಕ ಇಳಿಸಲು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುತ್ತಿದ್ದೀರಾ? ಇಷ್ಟವಾದ ತಿಂಡಿ ತಿನಿಸುಗಳನ್ನು ತಿನ್ನುವುದು ಬಿಟ್ಟು ಡಯಟ್ ಮಾಡುತ್ತಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಅವಿಜ್ಞಾನಿಕ ಡಯಟ್ ಗೆ ಗುಡ್ ಬೈ ಹೇಳಿ, ವ್ಯಾಯಾಮ ಮಾಡದೆ, ಊಟ ತಿಂಡಿ ಬಿಡದೆ ದೇಹದ ತೂಕ ಇಳಿಸುವ ಸ್ಮಾರ್ಟ್ ವಿಧಾನಗಳನ್ನು ಅನುಸರಿಸಿ.


COMMERCIAL BREAK
SCROLL TO CONTINUE READING

Weight loss ಗುರು ಸ್ಟೀವ್ ಮಿಲ್ಲರ್ ಅವರು, ದಿನನಿತ್ಯದ ಜೀವನದಲ್ಲಿ ಡಯಟ್ ಗೆ ಹೊರತಾಗಿ ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ದೇಹದ ತೂಕ ಹೇಗೆ ಕಡಿಮೆ ಮಾಡಿಕೊಳ್ಳುವುದು ಎನ್ನುವ ಬಗ್ಗೆ ತಿಳಿಸಿದ್ದಾರೆ ಎಂದು mirror.co.uk ವರದಿ ಮಾಡಿದೆ. ಅದರಂತೆ ಕಟ್ಟುನಿಟ್ಟಾದ ಆಹಾರ ಕ್ರಮ ಅನುಸರಿಸದೆ ದೇಹದ ತೂಕ ಇಳಿಸಿಕೊಳ್ಳುವ ಕೆಲವು ವಿಧಾನಗಳು, ತಂತ್ರಗಳು ಯಾವುವು ಎಂಬುದನ್ನು ನಿಮಗೆ ತಿಳಿಸುತ್ತೇವೆ. ಆರಂಭದಲ್ಲಿ ಈ ಸ್ಮಾರ್ಟ್ ಟಿಪ್ಸ್ ಓದುವಾಗ ನಿಮಗೆ ನಗು ಬರಬಹುದು. ಆದರೂ ಒಮ್ಮೆ ಪ್ರಯತ್ನಿಸಿ...It really works!


1. ನೀವು ನಿಜವಾಗಲೂ ನಿಮ್ಮ ತೂಕ ಇಳಿಸಿಕೊಳ್ಳಲು ಬಯಸುತ್ತೀರಾದರೆ ಸದಾ ನಿಮ್ಮೊಂದಿಗೆ ಪುಟ್ಟ ಕನ್ನಡಿಯನ್ನು ಒಯ್ಯಿರಿ. ಯಾಕಂದರೆ ನೀವು ಎಷ್ಟು ದಪ್ಪಗಿದ್ದೀರಾ ಎಂಬುದನ್ನು ಈ ಕನ್ನಡಿ ಸದಾ ನೆನಪಿನಲ್ಲಿಡುವಂತೆ ಮಾಡುತ್ತದೆ. ಅಲ್ಲದೆ, ಕಡಿಮೆ ಆಹಾರ ಸೇವನೆಗೆ ಪ್ರೇರೇಪಿಸುತ್ತದೆ.


2.  ದೇಹದ ತೂಕ ಇಳಿಸಲು ನಿಮ್ಮನ್ನು ನೀವು ನಿಯಂತ್ರಣದಲ್ಲಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮನಬಂದಂತೆ ತಿನ್ನುವುದನ್ನು ನೀವೇ ನಿಯಂತ್ರಿಸುತ್ತೀರಿ.


3. ದೇಹದ ತೂಕ ಕಡಿಮೆಯಾಗುತ್ತಿಲ್ಲ ಎಂಬ ಕಾರಣ ಹೇಳುವುದನ್ನು ಮೊದಲು ಬಿಡಿ. "ಅಯ್ಯೋ, ನಾನು ಕ್ರಿಸ್ಮಸ್ ಆದ್ಮೇಲೆ ತುಂಬಾ ದಪ್ಪ ಆಗ್ಬಿಟ್ಟೆ. ಇಷ್ಟ ಅಂತ ಸಿಕ್ಕಾಪಟ್ಟೆ ತಿಂಡಿ ತಿಂದು ದಪ್ಪ ಆಗ್ಬಿಟ್ಟಿದ್ದೀನಿ" ಎಂಬೆಲ್ಲಾ ಸಬೂಬು ಹೇಳುವುದನ್ನು ಬಿಡಿ. ಯಾವಾಗಲೂ ನಿಮ್ಮ ಹೊಟ್ಟೆ ಸ್ವಲ್ಪ ತುಂಬಿದೆ ಅನಿಸಿದಾಗಲೇ ತಿನ್ನುವುದನ್ನು ನಿಲ್ಲಿಸಿ. ಗಂಟಲವರೆಗೆ ಭರ್ತಿಯಾಗುವಂತೆ ತಿನ್ನಬೇಡಿ. ಬಾಯಿಚಪಲಕ್ಕೆ ಇನ್ನೂ ತಿನ್ನಬೇಕೆನಿಸಿದರೂ ಆ ಕಡೆ ತಿರುಗಿಯೂ ನೋಡಬೇಡಿ. ಮನಸ್ಸನ್ನು ನಿಯಂತ್ರಣದಲ್ಲಿಡಿ.


4. ಕೊಬ್ಬು ಹೆಚ್ಚಿಸುವಂಥ ಆಹಾರ ಪದಾರ್ಥಗಳನ್ನು ಕೊಳ್ಳಲೇಬೇಡಿ. ಏಕೆಂದರೆ ಮನೆಯಲ್ಲಿ ಬಿಸ್ಕೆಟ್, ಚಾಕಲೇಟ್, ಐಸ್ ಕ್ರೀಂ ಇತರ ಆಹಾರ ಪದಾರ್ಥಗಳಿದ್ದರೆ ಯಾರಿಗೆ ತಾನೇ ತಿನ್ನಲು ಮನಸ್ಸಾಗುವುದಿಲ್ಲ ಹೇಳಿ. ಎದುರಿಗೆ ಕಾಣಿಸಿದ ತಕ್ಷಣ ಬಾಯಿಗೆ ಹಾಕಿಕೊಳ್ಳುವ ಆಸೆ ಆಗುವುದು ಸಹಜ. ಹಾಗಾಗಿ ಆದಷ್ಟು ಜಂಕ್ ಫುಡ್ ಗಳನ್ನು ಖರೀದಿಸುವುದು ಕಡಿಮೆ ಮಾಡಿ.


5. ಕಟ್ಟುನಿಟ್ಟಿನ ಆಹಾರ ಕ್ರಮ ಬಿಟ್ಟುಬಿಡಿ. ಹಾಗೆಯೇ ಜಂಕ್ ಫುಡ್ ತಿನ್ನುವುದನ್ನೂ ಕಡಿಮೆ ಮಾಡಿ. ಇದುವರೆಗೆ ಶೇ.80 ಭಾಗ ಜಂಕ್ ಫುಡ್ ತಿನ್ನುತ್ತಿದ್ದಿರಾದರೆ, ಇನ್ನೂ ಮುಂದೆ ಶೇ.20 ಬಾಗ ಮಾತ್ರ ಸೇವಿಸಿ. ಉಳಿದ ಶೇ.80 ಭಾಗ ಆರೋಗ್ಯಯುತ ಆಹಾರ ಸೇವಿಸಿ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಆದಷ್ಟು ದಕ್ಷಿಣ ಭಾರತ ಆಹಾರ ಪದ್ಧತಿಯನ್ನು ಅನುಸರಿಸಿ. 


6. ಒತ್ತಡ ಮತ್ತು ವಾಕ್ಸಮರದಿಂದ ದೂರವಿರಲು ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದರೆ ಮನೋಒತ್ತಡಗಳು ನಿಮ್ಮ ಊಟದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಿಮ್ಮ ಮನಸ್ಸಿಗೆ ಒತ್ತಡ ಹೆಚ್ಚಾಗುವಂತಹ ಸನ್ನಿವೇಶಗಳಿಂದ ಆದಷ್ಟು ದೂರವಿರಿ.


7. ನಿಮ್ಮ ದೇಹದ ತೂಕದ ಬಗ್ಗೆ ಎಚ್ಚರಿಕೆ ನೀಡುವಂತಹ 'ತಿನ್ನುವ ಮೊದಲು ಯೋಚಿಸಿ' ಎಂದು ಬರೆದಿರುವ ಕಾರ್ಡ್ ಅನ್ನು ಸದಾ ನಿಮ್ಮೊಂದಿಗಿಟ್ಟುಕೊಳ್ಳಿ. ಇದು ನಿಮ್ಮ ಡೆಬಿಟ್ ಕಾರ್ಡ್ ಅಳತೆಯಲ್ಲಿದ್ದರೂ ಸಾಕು. ಹೀಗಾಗಿ ನೀವು ಹೊರಗಡೆ ಹೋದಾಗ ನೀವು ಎಷ್ಟು ತಿನ್ನಬೇಕು, ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ನೆನಪಿನಲ್ಲಿಡಳು ಇದು ಸಹಾಯವಾಗುತ್ತದೆ.


8. ಇವೆಲ್ಲದರೊಂದಿಗೆ ದೇಹಕ್ಕೆ, ಮನಸ್ಸಿಗೆ ಶಾಂತಿ ನೀಡುವ, ಉಲ್ಲಾಸ ನೀಡುವ, ಚೈತನ್ಯ ತುಂಬುವ ಪ್ರಾಣಾಯಾಮ ಮತ್ತು ದ್ಯಾನ ಮಾಡಿ. ಇವು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ದೇಹದ ತೂಕ ಹೆಚ್ಚುವುದನ್ನು ನಿಯಂತ್ರಣಡಲ್ಲಿಡಲು ಸಹಾಯವಾಗುತ್ತದೆ.