ನವದೆಹಲಿ: ದಿನೇ ದಿನೇ ದೇಹದ ತೂಕ ಹೆಚ್ಚಾಗ್ತಾನೇ ಇದೆ.... ಕೆಲಸ, ಅಡುಗೆ, ಮಕ್ಕಳ ತಯಾರಿ ಹೀಗೆ ಒಂದಲ್ಲಾ ಒಂದು ಕೆಲಸ ಇದ್ದೇ ಇರುತ್ತೆ.. ವಾಕಿಂಗ್ ಹೋಗಕ್ಕಾಗ್ತಿಲ್ಲ, ವ್ಯಾಯಾಮ ಮಾಡಲು ಸಮಯ ಸಿಗುತ್ತಿಲ್ಲ ಅಂತ ಚಿಂತೆ ಮಾಡುವವರಿಗೆ ಮನೆಯಲ್ಲೇ ಇದ್ದು ತಿನ್ನುವ ಆಹಾರದಲ್ಲಿ ಸ್ವಲ್ಪ ಬದಲಾವಣೆಯ ಮೂಲಕ ದೇಹದ ತೂಕ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲಿವೆ ಕೆಲವು ಸರಳ ಟಿಪ್ಸ್...


COMMERCIAL BREAK
SCROLL TO CONTINUE READING

* ಕಾಳು ಮೆಣಸು: ದೇಹದ ತೂಕ ಇಳಿಸಲು ಇಚ್ಚಿಸುವವರು ಮೊದಲು ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡ್ಬೇಕು. ಜೊತೆಗೆ ಸೇವಿಸುವ ಆಹಾರದಲ್ಲಿ ಕಾಳು ಮೆಣಸು ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ದೊರೆಯುವುದರೊಂದಿಗೆ ಹೊಟ್ಟೆಯ ಹಸಿವನ್ನೂ ಕಡಿಮೆ ಮಾಡುತ್ತದೆ. 


* ಸೊಪ್ಪು, ತರಕಾರಿ: ನೀವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗಬೇಕೆಂದರೆ ನಾರಿನಂಶ ಇರುವ ಸೊಪ್ಪು ತರಕಾರಿಗಳನ್ನು ತಿನ್ನುವುದು ಉತ್ತಮ. ಇದರಿಂದಾಗಿ ಜೀರ್ಣಕ್ರಿಯೆ ಸುಗಮವಾಗಿ ಹೊಟ್ಟೆಯಲ್ಲಿ ಶೇಖರವಾಗುವ ಕೊಬ್ಬು ಕಡಿಮೆಯಾಗುತ್ತದೆ. 


* ಸೌತೆಕಾಯಿ: ಹೊಟ್ಟೆಯಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆದರೆ ಅಲ್ಲಿಗೆ ನಿಮ್ಮ ದೇಹದ ತೂಕ ಏರಿಕೆಯಾಗುವುದು ನಿಯಂತ್ರಣಕ್ಕೆ ಬಂದಂತೆ. ಹಾಗಾಗಿ ಪ್ರತಿನಿತ್ಯ ಸೌತೆಕಾಯಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ನೀರಿನಂಶ ದೊರೆತು, ಕೊಬ್ಬು ಕರಗಲು ಸಹಾಯವಾಗುತ್ತದೆ.


* ಎಲೆಕೋಸು: ಸಾಮಾನ್ಯವಾಗಿ ಸೊಂಟ ಮತ್ತು ಹೊಟ್ಟೆ ಭಾಗದಲ್ಲಿ ಹೆಚ್ಚಾಗಿ ಕೊಬ್ಬು ಶೇಖರವಾಗುತ್ತದೆ. ಇದನು ತಡೆಯಲು ಎಲೆಕೋಸು ತಿನ್ನುವುದು ಅಗತ್ಯ. ಇದರಲ್ಲಿ ಅಯೋಡಿನ್ ಮತ್ತು ಸಲ್ಫರ್ ಸಮೃದ್ಧವಾಗಿರುವುದರಿಂದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.


* ಗ್ರೀನ್ ಟೀ: ದೇಹದಲ್ಲಿ ಹೆಚ್ಚಿನ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ದೇಹದ ಜೀವಾಣು ವಿಷವನ್ನು ತೆಗೆದುಹಾಕುವ ಶಕ್ತಿ ಇರುವ ಗ್ರೀನ್ ಟೀ ಸೇವನೆ ಉತ್ತಮ ಪರಿಹಾರ.


* ಯೋಗಾಸನ: ದೇಹದ ತೂಕ ಇಳಿಸಿಸಲು ಹೊರಗೆ ವಾಕಿಂಗ್ ಹೋಗಲು, ಜಿಮ್ ಗೆ ಹೋಗಲು, ವ್ಯಾಯಾಮ ಮಾಡಲು ಸಮಯವಿಲ್ಲ ಎನ್ನುವವರು ಮನೆಯಲ್ಲೇ ಪ್ರತಿನಿತ್ಯ 20 ನಿಮಿಷ ಯೋಗಾಸನ ಮಾಡುವುದರಿಂದ ದೇಹದ ತುಕ ಕಡಿಮೆ ಮಾಡಿಕೊಳ್ಳಬಹುದು.