ಶಾಂಪೂ ಹಾಕಿ ಸ್ನಾನ ಮಾಡುವಾಗ.. ಈ ತಪ್ಪು ಮಾಡಿದರೆ ಬೋಳು ಗ್ಯಾರಂಟಿ..!
Hair care tips : ಪದೇ ಪದೇ ಶಾಂಪೂ ಹಾಕುವುದರಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ.. ಆದ್ದರಿಂದ ನಿಮ್ಮ ಕೂದಲನ್ನು ಶಾಂಪೂ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಇಲ್ಲವಾದರೆ ಕೂದಲು ಉದುರಿ ತಲೆ ಬೋಳಾಗಬಹುದು.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Hair growth tips : ಬಿಸಿಲಿನ ತಾಪ, ಕೆಮಿಕಲ್‌ಗಳಿರುವ ವಿವಿಧ ಸೌಂದರ್ಯವರ್ಧಕಗಳ ಬಳಕೆ ಹಾಗೂ ಸೂಕ್ತ ಆರೈಕೆ ಮಾಡದೇ ಇರುವುದರಿಂದ ಕೂದಲು ಒಣಗಿ ಮಂಕಾಗುತ್ತದೆ. ಅನೇಕ ಜನರು ಈ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶಾಂಪೂ ಮಾಡಿದ ನಂತರವೂ ಕೂದಲುಗಳು ಒರಟಾಗಿರುತ್ತವೆ, ಒಣಗುತ್ತವೆ, ಉದುರಲು ಪ್ರಾರಂಭಿಸುತ್ತದೆ. ಕಡಿಮೆ ಅವಧಿಯಲ್ಲಿಯೇ ತಲೆ ಬೋಳಾಗುತ್ತದೆ..
ಶಾಶ್ವತ ಪರಿಹಾರಕ್ಕಾಗಿ ನಿಯಮಿತ ಕೂದಲ ರಕ್ಷಣೆಯು ಅತ್ಯಗತ್ಯ. ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ನಿಯಮಿತವಾಗಿ ಎಣ್ಣೆಯನ್ನು ಬಳಸುವುದು ಮುಖ್ಯ. ಪ್ರತಿದಿನ ಅಲ್ಲದಿದ್ದರೂ ವಾರಕ್ಕೆ ಎರಡು ಬಾರಿಯಾದರೂ ಶಾಂಪೂ ಮಾಡುವ ಮೊದಲು ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿ.
ಒರಟು, ಒಣ ಕೂದಲಿಗೆ ಕಂಡೀಷನಿಂಗ್ ಅತ್ಯಗತ್ಯ. ಶಾಂಪೂ ಮಾಡಿದ ನಂತರ ಕಂಡೀಷನರ್ ಅನ್ನು ಬಳಸಬೇಕು. ಇದು ಕೂದಲನ್ನು ಮೃದು ಮತ್ತು ನಯವಾಗಿಸುತ್ತದೆ. ಕೂದಲಿನ ಶುಷ್ಕತೆಯನ್ನು ತೊಡೆದುಹಾಕಲು ಹೇರ್ ಸೀರಮ್ ಅನ್ನು ನಿಯಮಿತವಾಗಿ ಬಳಸುವುದು ಅವಶ್ಯಕ. ಹೊರಗೆ ಹೋಗುವ ಮೊದಲು ಕೂದಲನ್ನು ಧೂಳಿನಿಂದ ರಕ್ಷಿಸಲು ಹೇರ್ ಸೀರಮ್ ಬಳಸಿ.
ಬ್ಲೋ ಡ್ರೈಯರ್‌ನಲ್ಲಿ ಕೂದಲನ್ನು ಅತಿಯಾಗಿ ಒಣಗಿಸುವುದು ಕೂದಲು ಒಡೆಯಲು ಕಾರಣವಾಗಬಹುದು. ಒದ್ದೆಯಾದ ಕೂದಲನ್ನು ಬಿಸಿಲಿನಲ್ಲಿ ಅಥವಾ ಫ್ಯಾನ್ ಅಡಿಯಲ್ಲಿ ಒಣಗಿಸುವುದು ಉತ್ತಮ. ಬ್ಲೋ ಡ್ರೈಯರ್ ಅನ್ನು ಬಳಸುವಾಗ ಹೀಟ್ ಮೋಡ್ ಅನ್ನು ಸಹ ಬಳಸಬಾರದು.
ಪದೇ ಪದೇ ಶಾಂಪೂ ಹಾಕುವುದರಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಶಾಂಪೂವನ್ನು ವಾರಕ್ಕೆ ಎರಡು ಬಾರಿ ಹೆಚ್ಚು ಮಾಡಬಾರದು. ಅಗತ್ಯವಿದ್ದರೆ, ಕೂದಲಿನ ಎಣ್ಣೆಯುಕ್ತತೆಯನ್ನು ಕಡಿಮೆ ಮಾಡಲು ಒಣ ಶಾಂಪೂ ಬಳಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ