Cough care tips : ರಾಜ್ಯಾದ್ಯಂತ ನೆಗಡಿ, ಕೆಮ್ಮು, ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಔಷಧ ಸೇವಿಸಿದ ನಂತರ ಶೀತ ಮತ್ತು ಜ್ವರ ಸಹ ಹೋಗುತ್ತದೆ. ಆದರೆ ಕೆಮ್ಮು ಬಂದರೆ ಅಷ್ಟು ಬೇಗನೇ ಹೋಗುವುದಿಲ್ಲ. ಕೆಲವೊಮ್ಮೆ ರಾತ್ರಿಯಲ್ಲಿ ಕೆಮ್ಮು ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಇದು ನಿದ್ರೆಗೂ ಕೂಡ ತೊಂದರೆ ನೀಡುತ್ತದೆ.. ಜಾಸ್ತಿ ತಲೆಕಡಿಸಿಕೊಳ್ಳಬೇಡಿ.. ಈ ಮನೆಮದ್ದುಗಳನ್ನು ಸೇವಿಸಿ..


COMMERCIAL BREAK
SCROLL TO CONTINUE READING

ಹಗಲಿಗಿಂತ ರಾತ್ರಿಯಲ್ಲಿ ಕೆಮ್ಮುವವರೇ ಹೆಚ್ಚು. ರಾತ್ರಿ ಮಲಗಿದ ತಕ್ಷಣ ಕೆಮ್ಮು ಶುರುವಾಗುತ್ತದೆ. ಈ ರೀತಿಯ ಕೆಮ್ಮನ್ನು ಕೆಲವು ಮನೆಮದ್ದುಗಳ ಸಹಾಯದಿಂದ ಗುಣಪಡಿಸಬಹುದು. ಈ ಮನೆಮದ್ದನ್ನು ಮಾಡುವುದು ತುಂಬಾ ಸುಲಭ ಮತ್ತು ಯಾವುದೇ ಅಡ್ಡಪರಿಣಾಮವೂ ಇರುವುದಿಲ್ಲ. ಅಲ್ಲದೆ, ಯಾರಾದರೂ ಇದನ್ನು ಪ್ರಯತ್ನಿಸಬಹುದು. 


ಇದನ್ನೂ ಓದಿ:ಊಟದ ನಂತರ ಮತ್ತು ಊಟದ ಜೊತೆ ನೀರು ಕುಡಿದ್ರೆ ಈ 7 ಆರೋಗ್ಯ ಸಮಸ್ಯೆಗಳು ಬರುತ್ತವೆ..! ಎಚ್ಚರ..!!


ಗಂಟಲಿನಲ್ಲಿ ಕಿರಿಕಿರಿ ಮತ್ತು ತುರಿಕೆಯನ್ನು ಶಮನಗೊಳಿಸಲು ಹಾಗೂ ಕೆಮ್ಮನ್ನು ಗುಣಪಡಿಸಲು ಜೇನುತುಪ್ಪವನ್ನು ಸೇವಿಸಬೇಕು. ನಿಮಗೆ ಕೆಮ್ಮು ಇದ್ದರೆ ಮತ್ತು ರಾತ್ರಿಯಲ್ಲಿ ಅದು ಹೆಚ್ಚಾಗುತ್ತಿದ್ದರೆ, ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಕುಡಿಯಿರಿ. ಇದು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಜೇನು ಕುಡಿದ ನಂತರ ನೀರು ಕುಡಿಯಬೇಡಿ.


ಶುಂಠಿಯಲ್ಲಿ ಉರಿಯೂತ ನಿವಾರಕ ಗುಣವಿದ್ದು ಗಂಟಲಿನ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶುಂಠಿ ಚಹಾವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. 


ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿದ್ದು ಅದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಿಮಗೆ ಕೆಮ್ಮು ಇದ್ದರೆ, ಬೆಳ್ಳುಳ್ಳಿ ಎಸಳನ್ನು ಅಗಿಯಿರಿ ಅಥವಾ ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಿ, ಚಹಾದಂತೆ ಮಾಡಿ ಕುಡಿಯಿರಿ. 


ಇದನ್ನೂ ಓದಿ: ಇದು ವಿಶ್ವದ ಅತ್ಯಂತ ಶಕ್ತಿಶಾಲಿ ತರಕಾರಿ..! ಮಳೆಗಾಲದಲ್ಲಿ 90 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ


ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದ್ದು, ಇದು ಉರಿಯೂತವನ್ನು ನಿವಾರಿಸುತ್ತದೆ.. ಅರಿಶಿನ ಕೆಮ್ಮುಗೆ ರಾಮಬಾಣವೆಂದು ಹಿಂದಿನಿಂದಲೂ ಹೇಳಲಾಗುತ್ತದೆ. ನಿಮಗೆ ಕೆಮ್ಮು ಇದ್ದರೆ, ನೀವು ಅರಿಶಿನದೊಂದಿಗೆ ಬೆಚ್ಚಗಿನ ಹಾಲನ್ನು ಕುಡಿಯಬೇಕು. ಇದು ಗಂಟಲಿನಲ್ಲಿ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಕೆಮ್ಮನ್ನು ನಿವಾರಿಸುತ್ತದೆ. 


ಹವಾಮಾನದ ಕಾರಣದಿಂದ ನಿಮಗೆ ಶೀತ ಮತ್ತು ಕೆಮ್ಮು ಇದ್ದರೆ, ಸಾಕಷ್ಟು ನಿದ್ದೆ ಮಾಡಿ. ಹಗಲಿನಲ್ಲಿ ಸಾಕಷ್ಟು ನೀರು ಕುಡಿಯಿರಿ ಇದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಇದು ಕಫವನ್ನು ತೆಳುಗೊಳಿಸುತ್ತದೆ, ಇದರಿಂದಾಗಿ ದೇಹದಿಂದ ಕಫ್‌ ತ್ವರಿತವಾಗಿ ಹೊರಗೆ ಹೋಗುತ್ತದೆ..


(ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Kannada News ಇದನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.