White hair to Black hair : ಕಳಪೆ ಆಹಾರ ಮತ್ತು ಜೀವನಶೈಲಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಜನರು ಕೂದಲು ಬಿಳಿಯಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಕ್ಕಳಿರಲಿ, ಮುದುಕರಿರಲಿ ಪ್ರತಿಯೊಬ್ಬರು ಇಂದು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಪುರುಷರು ಮತ್ತು ಮಹಿಳೆಯರ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿವೆ. ಇದರಿಂದಾಗಿ ಮುಖದ ಸೌಂದರ್ಯವೇ ನಾಶವಾಗಿ, ಆತ್ಮಸ್ಥೈರ್ಯ ಕುಂದುತ್ತಿದೆ. ನೀವೂ ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಪರಿಣಾಮಕಾರಿಯಾದ ಈ ಮನೆಮದ್ದ ಒಮ್ಮೆ ಪ್ರಯತ್ನಿಸಿ.


COMMERCIAL BREAK
SCROLL TO CONTINUE READING

ಕೂದಲು ಕಪ್ಪಾಗಲು ನಿಮಗೆ ಅಡುಗೆಮನೆಯಲ್ಲಿ ಇರುವ ಒಂದು ಚಮಚ ಅರಿಶಿನ ಮತ್ತು ಎರಡು ಚಮಚ ಆಮ್ಲಾ ಪುಡಿ ಸಾಕು. ಎರಡನ್ನೂ ಕಡಾಯಿಯಲ್ಲಿ ಹಾಕಿ ನಂತರ ಚೆನ್ನಾಗಿ ಹುರಿಯಿರಿ. ಕಪ್ಪು ಬಣ್ಣಕ್ಕೆ ತಿರುಗುವವರೆಗೂ ಹುರಿಯಬೇಕು. ಕಪ್ಪು ಬಣ್ಣಕ್ಕೆ ತಿರುಗಿದ ನಂತರ, ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ ಅದನ್ನು ತಣ್ಣಗಾಗಲು ಬಿಡಿ.


ಇದನ್ನೂ ಓದಿ: ಆಧ್ಯಾತ್ಮಿಕತೆಯಿಂದ ನಿಮಗಾಗುವ ಪ್ರಯೋಜನಗಳೇನು ಗೊತ್ತೇ?


ನಂತರ, ಅಲೋವೆರಾ ಜೆಲ್ ಅನ್ನು ಅಗತ್ಯಕ್ಕೆ ತಕ್ಕಷ್ಟು ಮಿಶ್ರಣ ಮಾಡಬೇಕು. ಮೂರು ಪದಾರ್ಥವನ್ನು ಚನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಳ್ಳಿ. ನಂತರ ಅದನ್ನು ನಿಮ್ಮ ಕೂದಲಿಗೆ ಸಮವಾಗಿ ಅನ್ವಯಿಸಿ, ಅರ್ಧ ಘಂಟೆಯವರೆಗೆ ಕಾಯಿರಿ. ಅರ್ಧ ಘಂಟೆಯ ನಂತರ, ನಿಮ್ಮ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ನಂತರ ಶಾಂಪೂವಿನಿಂದ ತೊರೆದುಕೊಳ್ಳಿ.


ಒಂದು ವೇಳೆ ನಿಮ್ಮ ಬಳಿ ಅಲೋವೆರಾ ಜೆಲ್ ಇಲ್ಲವಾದರೆ, ಸಾಸಿವೆ ಎಣ್ಣೆಯನ್ನು ಕೂಡ ಸೇರಿಸ ಪೇಸ್ಟ್‌ ಮಾಡಿಕೊಳ್ಳಬಹುದು. ಸಾಸಿವೆ ಎಣ್ಣೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ, ಇದು ಕೂದಲನ್ನು ಬಲ, ದಪ್ಪ ಮತ್ತು ಕಪ್ಪು ಮಾಡುತ್ತದೆ. ನೀವು ವಾರಕ್ಕೆ ಎರಡು ಬಾರಿ ಆಮ್ಲಾ ಮತ್ತು ಅರಿಶಿನದ ಈ ಮನೆಮದ್ದನ್ನು ಬಳಸಿದರೆ, ನಿಮ್ಮ ಕೂದಲು ಶೀಘ್ರದಲ್ಲೇ ನೈಸರ್ಗಿಕವಾಗಿ ಕಪ್ಪಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.