ಡ್ಯಾಂಡ್ರಫ್ ನಿವಾರಣೆಗೆ ಅಲೋವೆರಾ ಮದ್ದು..! ಹೀಗೆ ಹೆಚ್ಚು ಕರ್ಚಿಲ್ಲದೆ ಕೂದಲಿನ ಆರೋಗ್ಯ ಕಾಪಾಡಿ
Aloe Vera hair care : ಅಲೋವೆರಾ ಜೆಲ್ ಅನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಇದರ ಗುಣಲಕ್ಷಣಗಳು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೆ, ಅವುಗಳನ್ನು ಧೃಡವಾಗಿರಿಸುತ್ತದೆ. ಹಾಗಾಗಿ ಪ್ರತಿದಿನ ಈ ರೀತಿ ಹೇರ್ ಜೆಲ್ ಬಳಸಿ.
Aloe vera for dandruff : ಹೆಚ್ಚಾಗಿ ಚಳಿಗಾಲದಲ್ಲಿ ಅನೇಕರು ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಸಧ್ಯ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆ ಅಂದ್ರೆ, ತಲೆಹೊಟ್ಟು. ಇದನ್ನು ಯಾವುದೇ ರಾಸಾಯನಿಕ, ದುಬಾರಿ ಔಷಧಿ ಬಳಸದೆ, ಮನೆಯ ಅಂಗಳದಲ್ಲಿ ಸಿರುವ ಆಲೋವೆರಾ ಜೆಲ್ ಬಳಸಿ ನಿವಾರಿಸಬಹುದು.
ಹೌದು.. ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಅಲೋವೆರಾ ಜೆಲ್ ಅನ್ನು ಬಳಸಬೇಕು. ಇದರ ಔಷಧೀಯ ಗುಣಗಳು ಕೂದಲನ್ನು ಬಲಪಡಿಸುವುದಲ್ಲದೆ, ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಕೂದಲಿಗೆ ಅಲೋವೆರಾ ಜೆಲ್ ಅನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಕೂದಲಿನ ಸಾಫ್ಟ್ ಆಗುತ್ತದೆ. ಜೊತೆಗೆ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಬಾದಾಮಿಯನ್ನು ಈ ಸಮಯದಲ್ಲಿ ಹೀಗೆ ತಿಂದರಷ್ಟೇ ಲಾಭ ! ಇಲ್ಲವಾದರೆ ಅಪಾಯವೇ !
ಅಲೋವೆರಾ ಜೆಲ್ ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ಪ್ರತಿದಿನ ಕೂದಲಿಗೆ ಹಚ್ಚುವುದರಿಂದ ಕೂದಲು ತೇವಾಂಶದಿಂದ ಕೂಡಿರುತ್ತದೆ. ಈ ಕಾರಣದಿಂದಾಗಿ, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಗಳು ದೂರವಾಗುತ್ತವೆ. ಆದಾಗ್ಯೂ, ಈ ಜೆಲ್ ಅನ್ನು ಚರ್ಮದ ಮೇಲೆ ಸಹ ಬಳಸಬಹುದು. ಇದನ್ನು ಪ್ರತಿದಿನ ತ್ವಚೆಗೆ ಹಚ್ಚುವುದರಿಂದ ಚಳಿಗಾಲದ ಒಣ ತ್ವಚೆ ಸಮಸ್ಯೆಯಿಂದಲೂ ಮುಕ್ತಿಹೊಂದಬಹುದು. ಅಲೋವೆರಾದಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಮತ್ತು ಖನಿಜಗಳು ಇವೆ. ಇವು ಕೂದಲನ್ನು ಆರೋಗ್ಯಕರವಾಗಿಸುತ್ತವೆ.
ಅಲೋವೆರಾದಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ಇದರಿಂದ ತಲೆಹೊಟ್ಟು ಸಮಸ್ಯೆಗಳೂ ಸುಲಭವಾಗಿ ನಿವಾರಣೆಯಾಗುತ್ತವೆ. ಹೆಚ್ಚಾಗಿ ಬಿಳಿ ಕೂದಲು ಕೂಡ ಕಪ್ಪಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದ್ದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಅಲೋವೆರಾ ಜೆಲ್ ಅನ್ನು ಪ್ರತಿದಿನ ಬಳಸಬೇಕು. ಇದು ಶಿಲೀಂಧ್ರನಾಶಕ ಗುಣಗಳನ್ನು ಸಹ ಹೊಂದಿದೆ. ಆದ್ದರಿಂದ ಕೂದಲಿನಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.