ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ಕಿನ್ ಕೇರ್ ಉತ್ಪನ್ನಗಳನ್ನು ಎಲ್ಲರೂ ಬಳಸುತ್ತಾರೆ. ಒಣಹವೆ ಕಾರಣದಿಂದ ದಿನಕ್ಕೆ ಹಲವಾರು ಬಾರಿ ಬಾಡಿ ಲೋಷನ್ ಅನ್ನು ಹಚ್ಚುತ್ತಾ ಇರುತ್ತೇವೆ. ಆದರೆ ಈ ಬಾಡಿ  ಲೋಶನ್ ಗಳನ್ನು ಅತಿಯಾಗಿ ಬಳಸುವುದು  ಅಪಾಯಕಾರಿಯಾಗಿ ಪರಿಣಮಿಸಬಹುದು. ಯಾಕೆಂದರೆ ಅವುಗಳಲ್ಲಿ ಹಲವು ರೀತಿಯ ರಾಸಾಯನಿಕಗಳು ಅಡಗಿರುತ್ತವೆ. ಗರ್ಭಾವಸ್ಥೆಯಲ್ಲಿ ಲೋಷನ್ ಮತ್ತು ಶಾಂಪೂಗಳಲ್ಲಿರುವ ರಾಸಾಯನಿಕಗಳ ಸಂಪರ್ಕಕ್ಕೆ ಬರುವ ಮಹಿಳೆಯರಿಗೆ ಜನಿಸಿದ ಶಿಶುಗಳು ಅಸ್ತಮಾದಿಂದ ಬಳಲುವ ಸಾಧ್ಯತೆ ಇರುತ್ತದೆ. 


COMMERCIAL BREAK
SCROLL TO CONTINUE READING

ಗರ್ಭಾವಸ್ಥೆಯಲ್ಲಿ ಕೆಲವು ದಿನನಿತ್ಯದ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಮತ್ತು ಮಕ್ಕಳಲ್ಲಿ ಅಸ್ತಮಾದ ಬೆಳವಣಿಗೆಯ ನಡುವಿನ ಸಂಬಂಧವನ್ನು ಕಂಡುಹಿಡಿಯಲು ವಿಶ್ವವಿದ್ಯಾನಿಲಯವು 3,500 ಕ್ಕೂ ಹೆಚ್ಚು ತಾಯಿ-ಮಗು ಜೋಡಿಗಳ ಡೇಟಾವನ್ನು ವಿಶ್ಲೇಷಿಸಿದೆ. 


ಇದನ್ನೂ ಓದಿ : ಧೂಳಿನ ಅಲರ್ಜಿಯಿಂದ ಪಾರಾಗಲು ಈ ಮನೆಮದ್ದುಗಳನ್ನು ಬಳಸಿ, ತಕ್ಷಣ ನಿವಾರಣೆಯಾಗುತ್ತದೆ..!


ಎನ್ವೈರ್ನ್ ಮೆಂಟಲ್ ಪೋಲ್ಯುಶನ್ ' ಜರ್ನಲ್‌ನಲ್ಲಿನ ಅಧ್ಯಯನವು ಲೋಷನ್‌ಗಳು ಮತ್ತು ಶಾಂಪೂಗಳಂತಹ ಸ್ಕಿನ್ ಕೇರ್ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಬಳಸುವ ರಾಸಾಯನಿಕವಾದ 'ಬ್ಯುಟೈಲ್‌ಪಾರಾಬೆನ್'ಮಕ್ಕಳಲ್ಲಿ ಆಸ್ತಮಾದ ಅಪಾಯವನ್ನು  1.54 ಪಟ್ಟು ಹೆಚ್ಚಿಸುತ್ತದೆ. 


ಅಧ್ಯಯನದಲ್ಲಿ ತಿಳಿದು ಬಂದದ್ದೇನು ? :
4-ನಾನಿಲ್ಫೆನಾಲ್ ಎಂಬ ರಾಸಾಯನಿಕಕ್ಕೆ ಒಡ್ಡಿಕೊಂಡ ತಾಯಂದಿರಿಗೆ ಜನಿಸಿದ ಗಂಡುಮಕ್ಕಳಿಗೆ ಆಸ್ತಮಾ ಬರುವ ಸಾಧ್ಯತೆ 2.09 ಪಟ್ಟು ಹೆಚ್ಚಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಆದರೆ ಹುಡುಗಿಯರಲ್ಲಿ ಅಂತಹ ಅಪಾಯ ಕಂಡುಬಂದಿಲ್ಲ. ಸಂಶೋಧನಾ ತಂಡವು ಗರ್ಭಿಣಿ ಮಹಿಳೆಯರಿಂದ ಮೂತ್ರದ ಮಾದರಿಗಳನ್ನು ಸಂಗ್ರಹಿಸಿದ್ದು, ಇದರಲ್ಲಿ 24 ರೀತಿಯ ಫೀನಾಲ್ಗಳನ್ನು ಅಳೆಯಲಾಯಿತು. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ


ಉಸಿರಾಟ ಮತ್ತು ಅಲರ್ಜಿಯಂತಹ ರೋಗಗಳು:
ಸಂಶೋಧನಾ ತಂಡವು ನಾಲ್ಕು ವರ್ಷದವರೆಗೆ ಮಕ್ಕಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಿತು. ರಾಸಾಯನಿಕಗಳ ದೈನಂದಿನ ಬಳಕೆಯು ಮಕ್ಕಳಲ್ಲಿ ಉಸಿರಾಟ ಮತ್ತು ಅಲರ್ಜಿಯಂತಹ ಕಾಯಿಲೆಗಳನ್ನು ಉತ್ತೇಜಿಸುತ್ತದೆ ಎಂಬ ಕಾರಣದಿಂದ ಇದನ್ನು ಮಾಡಲಾಗಿದೆ. ನಾನಿಲ್ಫೆನಾಲ್ ಅಂತಃಸ್ರಾವಕ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ ಎಂದು ತಿಳಿದುಬಂದಿದೆ. ಇವರ ಸಂಪರ್ಕಕ್ಕೆ ಬರುವುದರಿಂದ ಇತ್ತೀಚೆಗೆ ಅಸ್ತಮಾದಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಹಿಂದಿನ ಅಧ್ಯಯನಗಳು ತೋರಿಸಿವೆ. ಮಕ್ಕಳಲ್ಲಿ ಫಿನಾಲ್ ಮಟ್ಟವನ್ನು ನೇರವಾಗಿ ಅಳೆಯಬಾರದು ಎಂದು ಸಂಶೋಧನಾ ತಂಡ ಹೇಳಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಡುಹಿಡಿಯಲು ಭವಿಷ್ಯದ ಅಧ್ಯಯನವನ್ನು ಮಾಡಲು ಅವರು ಒತ್ತಿಹೇಳಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.