ನವದೆಹಲಿ : vitamin D deficiency: ವಿಟಮಿನ್ ಡಿ ಮೂಳೆಯ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ. ಅದರ ಕೊರತೆಯು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ವಿಟಮಿನ್ ಡಿ ಕೊರತೆ (Vitamin D deficiency) ಕಂಡುಬರುತ್ತಿರುವುದು ಸಾಮಾನ್ಯ ಸಮಸ್ಯೆಯಾಗಿದೆ. ಈ ರೋಗ ಲಕ್ಷಣಗಳು ನಿಮ್ಮ ದೇಹದಲ್ಲಿಯೂ ಕಂಡು ಬಂದರೆ, ನಿರ್ಲಕ್ಷಿಸಬೇಡಿ. 


COMMERCIAL BREAK
SCROLL TO CONTINUE READING

ಕೂದಲು ಉದುರುವಿಕೆ:
ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಉದುರುತ್ತಿದ್ದರೆ (Hair fall), ತಕ್ಷಣ ಎಚ್ಚೆತ್ತುಕೊಳ್ಳಿ. ಇದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು (Vitamin D deficiency). ವಿಟಮಿನ್ ಡಿ ಕೊರತೆಯಿಂದ ಕೂದಲು ಉದುರುತ್ತದೆ.  ವಿಟಮಿನ್ ಡಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅವುಗಳ ಬೇರುಗಳನ್ನು ಬಲಪಡಿಸುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ, ಅದು ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Side Effects Of Carrots: ಯಾರು ಕ್ಯಾರೆಟ್ ತಿನ್ನಬಾರದು ಗೊತ್ತಾ..?


ತೂಕ ಹೆಚ್ಚಾಗುವುದು : 
ಹಠಾತ್ ತೂಕ ಹೆಚ್ಚಾಗುವುದು (Weigh gain) ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರುತ್ತದೆ. ವಾಸ್ತವವಾಗಿ, ವಿಟಮಿನ್ ಡಿ ನಮ್ಮ ದೇಹಕ್ಕೆ ನೈಟ್ರಿಕ್ ಆಕ್ಸೈಡ್ ಅನ್ನು ನೀಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೊರತೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. 


ಸುಸ್ತು :
7 ರಿಂದ 8 ಗಂಟೆಗಳ ನಿದ್ದೆ ಮಾಡಿದ ನಂತರವೂ, ಸುಸ್ತು, ಆಲಸ್ಯವಾಗುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯ ಲಕ್ಷಣವೂ ಆಗಿರಬಹುದು (Vitamin D deficiency symptoms).


ಮನಸ್ಥಿತಿಯ ಮೇಲೆ ಪರಿಣಾಮ  :
ಮಾತಿಗೆ ಮುನ್ನ ಸಿಡುಕುತನ, ಖಿನ್ನತೆಗೆ ಒಳಗಾಗುವುದು, ಸಣ್ಣ ಸಣ್ಣ ವಿಚಾರಗಳಿಗೆ ಅಳುವುದು ಸಹ ವಿಟಮಿನ್ ಡಿ ಕೊರತೆಯ ಸಂಕೇತವಾಗಿರುತ್ತದೆ. ವಿಟಮಿನ್ ಡಿಯನ್ನು (Vitamin D) ಸೂರ್ಯನ ಕಿರಣಗಳಿಂದ ನೈಸರ್ಗಿಕವಾಗಿ  ಪಡೆಯಬಹುದು. ಸೂರ್ಯನ  ಕಿರಣ ಮೆದುಳಿನಲ್ಲಿ ಹಾರ್ಮೋನ್ ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಸನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Cinnamon For Men : ಪುರುಷರ ಆರೋಗ್ಯಕ್ಕಿದೆ ದಾಲ್ಚಿನ್ನಿಯ ಅದ್ಭುತ ಪ್ರಯೋಜನಗಳು : ಇಂದಿನಿಂದ ಆಹಾರದಲ್ಲಿ ಸೇವಿಸಿ!


ಕೀಲು ಮತ್ತು ಸ್ನಾಯು ನೋವು :
ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ,  ಅದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ವಿಟಮಿನ್ ಡಿ ಕೊರತೆಯಿಂದಾಗಿ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗುತ್ತದೆ. ಇದರಿಂದಾಗಿ ಮೂಳೆಗಳು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.  ಬೆನ್ನು ಅಥವಾ ಕೀಲುಗಳಲ್ಲಿ ನೋವು ಇದ್ದರೆ, ವಿಟಮಿನ್ ಡಿ ಪರೀಕ್ಷೆಯನ್ನು ಮಾಡಿಸಿಕೊಲ್ಲುವುದು ಸೂಕ್ತ.


ಇವುಗಳನ್ನು ತಿನ್ನುವುದರಿಂದ ವಿಟಮಿನ್ ಡಿ ಹೆಚ್ಚಾಗುತ್ತದೆ
ಅಣಬೆ,  ಮೊಟ್ಟೆ (egg) , ಹಾಲು, ಸೋಯಾ ಹಾಲು, ಕಿತ್ತಳೆ ರಸ, , ಕೊಬ್ಬಿನ ಅಂಶಗಳಿರುವ ಮೀನು, ಇತ್ಯಾದಿಗಳನ್ನು ಸೇವಿಸುವುದರಿನದ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.