Ghee For Bones: ಈ ಸಮಸ್ಯೆ ನಿಮಗಿದ್ದರೆ ನಿತ್ಯ ತುಪ್ಪವನ್ನು ಈ ರೀತಿ ಸೇವಿಸಿ
Ghee For Bones : ಆರೋಗ್ಯಕ್ಕೆ ತುಪ್ಪ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶುದ್ಧ ದೇಸಿ ತುಪ್ಪದಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಸಮೃದ್ಧವಾಗಿರುವ ಕಾರಣ ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ.
Ghee For Bones : ಆರೋಗ್ಯಕ್ಕೆ ತುಪ್ಪ ಬಹಳ ಪ್ರಯೋಜನಕಾರಿ (halth benefits of ghee) ಎಂದು ಪರಿಗಣಿಸಲಾಗಿದೆ. ಶುದ್ಧ ದೇಸಿ ತುಪ್ಪದಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಸಮೃದ್ಧವಾಗಿರುವ ಕಾರಣ ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ತುಪ್ಪ ಬೊಜ್ಜು ಹೆಚ್ಚಿಸುತ್ತದೆ ಎಂಬ ಭಯಕ್ಕೆ ಅನೇಕ ಜನರು ತುಪ್ಪವನ್ನು ತಿನ್ನುವುದಿಲ್ಲ. ಆದರೆ ತುಪ್ಪವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ 2, ಕ್ಯಾಲ್ಸಿಯಂ, ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಸಿ ಗುಣಗಳು ತುಪ್ಪದಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ (halth benefits of ghee) ಎಂದು ಪರಿಗಣಿಸುತ್ತೇವೆ. ದುರ್ಬಲ ಮೂಳೆಗಳ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಈ ವಿಧಾನಗಳೊಂದಿಗೆ ತುಪ್ಪವನ್ನು ಆಹಾರದಲ್ಲಿ ಸೇರಿಸಿ.
ಮೂಳೆಗಳು ಬಲವಾಗಲು ತುಪ್ಪ ಸಹಾಯ ಮಾಡುತ್ತದೆ:
1. ತುಪ್ಪ ಮತ್ತು ಹಾಲು: ಹಾಲನ್ನು (Milk) ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. 1 ಟೀಸ್ಪೂನ್ ತುಪ್ಪದೊಂದಿಗೆ ಬೆರೆಸಿದ ಹಾಲನ್ನು (Ghee and milk) ಕುಡಿಯುವ ಮೂಲಕ ಮೂಳೆಗಳನ್ನು ಬಲಪಡಿಸಬಹುದು. ತುಪ್ಪದೊಂದಿಗೆ ಬೆರೆಸಿದ ಹಾಲು ಕುಡಿಯುವುದರಿಂದ ಆಯಾಸವನ್ನು ಹೋಗಲಾಡಿಸಬಹುದು. ಮಾತ್ರವಲ್ಲ, ಈ ಹಾಲನ್ನು ಸೇವಿಸುವುದರಿಂದ ನಿದ್ರೆಯ ಸಮಸ್ಯೆಯಿರುವ ಜನರಿಗೆ ತುಂಬಾ ಪ್ರಯೋಜನಕಾರಿ.
ಇದನ್ನೂ ಓದಿ : ಎಚ್ಚರ..! ಆರೋಗ್ಯಕ್ಕಾಗಿ ಮಾಡುವ ಈ ಐದು ತಪ್ಪು ಆರೋಗ್ಯ ಕೆಡಿಸಬಹುದು..!
2. ತುಪ್ಪ ಮತ್ತು ಉಗುರು ಬೆಚ್ಚಗಿನ ನೀರು : ಉಗುರು ಬೆಚ್ಚಗಿನ (warm water) ನೀರಿನೊಂದಿಗೆ ತುಪ್ಪವನ್ನು ಸೇವಿಸುವುದರಿಂದ ಮೂಳೆಗಳನ್ನು ಬಲಪಡಿಸಬಹುದು. ಒಂದು ಲೋಟ ನೀರಿನ ಸ್ವಲ್ಪ ಬಿಸಿ ಮಾಡಿ ಅದಕ್ಕೆ ಒಂದು ಚಮಚ ತುಪ್ಪವನ್ನು (Ghee) ಬೆರೆಸಿ ಸೇವಿಸುತ್ತಾ ಬಂದರೆ ಮೂಳೆಗಲು ಬ್ಲಿಷ್ಟವಾಗುತ್ತದೆ.
3. ತುಪ್ಪ ಮತ್ತು ಬೇಳೆ : ಬೇಳೆ (dal) ಎಂದರೆ ಅದು ಪ್ರೋಟೀನ್‌ನ ಉತ್ತಮ ಮೂಲ ಎಂದು ಪರಿಗಣಿಸಲಾಗುತ್ತದೆ. ಅನೇಕ ಪೋಷಕಾಂಶಗಳು ಬೇಳೆಯಲ್ಲಿ ಕಂಡುಬರುತ್ತದೆ. ದುರ್ಬಲ ಮೂಳೆಗಳ ಸಮಸ್ಯೆ ಇದ್ದರೆ, ಬೇಳೆಗೆ ಎರಡು ಚಮಚ ತುಪ್ಪ ಸೇರಿಸಿ ಅದನ್ನು ಸೇವಿಸಿ. ಇದರೊಂದಿಗೆ ಮೂಳೆಗಳು ದುರ್ಬಲಗೊಳ್ಳದಂತೆ ರಕ್ಷಿಸಬಹುದು.
ಇದನ್ನೂ ಓದಿ : Health Tips : ಹಾಲಿನ ಜೊತೆ ಸೇವಿಸಬೇಡಿ ಈ ಆಹಾರವಗಳನ್ನ : ನಿಮಗೆ ಲಾಭದ ಬದಲು ಅಪಾಯವೇ ಜಾಸ್ತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ