ಖಾಲಿ ಹೊಟ್ಟೆಗೆ ಈ ಹಣ್ಣುಗಳನ್ನು ತಿಂದರೆ ಎದುರಾಗಲಿದೆ ಈ ಸಮಸ್ಯೆ
ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಯಿತು ಎಂದರೆ ಸದಾ ಸುಸ್ತು ಕಾಡುತ್ತಿರುತ್ತದೆ.
ನವದೆಹಲಿ :Health Tips: ಹಣ್ಣುಗಳ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಣ್ಣುಗಳಲ್ಲಿ ಅನೇಕ ಪೋಷಕಾಂಶಗಳು ಅಡಗಿರುತ್ತವೆ. ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯವಿರುವ ಜೀವಸತ್ವಗಳು, ಫೈಬರ್, ಫ್ಲೇವನಾಯ್ದ್ ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಹಣ್ಣುಗಳಿಂದ ಸಿಗುತ್ತವೆ. ಆದರೆ, ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಹಣ್ಣುಗಳನ್ನು (fruits on empty stomach) ತಿನ್ನುತ್ತಾರೆ. ಹೀಗೆ ಮಾಡುವುದರಿಂದ ದೇಹಕ್ಕೆ ಪ್ರಯೋಜನವಾಗುವ ಬದಲು ನಷ್ಟವಾಗಬಹುದು. ಹಾಗಿದ್ದರೆ ಬೆಳೆಗೆದ್ದು ಹಣ್ಣುಗಳನ್ನು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯೋಣ..
ಗ್ಯಾಸ್ಟ್ರಿಕ್ ಸಮಸ್ಯೆ:
ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ (fruits on empty stomach) ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಗ್ಯಾಸ್ಟ್ರಿಕ್ (Gastric) ಸಮಸ್ಯೆ ಎದುರಾಯಿತು ಎಂದರೆ ಸದಾ ಸುಸ್ತು ಕಾಡುತ್ತಿರುತ್ತದೆ. ದಿನವಿಡೀ ಹುಳಿ ತೇಗು ಬರುತ್ತಿರುತ್ತದೆ. ಗ್ಯಾಸ್ ಬಿಡುಗಡೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
ಇದನ್ನೂ ಓದಿ : ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ತಿನ್ನಲು ಹೋಗಬೇಡಿ ಈ ಆಹಾರಗಳನ್ನು , ಲಾಭಕ್ಕಿಂತ ನಷ್ಟವೇ ಹೆಚ್ಚು
ಹೊಟ್ಟೆ ಉಬ್ಬುವುದು :
ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು (Fruits) ಸೇವಿಸುವುದರಿಂದ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹೊಟ್ಟೆಯಲ್ಲಿ ಊತದ ಸಮಸ್ಯೆ ಉಂಟಾಗಬಹುದು. ಹೊಟ್ಟೆ ಹೆಚ್ಚು ಉಬ್ಬಿದಂತೆ ಕಾಣುತ್ತದೆ.
ಹೆಚ್ಚು ಜಂಕ್ ಫುಡ್ ತಿನ್ನಬೇಕು ಎಂದನಿಸುತ್ತದೆ :
ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ, ದೇಹಕ್ಕೆ ಸಂಪೂರ್ಣ ಶಕ್ತಿ ಮತ್ತು ಪೌಷ್ಟಿಕಾಂಶ ದೊರೆಯುವುದಿಲ್ಲ. ದೇಹಕ್ಕೆ ಪೌಷ್ಟಿಕಾಂಶ ಸಿಗದೆ ಹೋದಾಗ ಮತ್ತೆ ಮತ್ತೆ ಏನನ್ನಾದರೂ ತಿನ್ನಬೇಕು ಅನಿಸುತ್ತಿರುತ್ತದೆ. ಆಗ ಸ್ನಾಕ್ಸ್ ಮೊರೆ ಹೋಗಬೇಕಾಗುತ್ತದೆ . ಅಂದರೆ ಜಂಕ್ ಫುಡ್‌ಗಾಗಿ (Junk food) ಹಂಬಲ ಹೆಚ್ಚುತ್ತದೆ. ಹಂಬಲ ಎಂದು ಜಂಕ್ ಫುಡ್ ತಿಂದರೆ ಮತ್ತೆ ಸಮಸ್ಯೆಗಳು ಹೆಚ್ಚುತ್ತವೆ.
ಇದನ್ನೂ ಓದಿ : Onion Peel Benefits: ಈರುಳ್ಳಿ ಸಿಪ್ಪೆಯ ಈ ಉಪಯೋಗಗಳ ಬಗ್ಗೆ ತಿಳಿದರೆ ನೀವು ಎಂದಿಗೂ ಅದನ್ನು ಎಸೆಯುವುದಿಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ