ಈ ಆರೋಗ್ಯ ಸಮಸ್ಯೆಗಳಿದ್ದರೆ ಮರೆತೂ ಸಹ ಬೀಟ್ರೂಟ್ ಸೇವಿಸಬೇಡಿ
Beetroot Side Effects: ಹಣ್ಣು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಆರೋಗ್ಯ ಸಮಸ್ಯೆ ಇರುವವರು ತಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು, ಯಾವುದರಿಂದ ದೂರ ಉಳಿಯಬೇಕು ಎಂಬುದನ್ನು ತಿಳಿದಿರುವುದು ಅಗತ್ಯ.
Beetroot Side Effects: ಬೀಟ್ರೂಟ್ ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಅನುಮಾನವೇ ಇಲ್ಲ. ಇದರಲ್ಲಿ ವಿಟಮಿನ್-ಬಿ, ವಿಟಮಿನ್-ಸಿ, ಫಾಸ್ಫರಸ್, ಕ್ಯಾಲ್ಸಿಯಂ, ಪ್ರೊಟೀನ್, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಬೀಟ್ರೂಟ್ ಸೇವನೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಹಾಗಿದ್ದರೆ, ಯಾವ ಆರೋಗ್ಯ ಸಮಸ್ಯೆ ಇರುವವರಿಗೆ ಬೀಟ್ರೂಟ್ ಸೇವನೆ ಹಾನಿಕಾರಕವಾಗಿದೆ. ಇದರ ಅನಾನುಕೂಲಗಳೇನು ಎಂದು ತಿಳಿಯೋಣ...
ನಿಮಗೂ ಈ ಆರೋಗ್ಯ ಸಮಸ್ಯೆಗಳಿವೆಯೇ? ಹಾಗಿದ್ದರೆ ಅಪ್ಪಿತಪ್ಪಿಯೂ ಬೀಟ್ರೂಟ್ ಸೇವಿಸಬೇಡಿ
ಮಧುಮೇಹ:
ಮಧುಮೇಹಿಗಳಿಗೆ ಬೀಟ್ರೂಟ್ ಅಪಾಯಕಾರಿ. ವಾಸ್ತವವಾಗಿ, ಬೀಟ್ರೂಟ್ ನಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ಅಧಿಕವಾಗಿದ್ದು, ಫೈಬರ್ ತುಂಬಾ ಕಡಿಮೆ ಇದೆ. ಹಾಗಾಗಿ, ಮಧುಮೇಹಿಗಳು ಬೀಟ್ರೂಟ್ ಸೇವಿಸುವುದರಿಂದ ಅದು ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು.
ಇದನ್ನೂ ಓದಿ- ನಿಮ್ಮ ಲಿಪ್‌ಸ್ಟಿಕ್ ದೀರ್ಘಕಾಲದವರೆಗೆ ಉಳಿಯಲು ಈ ಟಿಪ್ಸ್ ಅನುಸರಿಸಿ
ಲೋ ಬಿಪಿ:
ಬೀಟ್ರೂಟ್ನಲ್ಲಿ ನೈಟ್ರೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ, ಇದು ರಕ್ತವನ್ನು ತೆಳುಗೊಳಿಸುತ್ತದೆ, ಇದರಿಂದಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಹಾಗಾಗಿ, ಲೋ ಬಿಪಿ ಅಥವಾ ಕಡಿಮೆ ರಕ್ತದೊತ್ತಡ ಇರುವವರು ಬೀಟ್ರೂಟ್ ಸೇವನೆಯನ್ನು ತಪ್ಪಿಸುವುದು ಒಳಿತು ಎಂದು ಹೇಳಲಾಗುತ್ತದೆ.
ಕಿಡ್ನಿ ಸ್ಟೋನ್:
ಬೀಟ್ರೂಟ್ ನಲ್ಲಿರುವ ಆಕ್ಸಲೇಟ್‌ಗಳು ಕಲ್ಲುಗಳು ಅಥವಾ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ, ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಬೀಟ್ರೂಟ್ ಸೇವನೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
ಇದನ್ನೂ ಓದಿ- ಶಿಲ್ಪಾ ಶೆಟ್ಟಿಯಂತಹ ಸ್ಲಿಮ್ ಫಿಗರ್ ಪಡೆಯಲು ನಿಮ್ಮ ಡಯಟ್ನಲ್ಲಿರಲಿ ಈ ಆಹಾರಗಳು
ಯಕೃತ್ ಸಮಸ್ಯೆ ಇರುವವರು:
ಬೀಟ್‌ರೂಟ್‌ನಲ್ಲಿರುವ ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳು ಯಕೃತ್ತಿನಲ್ಲಿ ಸಂಗ್ರಹವಾಗಬಹುದು. ಆದರೆ, ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಇರುವವರಿಗೆ ಇದು ಸಮಸ್ಯೆಯನ್ನು ಹೆಚ್ಚಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.