Avoid Arhar Dal In These Diseses : ತೊಗರಿ ಬೇಳೆ ತಿನ್ನುವುದು  ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ದ್ವಿದಳ ಧಾನ್ಯಗಳಲ್ಲಿ ಹೆಚ್ಚಿನ ಪ್ರೋಟೀನ್ ಕಂಡುಬರುತ್ತದೆ. ಇದಲ್ಲದೆ, ಫೋಲಿಕ್ ಆಮ್ಲ, ಕಬ್ಬಿಣ, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳು ಸಹ ಇದರಲ್ಲಿ ಕಂಡುಬರುತ್ತವೆ.  ತೊಗರಿ ಬೇಳೆ ಸೇವನೆ ಕೂಡಾ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಇದರ ಸೇವನೆಯು ಅಪಾಯಕಾರಿಯಾಗಿ ಪರಿಣಮಿಸಬಹುದು. ಕೆಲವೊಂದು ಆರೋಗ್ಯ ಸಮಸ್ಯೆಗಳಿದ್ದಾಗ, ತೊಗರಿ ಬೇಳೆಯನ್ನು ಸೇವಿಸಬಾರದು. 


COMMERCIAL BREAK
SCROLL TO CONTINUE READING

ಯೂರಿಕ್ ಆಸಿಡ್ :
ಯೂರಿಕ್ ಆಸಿಡ್ ಒಂದು ಟಾಕ್ಸಿನ್ ಆಗಿದ್ದು, ಇದು ಪ್ಯೂರಿನ್ ಆಹಾರವನ್ನು ಸೇವಿಸುವುದರಿಂದ ಹೆಚ್ಚು ಉತ್ಪತ್ತಿಯಾಗುತ್ತದೆ. ಯೂರಿಕ್ ಆಸಿಡ್ ಸಮಸ್ಯೆ ಇರುವವರು ಇದನ್ನು ಸೇವಿಸಬಾರದು. ಯೂರಿಕ್ ಆಸಿಡ್ ಸಮಸ್ಯೆ ಇದ್ದಾಗ ತೊಗರಿಬೇಳೆ ತಿನ್ನುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ತೊಗರಿಬೇಳೆಅತಿ ಹೆಚ್ಚು ಪ್ರೋಟೀನ್ ಹೊಂದಿರುತ್ತದೆ. ಇದರಿಂದಾಗಿ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ. 


ಇದನ್ನೂ ಓದಿ : Garlic Water Benefits: ಬೆಳ್ಳುಳ್ಳಿ ಬಿಸಿ ನೀರು ಸೇವನೆಯಿಂದಾಗುವ ಈ ಲಾಭಗಳು ನಿಮಗೂ ತಿಳಿದಿರಲಿ


ಅಲರ್ಜಿ : 
ತೊಗರಿಬೇಳೆ ಸೇವಿಸಿದಾಗ ಕೆಲವರ ಜೀರ್ಣಕ್ರಿಯೆ ಕೆಡುತ್ತದೆ. ರಾತ್ರಿ ವೇಳೆ ತೊಗರಿಬೇಳೆ ತಿನ್ನುವುದರಿಂದ ಜೀರ್ಣಕ್ರಿಯೆ ಹಾಳಾಗುತ್ತದೆ. ತೊಗರಿಬೇಳೆ ತಿಂದ ನಂತರ ಅಲರ್ಜಿಯಾದಂತೆ ಭಾಸವಾಗುತ್ತಿದ್ದರೆ, ತೊಗರಿಬೇಳೆ ಸೇವಿಸುವುದನ್ನು ನಿಲ್ಲಿಸಿ. .


ಮೂತ್ರಪಿಂಡದ ಕಾಯಿಲೆ  :
ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರು ತೊಗರಿಬೇಳೆ ತಿನ್ನಬಾರದು. ತೊಗರಿಬೇಳೆಯಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇರುತದೆ. ಇದು ಮೂತ್ರಪಿಂಡದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದನ್ನೂ ಸೇವಿಸುವುದರಿಂದ ಮೂತ್ರಪಿಂಡದಲ್ಲಿನ ಕಲ್ಲಿನ ಗಾತ್ರ ಹೆಚ್ಚಾಗಬಹುದು. 


ಇದನ್ನೂ ಓದಿ : ನಿರಂತರವಾಗಿ ಬರುತ್ತಿರುವ ಕೆಮ್ಮು ಈ ರೋಗಗಳ ಲಕ್ಷಣವೂ ಆಗಿರಬಹುದು .!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.