Who should not eat watermelon : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಹೇರಳವಾಗಿ ಸಿಗುತ್ತದೆ. ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಇದು ನಿಮ್ಮ ದೇಹದಲ್ಲಿನ ನಿರ್ಜಲೀಕರಣದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೇ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ನಾರಿನಂಶ ಮತ್ತು ವಿಟಮಿನ್ ಸಿ ಯಂತಹ ಹಲವಾರು ಅಗತ್ಯ ಪೋಷಕಾಂಶಗಳು ಸಿಗುತ್ತವೆ ಆದರೆ ಕೆಲವರಿಗೆ ಗುಣಗಳ ಆಗರವಾಗಿರುವ ಕಲ್ಲಂಗಡಿ ತಿಂದರೂ ಆಗದು.ಇವರು ಕಲ್ಲಂಗಡಿ ತಿನ್ನಬಾರದು. 


COMMERCIAL BREAK
SCROLL TO CONTINUE READING

ಯಕೃತ್ತಿನ ಉರಿಯೂತ : 
ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಯಕೃತ್ತಿನಲ್ಲಿ ಊತ ಉಂಟಾಗುತ್ತದೆ. ಆಲ್ಕೋಹಾಲ್ ಸೇವಿಸುವವರಾದರೆ ಯಕೃತ್ತು ದುರ್ಬಲಗೊಳ್ಳುತ್ತದೆ.ಇಂತಹ ಪರಿಸ್ಥಿತಿಯಲ್ಲಿ ನಾರಿನಂಶವಿರುವ ಕಲ್ಲಂಗಡಿಯನ್ನು ಸೇವಿಸುವುದರಿಂದ ಯಕೃತ್ತಿನ ಸಮಸ್ಯೆಗಳು ಹೆಚ್ಚಾಗುತ್ತವೆ.ಕಲ್ಲಂಗಡಿ ಹೆಚ್ಚಿನ ಪ್ರಮಾಣದ ಲೈಕೋಪೀನ್ ಅನ್ನು ಹೊಂದಿದ್ದು, ಇದು ಯಕೃತ್ತಿನ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ  : ಬೆಳ್ಳುಳ್ಳಿ ತಿನ್ನಿ!! ಜೀರ್ಣಕ್ರಿಯೆ, ಕೊಲೆಸ್ಟ್ರಾಲ್, ಅಸ್ತಮಾ... ಹೀಗೆ ಹಲವು ಸಮಸ್ಯೆಗಳಿಗೆ ಒಂದೇ ಪರಿಹಾರ


ಅಲರ್ಜಿ ಉಂಟುಮಾಡಬಹುದು :
ಕೆಲವರಿಗೆ ಕಲ್ಲಂಗಡಿ ತಿಂದ ನಂತರ ಅಲರ್ಜಿ ಉಂಟಾಗುತ್ತದೆ.ಕಲ್ಲಂಗಡಿ ತಿಂದರೆ,  ಊತ ಮತ್ತು ಉಸಿರಾಟದ ತೊಂದರೆ, ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ತೀವ್ರತರವಾದ ಪ್ರಕರಣಗಳಲ್ಲಿ,ಅಲರ್ಜಿಯ ಪ್ರತಿಕ್ರಿಯೆಯು ಅನಾಫಿಲ್ಯಾಕ್ಸಿಸ್ ಗೆ ಕಾರಣವಾಗಬಹುದು. ಇದು ತುಂಬಾ ಗಂಭೀರವಾದ ಸ್ಥಿತಿಯಾಗಿದೆ.


ರಕ್ತದಲ್ಲಿನ ಸಕ್ಕರೆ :
ಮಧುಮೇಹ ರೋಗಿಗಳು ಕಲ್ಲಂಗಡಿ ಹಣ್ಣನ್ನು ತಿನ್ನಬಾರದು. ಕಲ್ಲಂಗಡಿ ನೈಸರ್ಗಿಕ ಸಕ್ಕರೆ ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ.ಹೀಗಾಗಿ   ಮಧುಮೇಹದಿಂದ ಬಳಲುತ್ತಿರುವವರು ಕಲ್ಲಂಗಡಿ ಸೇವನೆಯನ್ನು ಮಿತಿಗೊಳಿಸಬಹುದು.ಅದರಲ್ಲಿಯೂ ಕಲ್ಲಂಗಡಿ ಜ್ಯೂಸ್ ಸೇವಿಸಲೇ ಬಾರದು. 


ಇದನ್ನೂ ಓದಿ : ಈ ರೋಗಲಕ್ಷಣಗಳು ದೇಹದಲ್ಲಿ ಫೈಬರ್ ಕೊರತೆಯ ಸೂಚನೆಯೂ ಆಗಿರಬಹುದು!


ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು :
ಕಲ್ಲಂಗಡಿ ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ. ಇದು ದೇಹವನ್ನು ಆರೋಗ್ಯಕರವಾಗಿಡುವಲ್ಲಿ ಅನೇಕ ಪಾತ್ರಗಳನ್ನು ವಹಿಸುತ್ತದೆ. ಇದು ನಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.  ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ನಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಆದರೂ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಅನಿಯಮಿತ ಹೃದಯ ಬಡಿತ, ದುರ್ಬಲ ನಾಡಿ ಬಡಿತ ಮುಂತಾದ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು.


ಜೀರ್ಣಕಾರಿ ಸಮಸ್ಯೆ : 
ಕಲ್ಲಂಗಡಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದು ಮಲಬದ್ಧತೆ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.ಆದರೆ ಕಲ್ಲಂಗಡಿಯಲ್ಲಿ ಲೈಕೋಪೀನ್ ಕೂಡಾ ಇರುತ್ತದೆ. ಇದನ್ನು ಪ್ರತಿದಿನ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ವಾಕರಿಕೆ, ಅತಿಸಾರ, ಎದೆಯುರಿಯಂಥಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.