ಓಮಿಕ್ರಾನ್ ಸೋಂಕಿನ ಲಕ್ಷಣಗಳಿದ್ದರೆ ಈ ವಸ್ತುಗಳನ್ನು ಸೇವಿಸುವ ಮೂಲಕ ಪರಿಹಾರ ಪಡೆಯಬಹುದು
ಕೊರೊನಾ ವೈರಸ್ ಸುಮಾರು ಎರಡು ವರ್ಷಗಳಿಂದ ಜಗತ್ತನ್ನು ಕಾಡುತ್ತಿದೆ. ಪ್ರಸ್ತುತ COVID-19ನ ಹೊಸ ರೂಪಾಂತರವಾದ ಓಮಿಕ್ರಾನ್ ರೂಪಾಂತರವು ಮತ್ತೆ ಆತಂಕ ಉಂಟು ಮಾಡಿದೆ.
ನವದೆಹಲಿ : ಕೊರೊನಾ ವೈರಸ್ (Coronavirus) ಸುಮಾರು ಎರಡು ವರ್ಷಗಳಿಂದ ಜಗತ್ತನ್ನು ಕಾಡುತ್ತಿದೆ. ಪ್ರಸ್ತುತ COVID-19ನ ಹೊಸ ರೂಪಾಂತರವಾದ ಓಮಿಕ್ರಾನ್ ರೂಪಾಂತರವು ಮತ್ತೆ ಆತಂಕ ಉಂಟು ಮಾಡಿದೆ. ಈ ರೂಪಾಂತರವು ಹೊರಬಂದ ದಿನದಿಂದ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಅಲ್ಲದೆ, ಒಮಿಕ್ರಾನ್ (Omicron) ಸೋಂಕಿತರಲ್ಲಿ ದಿನಕ್ಕೊಂದು ಲಕ್ಷಣಗಳು ಕಂಡು ಬರುತ್ತಿವೆ.
ಮೊದಲಿನಂತೆ, ಕೆಮ್ಮು, ಜ್ವರ (fever) ಅಥವಾ ಆಯಾಸವು ಓಮಿಕ್ರಾನ್ ಮಾತ್ರ ಲಕ್ಷಣಗಳಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಓಮಿಕ್ರಾನ್ (Omicron) ರೋಗಿಗಳಲ್ಲಿ ಅತಿಸಾರದ ಲಕ್ಷಣಗಳು ಕೂಡಾ ಕಂಡುಬರುತ್ತಿವೆ.
ಇದನ್ನೂ ಓದಿ : Men's Health Tips : ಪುರುಷರ ಈ 5 ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ ಲವಂಗದ ಎಣ್ಣೆ!
ಒಮಿಕ್ರಾನ್ ದಾಳಿಗೊಳಗಾದ ತಕ್ಷಣ ಅತಿಸಾರವು ಸಂಭವಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ . ನಿಮಗೆ ಹೊಟ್ಟೆನೋವು ಕಾಣಿಸಿಕೊಂಡು ಅತಿಸಾರ ಇದ್ದರೆ, ನೀವು ಓಮಿಗ್ರಾನ್ (omicron) ಸೋಂಕಿನಿಂದ ಬಳಲುತ್ತಿರಬಹುದು ಎಂಬುದನ್ನು ನೆನಪಿನಲ್ಲಿಡಿ. ಒಂದು ವೇಳೆ, ನೀವು ಒಮಿಕ್ರಾನ್ ಸೋಂಕಿಗೆ ಒಳಗಾಗಿದ್ದು, ಅತಿಸಾರ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಪದಾರ್ಥಗಳನ್ನು ಸೇವಿಸಬಹುದು. ಇದರಿಂದ ಪರಿಹಾರವನ್ನು ಕೂಡಾ ಕಂಡುಕೊಳ್ಳಬಹುದು.
ಚೀನೀಕಾಯಿ ಅಥವಾ ಸಿಹಿ ಕುಂಬಳ :
ಸಿಹಿ ಕುಂಬಳಕಾಯಿ (Pumpkin) ಅಥವಾ ಚೀನೀಕಾಯಿ ಅತಿಸಾರಕ್ಕೆ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ಫೈಬರ್ ಮತ್ತು ನೀರಿನ ಅಂಶ ಅಧಿಕವಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಅಲ್ಲದೆ, ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.
ಇದನ್ನೂ ಓದಿ : ಬೆಳಿಗ್ಗೆ ಎದ್ದ ಕೂಡಲೇ ಈ 4 ಎಲೆಗಳನ್ನು ತಿನ್ನುವುದು ಶುಗರ್ ರೋಗಿಗಳಿಗೆ ಸಹಾಯಕ
ಹೆಚ್ಚು ನೀರು ಕುಡಿಯಿರಿ :
ನೀವು ಅತಿಸಾರವನ್ನು ಹೊಂದಿರುವಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ಸಾಮಾನ್ಯಕ್ಕಿಂತ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಬೇಕು. ಮುಖ್ಯವಾಗಿ, ಸಾಕಷ್ಟು ಪ್ರಮಾಣದಲ್ಲಿ ನೀರು (water) ಕುಡಿಯಬೇಕು. ಹೀಗೆ ಮಾಡಿದರೆ ದೇಹದಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ.
ಹುರಿದ ಜೀರಿಗೆ:
ಅತಿಸಾರದಿಂದ ಬಳಲುತ್ತಿದ್ದರೆ, ಹುರಿದ ಜೀರಿಗೆಯನ್ನ (fried jeera) ಸೇವಿಸಬಹುದು. ಇದನ್ನೂ ಬ್ಲಾಕ್ ಸಾಲ್ಟ್ ನೊಂದಿಗೆ ಸೇವಿಸಬಹುದು. ಅಥವಾ ಕತ್ತರಿಸಿದ ಹಣ್ಣಿನ ಮೇಲೆ ಇವುಗಳನ್ನು ಹಾಕಿ ಸೇವಿಸಬಹುದು.
ಇದನ್ನೂ ಓದಿ : Almond Side Effects : ನೀವು ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ ತಿನ್ನಬೇಡಿ 'ಬಾದಾಮಿ' : ತಿಂದರೆ ಅಪಾಯ ತಪ್ಪಿದಲ್ಲ
ಒಣ ಶುಂಠಿ:
ಒಣ ಶುಂಠಿ (Ginger) ಅತಿಸಾರದ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿದೆ . ಹಾಗಾಗಿ 3 ಗ್ರಾಂ ಒಣ ಶುಂಠಿ ಮತ್ತು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿದರೆ ಭೇದಿ ಸಮಸ್ಯೆ ದೂರವಾಗುತ್ತದೆ. ಆದರೆ ನೆನಪಿರಲಿ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದರೆ ಖಂಡಿತವಾಗಿಯೂ ತಡ ಮಾಡದೆ ವೈದ್ಯರ ಸಲಹೆ ಪದೆದುಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿ