Give Up Coffee-Tea For a Month: ಪ್ರಪಂಚದಾದ್ಯಂತದ ಅನೇಕರು ತಮ್ಮ ದಿನಚರಿಯನ್ನು ಕಾಫಿ ಅಥವಾ ಟೀಯಿಂದ ಪ್ರಾರಂಭಿಸುತ್ತಾರೆ. ಇವುಗಳನ್ನು ಇಷ್ಟಪಡದ ಜನರಿರುವುದು ತೀರಾ ಕಡಿಮೆ. ಹೀಗಿರುವಾಗ ಅನೇಕರು ದಿನಪೂರ್ತಿ ಕಾಫಿ ಟೀ ಕುಡಿಯಲು ಇಷ್ಟಪಡುತ್ತಾರೆ. ಕೆಲವೊಂದಿಷ್ಟು ಜನ ತಮ್ಮ ಮನಸ್ಸನ್ನು ಉಲ್ಲಾಸಗೊಳಿಸಲು ಕುಡಿಯುತ್ತಾರೆ. ಇನ್ನೂ ಕೆಲವರು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂದು ಸೇವಿಸುತ್ತಾರೆ. ಆದರೆ ಚಹಾ-ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಇದನ್ನೂ ಓದಿ: Healthy Diet : ಮಧುಮೇಹಿಗಳ ಆರೋಗ್ಯಕ್ಕೆ ಬೆಲ್ಲ - ಜೇನುತುಪ್ಪ ಯಾವುದು ಉತ್ತಮ? ಇಲ್ಲಿದೆ ನೋಡಿ


ಇವುಗಳಲ್ಲಿರುವ ಕೆಫೀನ್ ದೇಹಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವುಗಳ ಬಗ್ಗೆ ದೃಢವಾಗಿ ತಿಳಿದುಕೊಳ್ಳಲು ಒಂದು ತಿಂಗಳವರೆಗೆ ಕಾಫಿ ಅಥವಾ ಟೀ ಸೇವನೆಯನ್ನು ನಿಲ್ಲಿಸಿ. ಹಾಗೆ ಮಾಡಿದರೆ, ನಿಮ್ಮ ಆರೋಗ್ಯದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ.


1. ರಕ್ತದೊತ್ತಡದ ನಿಯಂತ್ರಣ: ಚಹಾ ಮತ್ತು ಕಾಫಿ ನಮಗೆ ಆಯಾಸದಿಂದ ಪರಿಹಾರವನ್ನು ನೀಡುತ್ತದೆ ನಿಜ. ಆದರೆ ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಇವುಗಳಲ್ಲಿ ಕೆಫೀನ್ ಅಂಶವಿರುವುದರಿಂದ ಒಂದು ತಿಂಗಳ ಕಾಲ ಟೀ, ಕಾಫಿ ಕುಡಿಯುವುದನ್ನು ನಿಲ್ಲಿಸಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.


2. ಉತ್ತಮ ನಿದ್ರೆ: ಚಹಾವನ್ನು ಬಿಡುವುದು ನಿಮ್ಮ ನಿದ್ರೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ನೀವು ಎಷ್ಟು ಪ್ರಮಾಣದಲ್ಲಿ ನಿದ್ದೆ ಮಾಡುತ್ತಿದ್ದಿರಿ, ಈಗೆಷ್ಟು ಪ್ರಮಾಣದಲ್ಲಿ ಮಾಡುತ್ತಿದ್ದೀರಿ ಎಂದು ನೀವೇ ಊಹಿಸಿಕೊಳ್ಳಿ, ಬದುಕು ಬದಲಾದಂತೆ ಜೀವನಶೈಲಿಯೂ ಬದಲಾಗುತ್ತದೆ. ಹೀಗಿರುವಾಗ ನಾವು ಹೆಚ್ಚು ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಆಯಾಸ, ಒತ್ತಡ, ಆಹಾರ ಪದ್ಧತಿಗಳು ಇವುಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಉತ್ತಮ ನಿದ್ದೆ ಮಾಡಲು ಕಾಫಿ ಅಥವಾ ಟೀಯನ್ನು ಬಿಡಬೇಕು.


3. ಹಲ್ಲುಗಳಲ್ಲಿ ಬಿಳುಪು ಬರುವುದು: ಚಹಾ ಮತ್ತು ಕಾಫಿಯಂತಹ ಬಿಸಿ ಪದಾರ್ಥಗಳು ನಮ್ಮ ಹಲ್ಲುಗಳಿಗೆ ತುಂಬಾ ಹಾನಿಕಾರಕವಾಗಿದೆ, ಇದು ಅವುಗಳ ಬಣ್ಣವನ್ನು ತೆಗೆದುಹಾಕುವುದು ಮಾತ್ರವಲ್ಲದೆ ದುರ್ಬಲಗೊಳಿಸುತ್ತವೆ. ನೀವು ಒಂದು ತಿಂಗಳು ಚಹಾ ಮತ್ತು ಕಾಫಿ ಕುಡಿಯುವುದನ್ನು ನಿಲ್ಲಿಸಿದರೆ ಹಲ್ಲುಗಳಿಗೆ ಆಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳಬಹುದು. ಟೀ-ಕಾಫಿ ಸ್ವಲ್ಪ ಆಮ್ಲೀಯವಾಗಿದ್ದು ಇದು ಹಲ್ಲುಗಳ ದಂತಕವಚವನ್ನು ಹಾನಿಗೊಳಿಸುತ್ತದೆ.


ಇದನ್ನೂ ಓದಿ: Weight Loss Tips: ತೂಕ ಹೆಚ್ಚಳದಿಂದ ನೀವು ಕಂಗಾಲಾಗಿದ್ದೀರಾ? ಈ ರೀತಿ ಜೇನುತುಪ್ಪ ಸೇವಿಸಿ


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.