Eye Care Tips for Healthy Vision: ಕೆಟ್ಟ ಜೀವನಶೈಲಿ, ಅನಾರೋಗ್ಯಕರ ಆಹಾರ ಯೋಜನೆ, ಅತಿಯಾದ ಸ್ಕ್ರೀನ್‌ ಟೈಮ್ ಮತ್ತು ಒತ್ತಡದಿಂದ ಜನರ ದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ದುರ್ಬಲ ದೃಷ್ಟಿಯಿಂದ ಹೆಚ್ಚಿನ ಜನರು ಕನ್ನಡಕವನ್ನು ಧರಿಸುವಂತಾಗಿದೆ. ಕೆಲವರು ಮಸೂರಗಳನ್ನು ಸಹ ಬಳಸುತ್ತಾರೆ. ನಿಮ್ಮ ದೃಷ್ಟಿಯನ್ನು ಸುಧಾರಿಸಲು ಮತ್ತು ಕನ್ನಡಕ ಅಥವಾ ಮಸೂರಗಳನ್ನು ಧರಿಸುವುದರಿಂದ ಮುಕ್ತಿ ಪಡೆಯಲು ಬಯಸುತ್ತೀರಾ? ಹಾಗಿದ್ದಲ್ಲಿ ನೀವು ಕೆಲವು ನೈಸರ್ಗಿಕ ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಆಯುರ್ವೇದದ ಪರಿಹಾರಗಳನ್ನು ಪಾಲಿಸಿದರೆ ಸಾಕು ನೀವು ಇಂದೇ ಕನ್ನಡಕವನ್ನು ಕಿತ್ತು ಬಿಸಾಕುತ್ತೀರಿ.


COMMERCIAL BREAK
SCROLL TO CONTINUE READING

ಪರಿಣಾಮಕಾರಿ ಆಯುರ್ವೇದ ಪರಿಹಾರಗಳು


ಆಚಾರ್ಯ ಬಾಲಕೃಷ್ಣ ಅವರ ಪ್ರಕಾರ, ಬೆಳಗ್ಗೆ ಎದ್ದ ತಕ್ಷಣ ಬಾಯಿಯಲ್ಲಿ ನೀರು ತುಂಬಿಕೊಂಡು ಮುಖಕ್ಕೆ ನೀರು ಚಿಮುಕಿಸಿ. ಸ್ಪ್ಲಾಶ್ ಮಾಡುವಾಗ ನಿಮ್ಮ ಕಣ್ಣುಗಳು ವಿಶಾಲವಾಗಿ ತೆರೆದಿರಬೇಕು ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ದೃಷ್ಟಿ ಸುಧಾರಿಸಲು, ಪ್ರತಿದಿನ ಒಂದರಿಂದ ಎರಡು ನಿಮಿಷಗಳ ಕಾಲ ಈ ವಿಧಾನವನ್ನು ಅನುಸರಿಸಿ.


ಇದನ್ನೂ ಓದಿ: ಇದು ಯಾವ ಹಣ್ಣು ಗೊತ್ತೆ..? ಈ ರೋಗಗಳಿಂದ ಬಳಲುತ್ತಿರುವವರ ತಪ್ಪದೇ ತಿನ್ನಿ..


ಪ್ರಾಣಾಯಾಮವು ಪ್ರಯೋಜನಕಾರಿ  


ಪ್ರಾಣಾಯಾಮವು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ನಿಜವಾಗಿಯೂ ಕನ್ನಡಕಕ್ಕೆ ವಿದಾಯ ಹೇಳಲು ಬಯಸಿದರೆ, ಪ್ರತಿದಿನ ಅರ್ಧ ಘಂಟೆಯವರೆಗೆ ನಿಯಮಿತವಾಗಿ ಪ್ರಾಣಾಯಾಮವನ್ನು ಮಾಡಲು ಪ್ರಾರಂಭಿಸಿ. ನಿಮ್ಮ ದೈನಂದಿನ ದಿನಚರಿಯಲ್ಲಿ ಸೂರ್ಯ ನಮಸ್ಕಾರವನ್ನು ಸೇರಿಸುವ ಮೂಲಕ ನಿಮ್ಮ ದೃಷ್ಟಿಯನ್ನು ಸುಧಾರಿಸಬಹುದು. ಇದಲ್ಲದೆ ತ್ರಿಫಲವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ನಿಮ್ಮ ದೃಷ್ಟಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.


ನಿಮ್ಮ ಜೀವನಶೈಲಿಯನ್ನು ಸುಧಾರಿಸಿ


ನಿಮ್ಮ ಕಣ್ಣಿನ ಆರೋಗ್ಯವನ್ನು ಬಲಪಡಿಸಲು, ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ನೀವು ಗಮನ ಹರಿಸಬೇಕು. ಸಮಯಕ್ಕೆ ಸರಿಯಾಗಿ ಮಲಗುವುದು, ಸಮಯಕ್ಕೆ ಏಳುವುದು, ಹೆಚ್ಚು ಹೊತ್ತು ಮೊಬೈಲ್‌ ನೋಡುವುದನ್ನು ಕಡಿಮೆ ಮಾಡುವುದು ಮತ್ತು ಒತ್ತಡವನ್ನು ಕಡಿಮೆ ಮಾಡುವುದು ಮುಂತಾದ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ, ನೀವು ನಿಮ್ಮ ದೃಷ್ಟಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು.


ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಬಾಳೆಹಣ್ಣು ತಿನ್ನಿ : ದೇಹದಲ್ಲಿ ಈ 7 ಅದ್ಭುತಗಳು ಜರುಗುತ್ತವೆ..!


(ಈ ಲೇಖನವನ್ನು ಸಾಮಾನ್ಯ ಮಾಹಿತಿಗಾಗಿ ನೀಡಲಾಗಿದೆ. ಇಲ್ಲಿನ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ನೀವು ವೈದ್ಯರನ್ನು ಸಂಪರ್ಕಿಸಬೇಕು.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.