ಹೆಚ್ಚು ಹೊತ್ತು ಟಿವಿ ನೋಡಿದರೆ ಎಚ್ಚರ!
`ಟಿವಿ ನೋಡುವುದು ಕೆಟ್ಟದ್ದಲ್ಲ, ಆದರೆ ಅತಿಯಾದ ಟಿವಿ ವೀಕ್ಷಣೆ ಮತ್ತು ವೀಕ್ಷಣೆಯ ಸಮಯದಲ್ಲಿ ಕುರುಕಲು ತಿನಿಸುಗಳನ್ನು ತಿನ್ನುತ್ತಾ ದೀರ್ಘಕಾಲದವರೆಗೆ ಟಿವಿ ಮುಂದೆ ಕುಳಿತುಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವುದು ಕಟ್ಟಿಟ್ಟ ಬುತ್ತಿ``.
ಇತ್ತೀಚಿನ ದಿನಗಳಲ್ಲಿ ಟಿವಿ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆಯೇ ಇದರಿಂದ ಆಗುವ ದುಷ್ಪರಿಣಾಮಗಳೂ ಕಡಿಮೆಯೇನಿಲ್ಲ. ಸಂಶೋಧನೆಗಳ ಪ್ರಕಾರ ಹೆಚ್ಚು ಸಮಯ ಟಿವಿ ನೋಡುವುದರಿಂದ ಸಾಮಾನ್ಯ ಸ್ಥಿತಿಗಿಂತ ದುಪ್ಪಟ್ಟು ರಕ್ತ ಹೆಪ್ಪುಗಟ್ಟಲಿದೆ ಎಂಬುದು ತಿಳಿದುಬಂದಿದೆ.
ಕಾಲು, ಭುಜ, ಪೆಲ್ವಿಸ್ ಮತ್ತು ಶ್ವಾಸಕೋಶದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಅಪಾಯ ಹೆಚ್ಚಾಗಲಿದ್ದು ಇದನ್ನು ಥ್ರಂಬೋಬಾಂಬಲಿಸಮ್ ಅಥವಾ VTE ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಜನರು ತಮಗೆ ಶಿಫಾರಸ್ಸು ಮಾಡಲಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೂ ಇದು ದೂರದರ್ಶನ ವೀಕ್ಷಿಸುವ ಸಮಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.
"ಟಿವಿ ನೋಡುವುದು ಕೆಟ್ಟದ್ದಲ್ಲ, ಆದರೆ ಅತಿಯಾದ ಟಿವಿ ವೀಕ್ಷಣೆ ಮತ್ತು ವೀಕ್ಷಣೆಯ ಸಮಯದಲ್ಲಿ ಕುರುಕಲು ತಿನಿಸುಗಳನ್ನು ತಿನ್ನುತ್ತಾ ದೀರ್ಘಕಾಲದವರೆಗೆ ಟಿವಿ ಮುಂದೆ ಕುಳಿತುಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವುದು ಕಟ್ಟಿಟ್ಟ ಬುತ್ತಿ'' ಎಂದು ಬರ್ಲಿಂಗ್ಟನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮೇರಿ ಕುಶ್ಮನ್ ಹೇಳಿದ್ದಾರೆ.
ಈ ಕುರಿತ ಅಧ್ಯಯನಕ್ಕಾಗಿ, ಒಂದು ತಂಡವನ್ನು ರಚಿಸಿ ಮಧ್ಯ-ವಯಸ್ಸಿನ (45-64 ವರ್ಷಗಳು) 15,158 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
ಟಿವಿಯನ್ನು "ವಿರಳವಾಗಿ" ವೀಕ್ಷಿಸುವವರಿಗೆ ಹೋಲಿಸಿದರೆ "ದೀರ್ಘಕಾಲದ"ವರೆಗೆ ಟಿವಿ ನೋಡುವವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗುವ ಅಪಾಯವು 1.7 ಪಟ್ಟು ಹೆಚ್ಚಿರಲಿದೆ. ದೈಹಿಕ ಚಟುವಟಿಕೆಯ ಶಿಫಾರಸ್ಸು ಮಾರ್ಗಸೂಚಿಗಳನ್ನು ಪಾಲಿಸಿದ ಜನರಲ್ಲಿ "ವಿರಳವಾಗಿ" ಟಿವಿ ವೀಕ್ಷಿಸುತ್ತಿರುವವರಿಗೆ ಹೋಲಿಸಿದರೆ, "ದೀರ್ಘಕಾಲದ" ವರೆಗೆ ಟಿವಿ ನೋಡುವವರು 1.8 ಪಟ್ಟು ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ ಎಂಬುದನ್ನು ಸಂಶೋಧನೆ ತಿಳಿಸಿದೆ.
ಹಾಗಾಗಿ "ಉತ್ತಮವಾದ ಮತ್ತು ದೀರ್ಘಕಾಲಿಕ ಜೀವನಕ್ಕಾಗಿ ನಿಮ್ಮ ಪೂರ್ಣ ಸಮಯವನ್ನು ಹೇಗೆ ಬಳಸಿಕೊಳ್ಳಬೇಕೆಂಬುದರ ಬಗ್ಗೆ ನೀವೇ ಆಲೋಚಿಸಿ. ಟಿವಿ ವೀಕ್ಷಿಸುವ ಸಮಯದಲ್ಲಿ ನೀವು ನಿಮ್ಮನ್ನು ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ'' ಎಂಬ ಸಲಹೆಯನ್ನು ಪ್ರೊ.ಕುಶ್ಮನ್ ನೀಡಿದ್ದಾರೆ.
'ಕ್ಯಾಲಿಫೋರ್ನಿಯಾದ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ನ ಸೈಂಟಿಫಿಕ್ ಸೆಷನ್ಸ್' 2017ರಲ್ಲಿ ಈ ಫಲಿತಾಂಶಗಳನ್ನು ನೀಡಲಾಯಿತು. ಈ ಹಿಂದಿನ ಅಧ್ಯಯನಗಳ ಪ್ರಕಾರ ಸುಧೀರ್ಘವಾಗಿ ಟಿವಿ ವೀಕ್ಷಿಸುವುದರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಲಿದೆ ಎಂಬುದು ಸಾಬೀತಾಗಿತ್ತು. ಆದರೆ ಅತಿ ಹೆಚ್ಚು ಟಿವಿ ವೀಕ್ಷಣೆಯಿಂದ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಸಿರೆಯ ಥ್ರಂಬೋಬಾಂಬಲಿಸಂ ಹೆಚ್ಚು ಸಾಮಾನ್ಯವಾಗಿದೆಯಾದರೂ, ಅದು ಯಾವುದೇ ವಯಸ್ಸಿನವರಲ್ಲಿ ಕಾಣಿಸಿಕೊಳ್ಳಬಹುದು ಎಂದು ವರದಿ ತಿಳಿಸಿದೆ.