ಕ್ಯಾರೆಟ್ ಎಂದಿಗೂ ಬೇಡಿಕೆಯಲ್ಲೇ ಇರುವ ತರಕಾರಿ. ಪಲಾವ್, ಬಿಸಿಬೇಳೆ ಬಾತ್… ಹೀಗೆ ಹಲವಾರು ರುಚಿ ರುಚಿಯ ಖಾದ್ಯಗಳಿಗೂ ಕ್ಯಾರೆಟ್ ಬೇಕೇ ಬೇಕು. ಕೇವಲ ರುಚಿಗಷ್ಟೇ ಅಲ್ಲ, ಕ್ಯಾರೆಟ್ ದೇಹದ ಆರೋಗ್ಯದಲ್ಲೂ ಅತ್ಯಂತ  ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಕಾರಣಕ್ಕಾಗಿಯೇ ಅದಕ್ಕೆ ಎಲ್ಲಿಲ್ಲದ ಬೇಡಿಕೆ. 


COMMERCIAL BREAK
SCROLL TO CONTINUE READING

ಕ್ಯಾರೆಟ್‌ನಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧೀ ಸಮಸ್ಯೆಗಳನ್ನು ನಿವಾರಿಸಬಹುದಂತೆ! ಹೀಗೆ ಗೊತ್ತಾ? ಕ್ಯಾರೆಟ್ನಲ್ಲಿ ದೇಹದಲ್ಲಿನ ಅಧಿಕ ಬೊಜ್ಜು ಕರಗಿಸುವ ಗುಣ ಇರುವುದರಿಂದ ಇದು ಹೃದಯ ಸಂಬಂಧೀ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನಲಾಗಿದೆ. ಹಾಗಾಗಿ ದಿನನಿತ್ಯದ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎಲ್ಲಾ ರೋಗಗಳಿಗೂ ಮೂಲವಾಗಿರುವ ದೇಹದ ಅಧಿಕ ಬೊಜ್ಜನ್ನು ಕರಗಿಸಿಕೊಳ್ಳಬಹುದು. 


ಕ್ಯಾರೆಟ್ನಲ್ಲಿರುವ ಆರೋಗ್ಯವರ್ಧಕ ಗುಣಗಳು


1. ಕ್ಯಾರೆಟ್ನಲ್ಲಿನ ಕಾರೊಟಿನ್ ಅಂಶ ದೇಹವನ್ನು ಶುದ್ಧವಿರಿಸಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. 


2. ಕ್ಯಾರೆಟ್ ನಲ್ಲಿ 10 % ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ. ಇವೆಲ್ಲವೂ ಆರೋಗ್ಯಕ್ಕೆ ಹಿತವನ್ನುಂಟುಮಾಡುತ್ತದೆ.


3. ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆಗೂ ಇದು ಸಹಕಾರಿ. ಕ್ಯಾರೆಟ್ ನಲ್ಲಿ ಐಯೋಡಿನ್ ಮತ್ತು ಫೈಬರ್ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.


4. ಕ್ಯಾರೆಟ್ ಹಸಿಯಾಗಿ ಬೇಕಾದರೂ ತಿನ್ನಬಹುದು, ಇಲ್ಲವೆಂದರೆ ಸೂಪ್, ಸಲಾಡ್ ಮತ್ತು ಜ್ಯೂಸ್ ನಂತೆಯೂ ಸೇವಿಸಬಹುದು. ಕ್ಯಾರೆಟ್ ನಲ್ಲಿನ ಅಧಿಕ ವಿಟಮಿನ್ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತದೆ.


ನೈಸರ್ಗಿಕವಾಗಿ ತೂಕ ಇಳಿಸಲು ಸಲಹೆಗಳು 


1. ಬೆಳಗ್ಗೆ: ತಿಂಡಿಗೆ ಮೊದಲು ಕ್ಯಾರೆಟ್ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಸೇವಿಸಬಹುದು. ಜೊತೆಗೆ ಒಂದು ಮೊಟ್ಟೆಯನ್ನೂ ಸೇವಿಸಬಹುದು. 


2. ಮಧ್ಯಾಹ್ನ: ಟೋಸ್ಟೆಡ್ ಬ್ರೆಡ್ ಜೊತೆ ತುರಿದ ಕ್ಯಾರೆಟ್, ಟೊಮೆಟೊ, ಉಪ್ಪು ಮತ್ತು ಮೆಣಸನ್ನು ಬೆರೆಸಿ ತಿನ್ನಬಹುದು. 


3. ರಾತ್ರಿ: ರಾತ್ರಿ ಊಟಕ್ಕೆ ಕ್ಯಾರೆಟ್ ಮತ್ತು ಬೇಳೆ ಬೆರೆಸಿ ತಯಾರಿಸಿದ ಸೂಪನ್ನು ಸೇವಿಸಿ ಮತ್ತು ಒಂದು ಕಪ್ ಕೆಂಪಕ್ಕಿ ಅನ್ನವನ್ನು ಮೊಸರಿನ ಜೊತೆ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ. 


ಹೀಗೆ ಮಾಡುವುದರಿಂದ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಷವೂ ದೊರೆಯುತ್ತದೆಯಲ್ಲದೆ ದೇಹದ ತೂಕವೂ ಆರೋಗ್ಯಕರವಾಗಿ ಕಡಿಮೆಯಾಗುತ್ತದೆ.